ETV Bharat / state

ಬಳ್ಳಾರಿಯಲ್ಲಿ ಗಾಂಧಿ ತತ್ವ ಆಧಾರಿತ ಬೀದಿ ನಾಟಕ ಪ್ರದರ್ಶನ

ಬಳ್ಳಾರಿಯಲ್ಲಿ ಐಎಎಸ್ ವಿನ್ನಿಷರ್ಸ್ ತಂಡದ ಸದಸ್ಯರು ಗಾಂಧಿ ಕುರಿತ ಬೀದಿನಾಟಕ ಮಾಡಿ ಸಾರ್ವಜನಿಕರ ಗಮನ ಸೆಳೆದರು. ನಾಟಕದಲ್ಲಿ ಗಾಂಧಿಯ ಅಹಿಂಸಾ ತತ್ವ, ಮಹಿಳೆಯನ್ನು ಸಮಾಜ ಕಂಡ ರೀತಿ, ಶೌಚಾಲಯದ ಮಹತ್ವ, ಪ್ಲಾಸ್ಟಿಕ್​ ಸಮಸ್ಯೆ, ಸತಿಸಹಗಮನ ಪದ್ಧತಿ ಹೀಗೆ ಹಲವು ಮುಖ್ಯ ವಿಷಯಗಳ ಕುರಿತು ಜನಜಾಗೃತಿ ಮೂಡಿಸಲಾಯಿತು.

Gandi street drama program at ballary
author img

By

Published : Oct 3, 2019, 11:31 AM IST

ಬಳ್ಳಾರಿ: ಗಾಂಧಿ ಯಾರು.. ನಾನು ಗಾಂಧಿ, ನೀನು ಗಾಂಧಿ ಎಂಬ ಸಾಮೂಹಿಕ ನೃತ್ಯ ಪ್ರದರ್ಶನ ಮೂಲಕ ಐಎಎಸ್ ವಿನ್ನಿಷರ್ಸ್ ತಂಡದ ಸದಸ್ಯರು ನಗರದಲ್ಲಿ ಗಮನ ಸೆಳೆದರು.

ಐಎಎಸ್ ವಿನ್ನಿಷರ್ಸ್ ಸಂಸ್ಥೆಯ ಸಂಸ್ಥಾಪಕ ಆರ್.ವಿನಯ ಕುಮಾರ ಮಾತನಾಡಿ, ಗಾಂಧೀಜಿಯವರ ವಿಚಾರಧಾರೆಗಳು ಹಾಗೂ ಅವರ ನಡೆ, ನುಡಿಯ ಕುರಿತು ಸಾರ್ವಜನಿಕರಲ್ಲಿ ಈ ಬೀದಿ ನಾಟಕದ ಮೂಲಕ ಜಾಗೃತಿ ಮೂಡಿಸುವ ಮೂಲಕ 150ನೇ ಗಾಂಧಿ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸೋದೇ ಇದರ ಮೂಲ ಉದ್ದೇಶವಾಗಿದೆ ಎಂದರು. ಬೀದಿ ನಾಟಕದಲ್ಲಿ ಗೃಹಿಣಿಯ ಪಾತ್ರ ಮಾಡಿದ್ದ ಮೇಘ ಹಿರೇಮಠ ಮಾತನಾಡಿ, ಈ ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಾಕ್ಷರತೆಯ ಪ್ರಮಾಣ ಕಡಿಮೆಯಿದೆ. ಅದನ್ನು ಹೋಗಲಾಡಿಸಲು ಇಂಥ ಬೀದಿ ನಾಟಕ ಪ್ರದರ್ಶನವು ಬಹುಮುಖ್ಯ ಪಾತ್ರ ವಹಿಸುತ್ತದೆ ಎಂದರು.

