ETV Bharat / state

ಜುಲೈ 9 ರಿಂದ 16ರ ತನಕ ಜಿ 20 ಶೃಂಗಸಭೆ: ವಿಜಯನಗರದ ಹಂಪಿಗೆ ಅಧಿಕಾರಿಗಳು ಭೇಟಿ, ಪರಿಶೀಲನೆ - ವಿಶ್ವಪಾರಂಪರಿಕ ತಾಣ ಹಂಪಿ

ವಿಶ್ವಪ್ರಸಿದ್ದ ಹಂಪಿಯಲ್ಲಿ ನಡೆಯುವ ಜಾಗತಿಕ ಮಟ್ಟದ ಜಿ 20 ಶೃಂಗಸಭೆಯಲ್ಲಿ 20 ಸದಸ್ಯ ರಾಷ್ಟ್ರಗಳು, 9 ಆಹ್ವಾನಿತ ರಾಷ್ಟ್ರಗಳು ಸೇರಿ 43 ರಾಷ್ಟ್ರಗಳು ಭಾಗವಹಿಸಲಿವೆ. ಜಿ 20 ಭಾರತದ ಉನ್ನತ ಮಟ್ಟದ ಅಧಿಕಾರಿಗಳ ತಂಡ ಭಾನುವಾರ ಬೆಳಗ್ಗೆ ವಿಶ್ವವಿಖ್ಯಾತ ಹಂಪಿಗೆ ತೆರಳಿ ಸ್ಥಳಗಳ ಪರಿಶೀಲನೆ ಕೈಗೊಂಡು ಮಾಹಿತಿ ಪಡೆದುಕೊಂಡರು.

officials visited Hampi and inspected.
ಜಿ 20 ಭಾರತದ ಉನ್ನತ ಮಟ್ಟದ ಅಧಿಕಾರಿಗಳ ತಂಡ ಹಂಪಿಗೆ ಭೇಟಿ ನೀಡಿ ಪರಿಶೀಲಿಸಿತು.
author img

By

Published : Jul 2, 2023, 5:39 PM IST

Updated : Jul 2, 2023, 7:19 PM IST

ಜಿ 20 ಭಾರತದ ಉನ್ನತ ಮಟ್ಟದ ಅಧಿಕಾರಿಗಳ ಸಭೆ ಹಂಪಿಯಲ್ಲಿ ನಡೆಯಿತು.

ವಿಜಯನಗರ: ಜಿ-20 ಶೃಂಗಸಭೆಗೆ ಸಂಬಧಿಸಿದಂತೆ ವಿಶ್ವಪ್ರಸಿದ್ಧ ಹಂಪಿಯಲ್ಲಿ ಜುಲೈ ತಿಂಗಳ 3ನೇ ವಾರ ನಡೆಯಲಿರುವ ಕಾರ್ಯಕ್ರಮಗಳ ಸ್ಥಳಗಳ ಪರಿಶೀಲನೆಯನ್ನು ಉನ್ನತ ಮಟ್ಟದ ಅಧಿಕಾರಿಗಳು ನಡೆಸಿದರು.

