ETV Bharat / state

ಹಂಪಿ ಕನ್ನಡ ವಿವಿಯಲ್ಲಿ ‘ಅಡವಿ ಸಿಪಿಲೆ’ ಹಾರುತಿದೆ ನೋಡಿದಿರಾ? - ಅಡವಿ ಸಿಪಿಲೆ ಪಕ್ಷಿ ಸುದ್ದಿ

ಪಶ್ಚಿಮಘಟ್ಟ ಮತ್ತು ದಟ್ಟಾರಣ್ಯಗಳಲ್ಲಿ ಕಾಣಸಿಗುವ ಅಡವಿ ಸಿಪಿಲೆ ಎಂಬ ಪಕ್ಷಿಯೊಂದು ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಪತ್ತೆಯಾಗಿದೆ.

Forest wagtail in Karnataka
ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ‘ಅಡವಿ ಸಿಪಿಲೆ’ ಕಲರವ
author img

By

Published : Apr 2, 2021, 5:20 PM IST

ಹೊಸಪೇಟೆ: ಪಶ್ಚಿಮಘಟ್ಟ ಮತ್ತು ದಟ್ಟ ಅರಣ್ಯಗಳಲ್ಲಿ ಕಾಣಸಿಗುವ ಅಡವಿ ಸಿಪಿಲೆ ಪಕ್ಷಿಯೊಂದು ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಪತ್ತೆಯಾಗಿದೆ. ಕಮಲಾಪುರದ ಪಕ್ಷಿವೀಕ್ಷಕ ಜಿ.ಎ.ಶಬರೀಶ ಅವರ ಕ್ಯಾಮೆರಾ ಕಣ್ಣಲ್ಲಿ ಈ ಫೋಟೋ ಸೆರೆಯಾಗಿದೆ.

ಈ ಭಾಗದಲ್ಲಿ ಅಡವಿ ಸಿಪಿಲೆ ಕಂಡುಬಂದಿರುವುದು ಇದೇ ಮೊದಲ ಬಾರಿ ಎಂದು ಹೇಳಲಾಗ್ತಿದೆ. ಸಿಪಿಲೆ ಪ್ರಭೇದಗಳಲ್ಲೇ ಈ ಅಡವಿ ಸಿಪಿಲೆ (ಕುಂಡೆಕುಸ್ಕ) ಪಕ್ಷಿಯ ರೆಕ್ಕೆ ವಿಶಿಷ್ಟ ಸಂರಚನೆಯಿಂದ ಕೂಡಿದೆ.

ಮರಗಳಲ್ಲಿ ಗೂಡುಕಟ್ಟುವ ಇದು ದಟ್ಟ ಕಾನನಗಳಲ್ಲಿ ಕಾಣಸಿಗುತ್ತಿದ್ದು, ಬಯಲಸೀಮೆಯ ಈ ಪ್ರದೇಶದಲ್ಲಿ ಕಂಡುಬಂದಿರುವುದು ಅಚ್ಚರಿ ಮೂಡಿಸಿದೆ ಎಂದು ಪಕ್ಷಿವೀಕ್ಷಕ ಮತ್ತು ಉರಗಪ್ರೇಮಿ ಪಂಪಯ್ಯಸ್ವಾಮಿ ಮಳೆಮಠ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.