ಗಣಿನಗರಿಯಲ್ಲಿ ಗಾಂಧಿತತ್ವ ಆಧಾರಿತ ಬೀದಿ ನಾಟಕ ಪ್ರದರ್ಶನ

ಈ ಬೀದಿ ನಾಟಕ ಪ್ರದರ್ಶನದ ನಿರ್ವಹಣೆಯ ಜವಾಬ್ದಾರಿಯನ್ನು ಹೊತ್ತಿರುವ ಶ್ವೇತಾ ಅಮರಾವತಿ ಮಾತನಾಡಿ, ಕಸ್ತೂರಬಾ ಅವರೊಂದಿಗಿನ ಗಾಂಧೀಜಿಯವರ ಕಾದಾಟ ಹಾಗೂ ಅವರ ತಪ್ಪಿನ ಅರಿವಾದಾಗ ಪತ್ನಿಯನ್ನು ಪೂಜ್ಯನೀಯ ಭಾವನೆಯಿಂದ ಕಂಡಿರೋದು. ಬಯಲು ಬಹಿರ್ದೆಸೆ ಮುಕ್ತತೆಗೆ ಮನೆಗೊಂದು ಶೌಚಾಲಯ ನಿರ್ಮಾಣದ ಜಾಗೃತಿ. ಪೆಂಡಂಭೂತವಾಗಿ ಕಾಡುವ ಈ ಪ್ಲಾಸ್ಟಿಕ್ ಮುಕ್ತ ಭಾರತ ನಿರ್ಮಾಣದ ಕುರಿತು ಈ ಬೀದಿ ನಾಟಕ ಪ್ರದರ್ಶನದಲ್ಲಿ ಜಾಗೃತಿ ಮೂಡಿಸಲಾಯಿತು ಎಂದರು.

ಇನ್ನು ಈ ಬೀದಿ ನಾಟಕದಲ್ಲಿ ಗಾಂಧಿಯ ಅಹಿಂಸಾ ತತ್ವ, ಮಹಿಳೆಯನ್ನು ಸಮಾಜ ಕಂಡ ರೀತಿ, ಶೌಚಾಲಯದ ಮಹತ್ವ, ಪ್ಲಾಸ್ಟಿಕ್​ ಸಮಸ್ಯೆ, ಸತಿಸಹಗಮನ ಪದ್ಧತಿ ಹೀಗೆ ಹಲವು ಮುಖ್ಯ ವಿಷಯಗಳ ಕುರಿತು ಜನಜಾಗೃತಿ ಮೂಡಿಸಲಾಯಿತು.

