ಬಳ್ಳಾರಿ: ರಾಜಕೀಯಕ್ಕೆ ಮರಳುವ ಮತ್ತು 2023ರ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಈಗಲೇ ನಾನೇನೂ ಹೇಳಲಾರೆ. ನವೆಂಬರ್ 6ರ ನಂತರ ನಾನು ಬಳ್ಳಾರಿ ತೊರೆಯಬೇಕೆಂದು ನ್ಯಾಯಾಲಯ ಆದೇಶಿಸಿದೆ. ಹೀಗಾಗಿ ನಾನು ಗಂಗಾವತಿ ತಾಲೂಕು ಅಥವಾ ಸುತ್ತಮುತ್ತ ನೆಲೆಸುವೆ. ಈ ಭಾಗದ ಗಾಳಿ ಸೇವಿಸುತ್ತಿದ್ದರೆ ಸಾಕು ನಾನು ಬಳ್ಳಾರಿಯಲ್ಲಿರುವ ಭಾವನೆ ಬರಲಿದೆ ಎಂದು ಮಾಜಿ ಸಚಿವ ಜನಾರ್ದನ ರೆಡ್ಡಿ ಹೇಳಿದರು.
ಜಿಲ್ಲೆಯ ಕುರುಗೋಡಿನಲ್ಲಿ ದೀಪಾವಳಿ ಹಿನ್ನೆಲೆಯಲ್ಲಿ ಕುರುಗೋಡು ದೊಡ್ಡ ಬಸವೇಶ್ವರ ದೇವಸ್ಥಾನ ಹಾಗೂ ಹಜರತ್ ಖಾದರಲಿಂಗ ಅವರ ಗೋರಿಗೆ ಭೇಟಿ ನೀಡಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು. ರಾಜಕೀಯಕ್ಕೆ ಮರಳುವ ಬಗ್ಗೆ ಸೂಕ್ತ ಸಮಯದಲ್ಲಿ ತಿಳಿಸುವೆ ಎಂದರು. ಈ ಸಂದರ್ಭದಲ್ಲಿ ರೈತ ಮುಖಂಡ ಐನಾತರೆಡ್ಡಿ ಸೇರಿದಂತೆ ಇನ್ನಿತರ ಮುಖಂಡರು ಹಾಜರಿದ್ದರು.
ಓದಿ: ಸಚಿವ ಸೋಮಣ್ಣ ವಿರುದ್ಧ ಮಹಿಳಾ ಮತ್ತು ಯುವ ಕಾಂಗ್ರೆಸ್ ಪ್ರತಿಭಟನೆ : ಪ್ರತಿಭಟನಾಕಾರರು ಪೊಲೀಸರ ವಶಕ್ಕೆ