ವಿಶ್ವಪಾರಂಪರಿಕ ಪ್ರದೇಶ ಹಂಪಿಯ ಚಕ್ರತೀರ್ಥ ಬಳಿಯ ನದಿದಂಡೆಯಲ್ಲಿ ಜಿ-20 ಸಭೆಗೆ ಆಗಮಿಸುವ ಪ್ರತಿನಿಧಿಗಳು ಕೈಗೊಳ್ಳಲಿರುವ ಹರಿಗೋಲು ಸವಾರಿಯ(ಕೊರಾಕಲ್ ರೈಡ್) ಪ್ರಾರಂಭಿಕ ಸ್ಥಳದ ಪರಿಶೀಲನೆ ನಡೆಸಿದರು. ಸುತ್ತಮುತ್ತಲಿನ ಪ್ರದೇಶದ ಮಾಹಿತಿಯನ್ನು ಸ್ಥಳೀಯ ಅಧಿಕಾರಿಗಳಿಂದ ಪಡೆದುಕೊಂಡರು. ಜಿ-20 ಶೆರ್ಪಾ ಅಮಿತಾಭ್ ಕಾಂತ್ ಸೇರಿದಂತೆ ಜಂಟಿ ಕಾರ್ಯದರ್ಶಿ ಆಶಿಶ್ ಸಿನ್ಹಾ, ಜಂಟಿ ಕಾರ್ಯದರ್ಶಿ (ಭದ್ರತೆ) ಭಾವನಾ ಸಕ್ಸೇನಾ, ಅಧೀನ ಕಾರ್ಯದರ್ಶಿ ಆಸಿಮ್ ಅನ್ವರ್ ಅವರು ಸ್ಥಳ ಪರಿಶೀಲನೆ ನಡೆಸಿದರು. ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕಪಿಲ್ ಮೋಹನ್, ಪ್ರವಾಸೋದ್ಯಮ ಇಲಾಖೆ ನಿರ್ದೇಶಕ ರಾಮಪ್ರಸಾತ್ ಮನೋಹರ್ ವಿ. ಅವರು ಉಪಸ್ಥಿತರಿದ್ದರು.

ಜುಲೈ 9ರಿಂದ 16ರ ವರೆಗೆ ಜಿ 20 ಶೃಂಗಸಭೆ: ಈ ಬಾರಿ ಭಾರತ ಜಿ 20 ಶೃಂಗಸಭೆಯ ಅಧ್ಯಕ್ಷತೆ ವಹಿಸಿದ್ದು, ಅತೀ ಮುಖ್ಯವಾದ ಜಿ 20 ಶೃಂಗಸಭೆಯ ಮೂರನೇ ಪ್ರಮುಖ ಸಭೆ ವಿಶ್ವಪಾರಂಪರಿಕ ತಾಣ ಹಂಪಿಯಲ್ಲಿ ಜು 9 ರಿಂದ 16ರ ವರೆಗೆ ನಡೆಯಲಿದೆ ಎಂದು ಜಿ 20 ಶೆರ್ಪಾದ ಅಮಿತಾಭ್ ಕಾಂತ್ ತಿಳಿಸಿದರು.

ಪೂರ್ವ ಸಿದ್ದತಾ ಸಭೆಯ ಮುನ್ನ ಭಾರತದ ಜಿ 20 ಉನ್ನತ ಮಟ್ಟದ ಅಧಿಕಾರಿಗಳ ತಂಡ ಬೆಳಗ್ಗೆ ವಿಶ್ವವಿಖ್ಯಾತ ಹಂಪಿಗೆ ತೆರಳಿ ಜಿ-20 ಸಭೆಯಲ್ಲಿ ಭಾಗವಹಿಸುವ ಪ್ರತಿನಿಧಿಗಳು ಭೇಟಿ ನೀಡಲಿರುವ ಸ್ಥಳಗಳ ಪರಿಶೀಲನೆ ಕೈಗೊಂಡು ಸ್ಥಳೀಯ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಜಾಗತಿಕ ಮಟ್ಟದ ಒಟ್ಟು ಜಿ 20 ಶೃಂಗಸಭೆಯ 20 ಸದಸ್ಯ ರಾಷ್ಟ್ರಗಳು, 9 ಆಹ್ವಾನಿತ ರಾಷ್ಟ್ರಗಳು ಸೇರಿದಂತೆ ಒಟ್ಟು 43 ರಾಷ್ಟ್ರಗಳು ಈ ಸಭೆಯಲ್ಲಿ ಭಾಗವಹಿಸಲಿವೆ.

ಈಗಾಗಲೇ ರಾಜಸ್ಥಾನದ ಉದಯಪುರ, ಅಸ್ಸಾಮಿನ ಕುಮಾರ್ಗಮ್‌ನಲ್ಲಿ ಶೆರ್ಪಾ ಸಭೆಗಳು ನಡೆದಿವೆ. ಜಾಗತಿಕ ಮಟ್ಟದಲ್ಲಿ ಕರ್ನಾಟಕ ರಾಜ್ಯದ ಪ್ರವಾಸೋದ್ಯಮ ಹಾಗೂ ಸಾಂಸ್ಕೃತಿಕ ಹಿರಿಮೆ ಮತ್ತು ಉತ್ಪನ್ನಗಳನ್ನು ಉನ್ನತೀಕರಿಸಲು 3ನೇ ಶೆರ್ಪಾ ಸಭೆ ವಿಶ್ವವಿಖ್ಯಾತ ವಿಶ್ವಪಾರಂಪರಿಕ ತಾಣ ಹಂಪಿಯಲ್ಲಿ ಆಯೋಜಿಸಲಾಗಿದೆ.