Intro:ಗಣಿನಗರಿಯಲಿ ಗಾಂಧಿತತ್ವ ಆಧರಿತ ಬೀದಿ ನಾಟಕ ಪ್ರದರ್ಶನ
ಪ್ಲಾಸ್ಟಿಕ್ ನಿಷೇಧ - ಶೌಚಾಲಯ ನಿರ್ಮಾಣದ ಜಾಗೃತಿ ಮೂಡಿಸಿದ ವಿನ್ನಿಷರ್ಸ್ ತಂಡದ ಯುವಜನರು!
ಬಳ್ಳಾರಿ: ಗಾಂಧಿ ಯಾರು..ನಾನು ಗಾಂಧಿ. ನೀನು ಗಾಂಧಿ
ಎಂಬ ಸಾಮೂಹಿಕ ನೃತ್ಯ ಪ್ರದರ್ಶನದ ಮುಖೇನ ಐಎಎಸ್ ವಿನ್ನಿಷರ್ಸ್ ತಂಡವು ಗಣಿನಗರಿಯಲ್ಲಿ ಬೀದಿ ನಾಟಕ ಶುರು ಮಾಡೋ ಮುಖೇನ ಸಾರ್ವಜನಿಕರ ವಿಶೇಷ ಗಮನ ಸೆಳೆಯಿತು.
ಹೌದು, ಇಂಥದೊಂದು ಅಪರೂಪದ ದೃಶ್ಯವೊಂದಕ್ಕೆ ಗಣಿನಗರಿ ಬಳ್ಳಾರಿಯ ಗಡಿಗಿ ಚನ್ನಪ್ಪ ವೃತ್ತವು ಸಾಕ್ಷಿಯಾ ಯಿತು.
ಮಹಾತ್ಮಗಾಂಧೀಜಿಯವರ 150ನೇ ಜನ್ಮದಿನದ ಅಂಗವಾಗಿ ಈ ಐಎಎಸ್ ವಿನ್ನಿಷರ್ಸ್ ತಂಡದಿಂದ ಗಾಂಧಿತತ್ವ ಆಧರಿತ ಬೀದಿ ನಾಟಕ ಪ್ರದರ್ಶನದಲ್ಲಿ ಬರುವ ಪ್ರತಿಯೊಂದು ಸನ್ನಿವೇಶ ನೋಡುಗರ ವಿಶೇಷ ಗಮನ ಸೆಳೆದವು.
ಮಹಾತ್ಮ ಗಾಂಧೀಜಿಯವರ ಸತಿಸಹಗಮ ಪದ್ಧತಿ, ಜೇಬು ಗಳ್ಳನನ್ನೂ ಕೂಡ ಅಹಿಂಸಾ ಮಾರ್ಗದಲ್ಲಿ ಬದಲಿಸೋದು. ಕನ್ಯೆಯನ್ನು ನೋಡಲು ಹುಡುಗನ ಕಡೆಯವ್ರು ಮನೆಗೆ ಬರುತ್ತಾರೆ. ಆಗ ಹುಡುಗ - ಹುಡುಗಿಯನ್ನು ಇಬ್ಬರೂ ಇಷ್ಟಪಟ್ಟರೂ ಕೂಡ, ಹುಡುಗಿ ಕಡೆಯಿಂದ ನಿಮ್ಮ ಮನೇಲಿ ಶೌಚಾಲಯ ಇದೆಯಾ ಎಂಬ ಪ್ರಶ್ನೆ ಎತ್ತಿದಾಗ, ಅದು ಯಾಕೆ ಈಗ ಎಂದು ವ್ಯಂಗ್ಯವಾಡಿರುತ್ತಾರೆ. ಅದರಿಂದ ಸಂಬಂಧವೇ ಮುರಿದು ಬೀಳೋದು. ಪ್ರತಿಯೊಂದು ಮನೆಯಲ್ಲೂ‌ ಕೂಡ ಶೌಚಾಲಯ ನಿರ್ಮಾಣ ಕಡ್ಡಾಯದ ಜಾಗೃತಿ.
ಹಿಂದೂ ಬಾಲಕಿಗೆ ಯಾವುದೋ ಕಾಯಿಲೆಗೆ ತುತ್ತಾದಾಗ ರಕ್ತದಾನ ಮಾಡಲು ಯಾವೊಬ್ಬ ಹಿಂದೂಗಳು ಮುಂದೆ ಬರೋದಿಲ್ಲ. ಅದ್ಕೆ ಆ ಬಾಲಕಿ ತಾಯಿ ತನ್ನ ಅಳಲನ್ನು ಹಾದಿ -ಬೀದಿಯಲ್ಲಿ ತೋಡಿಕೊಂಡಾಗ ದಾರಿ ಹೋಕ ಮುಸ್ಲಿಂ ಧರ್ಮೀಯರೊಬ್ಬರು ರಕ್ತದಾನ ಮುಂದೆ ಬರುತ್ತಾರೆ. ರಕ್ತ ಯಾರದ್ದು ಆದರೇನು. ಅದರ ಬಣ್ಣ ಮಾತ್ರ ಕೆಂಪಲ್ಲವೋ ಎಂಬ ಹಾಡೊಂದು ಮೊಳಗಿದಾಗ ನೋಡುಗರ ಕರತಾಡತನ ಮುಗಿಲ ಮುಟ್ಟಿತು.
ಪ್ಲಾಸ್ಟಿಕ್ ಬಾಟಲ್ ಗಳನ್ನೇ ಮೈಮೇಲೆ ತಗಲು ಹಾಕಿಕೊಂಡು ಪ್ಲಾಸ್ಟಿಕ್ ಭೂತನಂತೆ ನಟನೆ ಮಾಡಲಾರಂಭಿಸದಾಗ ಗಾಂಧೀಜಿಯವ್ರ ಕೈಯಲ್ಲಿನ ಕೋಲಿ ಏಟಿಗೆ ಇಡೀ ಪ್ಲಾಸ್ಟಿಕ್ ಬಳಕೆ ನಿಷೇಧಿಸುವ ಕುರಿತಾಗಿಯೂ ಕೂಡ ಈ ಬೀದಿ ನಾಟಕ ಪ್ರದರ್ಶನದಲ್ಲಿ ಜಾಗೃತಿ ಮೂಡಿಸಲಾಯಿತು.

