ETV Bharat / state

ಬಳ್ಳಾರಿ: ಜೂಜಾಟದಲ್ಲಿ ತೊಡಗಿದ್ದವರ ಬಂಧನ, ನಗದು ವಶ - Detention

ಗಣಿ ನಾಡು ಬಳ್ಳಾರಿಯಲ್ಲಿ 3 ಜೂಜಾಟದ ಅಡ್ಡೆ ಮೇಲೆ ದಾಳಿ ನಡೆಸಿದ ಪೊಲೀಸರು ನಗದು ವಶಪಡಿಸಿಕೊಂಡು, ಕೆಲವರನ್ನು ಬಂಧಿಸಿದ್ದಾರೆ.

dsd
ಬಳ್ಳಾರಿಯಲ್ಲಿ ಜೂಜಾಟ
author img

By

Published : Aug 28, 2020, 10:25 AM IST

ಬಳ್ಳಾರಿ: ಜಿಲ್ಲೆಯ ಹೊಸಪೇಟೆ ತಾಲೂಕಿನ ಸರಹದ್ದಿನ ಕಡ್ಡಿರಾಂಪುರದಲ್ಲಿ ಜೂಜಾಡುತ್ತಿದ್ದಾಗ ಪೊಲೀಸರು ದಾಳಿ ನಡೆಸಿ 7 ಮಂದಿಯನ್ನು ಬಂಧಿಸಿ 24,800 ರೂಪಾಯಿ ವಶಪಡಿಸಿಕೊಂಡಿದ್ದಾರೆ.

ವಿ.ಗಾಳೆಪ್ಪ, ಎಂ.ಸ್ವಾಮಿ, ವೆಂಕಟೇಶ, ಲಕ್ಷ್ಮಣ, ಜಿ.ಹನುಮಂತ, ಯಮನೂರನಾಯ್ಕ್, ಚಂದ್ರನಾಯ್ಕ್ ಬಂಧಿತರು. ಕಮಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗಾಂಧಿನಗರದ ಮೊದಲನೇ ಅಡ್ಡ ರಸ್ತೆಯ ರೈಲ್ವೆ ಹಳಿಯ ಪಕ್ಕದಲ್ಲಿರುವ ಸಾರ್ವಜನಿಕ ಸ್ಥಳದಲ್ಲಿ ಅಂದರ್ ಬಾಹರ್ ಆಡುತ್ತಿದ್ದ 8 ಜನರನ್ನು ಬಂಧಿಸಿ, 27,250 ರೂಪಾಯಿಗಳನ್ನು ಗಾಂಧಿನಗರ ಠಾಣೆಯ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ನಗರದ ವರಬಸಪ್ಪ ಗುಡಿ ಹತ್ತಿರ ಸಾರ್ವಜನಿಕ ಸ್ಥಳಗಳಲ್ಲಿ ಜೂಜಾಟದಲ್ಲಿ ತೊಡಗಿದ್ದ 6 ಜನರನ್ನು ಬಂಧಿಸಿ 4,750 ರೂಪಾಯಿ ವಶಕ್ಕೆ ಪಡೆಯಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.