ಈಗಾಗಲೇ ಹಂಪಿ ಪಾರಂಪರಿಕ ಪ್ರದೇಶದಲ್ಲಿ ಶೆರ್ಪಾ ಸಭೆಗಾಗಿ ಅಂತಿಮ ಹಂತದ ಸಿದ್ಧತೆ ಕೈಗೊಳ್ಳಲಾಗುತ್ತಿದೆ. ಈ ಶೆರ್ಪಾ ಸಭೆಯು ವಸುದೈವ ಕುಟುಂಬ ಎಂಬ ಧ್ಯೇಯದಡಿ ಒಂದು ಭೂಮಿ, ಒಂದು ಕುಟುಂಬ, ಒಂದೇ ಭವಿಷ್ಯ ಎಂಬ ಘೋಷಣಾ ವಾಕ್ಯದಡಿ ಶೃಂಗಸಭೆ ಆಯೋಜನೆ ಮಾಡಲಾಗುತ್ತಿದೆ. ಇಲ್ಲಿ 43 ದೇಶಗಳ ಉನ್ನತಮಟ್ಟದ ಅಧಿಕಾರವುಳ್ಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದ ಹಲವಾರು ಉನ್ನತ ಸಭೆಗಳು ನಡೆಯಲಿವೆ ಎಂದು ಮಾಹಿತಿ ನೀಡಿದರು.

ಜಾಗತಿಕ ಮಾರುಕಟ್ಟೆ ಲಾಭ ಪಡೆಯಲು ವಿಫುಲ ಅವಕಾಶ: ರಾಜ್ಯದ ಪ್ರವಾಸೋದ್ಯಮ ಉನ್ನತೀಕರಣ ಜೊತೆಗೆ ಇಲ್ಲಿನ ಕಲೆ, ಸಂಸ್ಕೃತಿ ಐತಿಹಾಸಿಕ ಸ್ಮಾರಕಗಳ ಪ್ರಸ್ತುತಿ ಸೇರಿದಂತೆ ರಾಜ್ಯದ ಕರಕುಶಲತೆ, ಕೈಮಗ್ಗ, ಸಾಂಪ್ರದಾಯ ಹಾಗೂ ಒಂದು ಜಿಲ್ಲೆ ಒಂದು ಉತ್ಪನ್ನ ಅದರಲ್ಲೂ ವಿಶೇಷವಾಗಿ ಸಿರಿಧಾನ್ಯ ಮಹತ್ವ ಸಾರುವ ಜೊತೆಗೆ ಇವುಗಳ ಜಾಗತಿಕ ಪರಿಚಯ ಹಾಗೂ ಮಾರುಕಟ್ಟೆ ಕಂಡುಕೊಳ್ಳಲು ವಿಫುಲ ಅವಕಾಶ ಜಿ-20ಯಿಂದ ದೊರೆಯುತ್ತದೆ. ಆದ್ದರಿಂದ ಜಿ 20 ಸಭೆಯನ್ನು ವ್ಯವಸ್ಥಿತವಾಗಿ ಆಯೋಜಿಸಿ ಇದರ ಲಾಭವನ್ನು ಪಡೆದುಕೊಳ್ಳಬಹುದಾಗಿದೆ.

ಇದನ್ನೂ ಓದಿ : ರಾಷ್ಟ್ರಪತಿ ಅವರೊಂದಿಗೆ ಸಂವಾದಕ್ಕೆ ಚಾಮರಾಜನಗರದ ಬುಡಕಟ್ಟು ಜನರು ಆಯ್ಕೆ

Last Updated : Jul 2, 2023, 7:19 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.