ಬಳ್ಳಾರಿ : ಕೊರೊನಾ ಸೋಂಕಿನಿಂದ ಮೃತಪಟ್ಟ ವ್ಯಕ್ತಿಗಳ ಅಂತ್ಯಸಂಸ್ಕಾರ ಮಾಡುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಈ ವಿಡಿಯೋದಲ್ಲಿ ಮೃತದೇಹಗಳನ್ನು ಕಪ್ಪು ಬಣ್ಣದ ಬ್ಯಾಗ್ನೊಳಗೆ ತುಂಬಿ ದೊಡ್ಡದಾದ ಗುಂಡಿಗೆ ಎಸೆಯಲಾಗುತ್ತಿದೆ. ಮೃತದೇಹಗಳನ್ನು ಕನಿಷ್ಠ ಗೌರವವೂ ಇಲ್ಲದೆ ಈ ರೀತಿ ಎಸೆಯುತ್ತಿರುವುದು ಎಷ್ಟು ಸರಿ ಎಂಬ ವಿಚಾರ ಚರ್ಚೆಗೆ ಕಾರಣವಾಗಿದೆ.
ವಿಡಿಯೋ ಬಳ್ಳಾರಿಯದ್ದೇ? ಅಥವಾ ಬೇರೆಡೆಯದ್ದೇ ಎಂಬುದನ್ನು ಜಿಲ್ಲಾಡಳಿತ ಸ್ಪಷ್ಟಪಡಿಸಬೇಕಿದೆ. ವಿಡಿಯೋದಲ್ಲಿ ಕನ್ನಡ ಭಾಷೆಯಲ್ಲಿ ಮಾತನಾಡುತ್ತಿರುವುದು ಕೇಳಿಬರುತ್ತಿದೆ.
ಈ ಬಗ್ಗೆ ನಮ್ಮ ಪ್ರತಿನಿಧಿಗೆ ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಇದು ಜಿಲ್ಲೆಯದ್ದಾಗಿರಲಿಕ್ಕಿಲ್ಲ. ಈ ಬಗ್ಗೆ ತನಿಖೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.