ಬಳ್ಳಾರಿ: ಅರಣ್ಯಾಧಿಕಾರಿಯೊಬ್ಬ ನಕಲಿ ಪಿಎಸ್ಐ ವೇಷ ಹಾಕಿ ಹಣ ವಸೂಲಿ ಮಾಡಲು ಬಂದಿದ್ದ ಘಟನೆ ಬಳ್ಳಾರಿಯ ವಿಮ್ಸ್ ಎದುರಿನ ಹೊಟೇಲ್ನಲ್ಲಿ ನಡೆದಿದೆ. ಅರಣ್ಯ ಇಲಾಖೆಯ ಉಪವಲಯ ಅಧಿಕಾರಿ ಕೆ ಕೆಂಚಪ್ಪ ಹೊಟೇಲ್ವೊಂದಕ್ಕೆ ಹೋಗಿ ಹಣಕ್ಕೆ ಡಿಮ್ಯಾಂಡ್ ಮಾಡಿದ್ದಾನೆ.
ಈತನ ಬಗ್ಗೆ ಅನುಮಾನಗೊಂಡ ಹೊಟೇಲ್ ಮಾಲೀಕರು ಈತನನ್ನ ವಿಚಾರಣೆ ನಡೆಸಿದ್ದಾರೆ. ಈತನ ಬಳಿ ನಕಲಿ ಪ್ಲಾಸ್ಟಿಕ್ ಪಿಸ್ತೂಲ್ ಇರುವುದನ್ನ ಗಮನಿಸಿದ್ದಾರೆ. ಇದರಿಂದ ಅನುಮಾನಗೊಂಡು ಕೌಲಬಜಾರ್ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಹೋಟೆಲ್ ಬರುವ ಮೊದಲು ಜನಾರ್ದನ್ ಎನ್ನುವ ಯುವಕನ ಬಳಿಕ ಬೈಕ್ ತಡೆದು ಒಂದು ಸಾವಿರ ದಂಡ ವಸೂಲಿ ಮಾಡಿದ್ದಾನೆ.
ಈತನ ನಕಲಿ ಪಿಎಸ್ಐ ಅಂತಾ ಗೊತ್ತಾಗುತ್ತಿದ್ದಂತಿಯೇ ಸಾರ್ವಜನಿಕರು ಗೂಸಾ ನೀಡಿದ್ದಾರೆ. ಸದ್ಯ ಕೆಂಚಪ್ಪ ನನ್ನ ಕೌಲ ಬಜಾರ್ ಠಾಣೆಯ ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : ಅಪಹರಿಸಿ ಅಪ್ರಾಪ್ತೆ ಮೇಲೆ ಅತ್ಯಾಚಾರ: ಕಾಮುಕನಿಗೆ 20 ವರ್ಷ ಜೈಲು ಶಿಕ್ಷೆ ವಿಧಿಸಿದ ಬೆಂಗಳೂರು ಕೋರ್ಟ್