Body:ಐಎಎಸ್ ವಿನ್ನಿಷರ್ಸ್ ಸಂಸ್ಥೆಯ ಸಂಸ್ಥಾಪಕ ಆರ್.ವಿನಯ ಕುಮಾರ ಮಾತನಾಡಿ, ಗಾಂಧೀಜಿಯವ್ರ ವಿಚಾರ - ಧಾರೆಗಳು ಹಾಗೂ ಅವರ ನಡೆ, ನುಡಿಯ ಕುರಿತು ಸಾರ್ವಜನಿಕರಲ್ಲಿ ಈ ಬೀದಿ ನಾಟಕದ ಮೂಲಕ ಜಾಗೃತಿ ಮೂಡಿಸುವ ಮುಖೇನ 150ನೇ ಗಾಂಧೀಜಿ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸೋದೇ ಇದರ ಮೂಲ ಉದ್ದೇಶವಾಗಿದೆ ಎಂದರು.
ಬೀದಿ ನಾಟಕ ಪ್ರದೇಶದಲ್ಲಿ ಗೃಹಿಣಿಯ ಪಾತ್ರಮಾಡಿದ ಮೇಘ ಹಿರೇಮಠ ಅವರು ಮಾತನಾಡಿ, ಈ ಕಲ್ಯಾಣ ಕರ್ನಾಟಕ ಭಾಗದಲ್ಲಿ ಅನಕ್ಷರತೆಯ ಕೊರತೆ ಬಹಳಷ್ಟಿದೆ. ಅದನ್ನು ಹೋಗಲಾಡಿಸಲು ಇಂಥ ಬೀದಿ ನಾಟಕ ಪ್ರದರ್ಶನವು ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ ಎಂದಿದ್ದಾರೆ ಅವರು.
ಈ ಬೀದಿ ನಾಟಕ ಪ್ರದರ್ಶನದ ನಿರ್ವಹಣೆಯ ಜವಾಬ್ದಾರಿ ಯನ್ನು ಹೊತ್ತಿರುವ ಶ್ವೇತಾ ಅಮರಾವತಿ ಮಾತನಾಡಿ, ಕಸ್ತೂರಿ ಬಾ ಅವರೊಂದಿಗೆ ಗಾಂಧೀಜಿಯವ್ರ ಕಾದಾಟ ಹಾಗೂ ಅವರ ತಪ್ಪಿನ ಅರಿವಾದಾಗ ಪತ್ನಿಯನ್ನೂ ಪೂಜ್ಯನೀಯ ಭಾವನೆ ಕಂಡಿರೋದು. ಬಯಲು ಬಹಿರ್ದೆಸೆ ಮುಕ್ತತೆಗೆ ಮನೆಗೊಂದು ಶೌಚಾಲಯ ನಿರ್ಮಾಣದ ಜಾಗೃತಿ. ಪೆಂಡಂಭೂತವಾಗಿ ಕಾಡುವ ಈ ಪ್ಲಾಸ್ಟಿಕ್ ಮುಕ್ತ ಭಾರತ ನಿರ್ಮಾಣದ ಕುರಿತು
ಈ ಬೀದಿ ನಾಟಕ ಪ್ರದರ್ಶನದಲ್ಲಿ ಜಾಗೃತಿ ಮೂಡಿಸಲಾಯಿತು ಎಂದಿದ್ದಾರೆ.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

ಬೈಟ್: ಆರ್.ವಿನಯಕುಮಾರ (ರೆಡ್ ಟೀಶರ್ಟ್)

ಬೈಟ್: ಮೇಘ ಹಿರೇಮಠ (ಸೀರೆ, ಕಪ್ಪನೆಯ ರವಿಕೆ)

ಬೈಟ್: ಶ್ವೇತಾ ಅಮರಾವತಿ (ಬಿಳಿ ಟೀಶರ್ಟ್)

Conclusion:KN_BLY_3_GANDHI_JAYANTHI_STREET_NATAKA_VISUALS_7203310
ETV Bharat Logo

Copyright © 2024 Ushodaya Enterprises Pvt. Ltd., All Rights Reserved.