ETV Bharat / state

ಇದು ETV ಭಾರತ್ IMPACT: ಮಗಳನ್ನು ಹೆಗಲ ಮೇಲೆ ಹೊತ್ತೊಯ್ದ ತಂದೆ: ಅಧಿಕಾರಿಗಳ ವಿರುದ್ಧ ಡಿಸಿಎಂ ಗರಂ - ಡಿಸಿಎಂ ಡಾ. ಅಶ್ವಥ್​​ನಾರಾಯಣ ಗಂಭೀರವಾಗಿ ಪರಿಗಣನೆ

ರೋಗಿಯನ್ನು ತುರ್ತು ನಿಗಾ ಘಟಕದಿಂದ ಮತ್ತೊಂದು ಘಟಕಕ್ಕೆ ಸಾಗಿಸಲು ವ್ಹೀಲ್ ಚೇರ್‌ ನೀಡದಿರುವ ಪ್ರಕರಣವನ್ನು ಡಿಸಿಎಂ ಡಾ. ಅಶ್ವತ್ಥ​​ನಾರಾಯಣ ಗಂಭೀರವಾಗಿ ಪರಿಗಣಿಸಿದ್ದಾರೆ. ಈ ಸಂಬಂಧ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ ಆಸ್ಪತ್ರೆ ಕಾಲೇಜಿನ ಡೀನ್‌ಗೆ ಸೂಚನೆ ನೀಡಿದ್ದಾರೆ.

Father carrying a daughter's on his shoulder
ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ ಆಸ್ಪತ್ರೆ ಕಾಲೇಜಿನ ಡೀನ್‌ಗೆ ಡಿಸಿಎಂ ಸೂಚನೆ
author img

By

Published : Jan 23, 2020, 5:18 PM IST

ಬಳ್ಳಾರಿ: ಜಿಲ್ಲೆಯ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ, ರೋಗಿಯನ್ನು ತುರ್ತು ನಿಗಾ ಘಟಕದಿಂದ ಮತ್ತೊಂದು ಘಟಕಕ್ಕೆ ಸಾಗಿಸಲು ವ್ಹೀಲ್ ಚೇರ್‌ ನೀಡದಿರುವ ಪ್ರಕರಣವನ್ನು ಡಿಸಿಎಂ ಡಾ. ಅಶ್ವಥ್​​ನಾರಾಯಣ ಗಂಭೀರವಾಗಿ ಪರಿಗಣಿಸಿದ್ದಾರೆ.

ಈ ಸಂಬಂಧ ಪ್ರತಿಕ್ರಿಯಿಸಿರುವ ಅವರು ವರದಿ ನೀಡುವಂತೆ ವಿಮ್ಸ್ ನಿರ್ದೇಶಕರಿಗೆ ಸೂಚನೆ ನೀಡಿದ್ದಾರೆ.‌ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ ಆಸ್ಪತ್ರೆ ಕಾಲೇಜಿನ ಡೀನ್‌ಗೆ ಸೂಚನೆ ನೀಡಿದ್ದಾರೆ.

ವಿಮ್ಸ್​​ನಲ್ಲಿ ವ್ಹೀಲ್ ಚೇರ್ ನೀಡದ್ದಕ್ಕೆ ಮಗಳನ್ನ ಹೆಗಲ ಮೇಲೆ ಹೊತ್ತೊಯ್ದ ವ್ಯಕ್ತಿ- ವಿಡಿಯೋ

'ವಿಮ್ಸ್​​ನಲ್ಲಿ ವ್ಹೀಲ್ ಚೇರ್ ನೀಡದ್ದಕ್ಕೆ ಮಗಳನ್ನ ಹೆಗಲ ಮೇಲೆ ಹೊತ್ತೊಯ್ದ ವ್ಯಕ್ತಿ - ವಿಡಿಯೋ' ಎಂಬ ಶಿರ್ಷಿಕೆಯಡಿ ಈಟಿವಿ ಭಾರತ ವರದಿಯನ್ನು ಬಿತ್ತರಿಸಿತ್ತು. ಡಿಸಿಎಂ ಡಾ.ಅಶ್ವತ್ಥ​​ ನಾರಾಯಣ ಅವರು ಗರಂ ಆಗಿ ಕೂಡಲೇ ವಿಮ್ಸ್ ನಿರ್ದೇಶಕರ ಕಚೇರಿಗೆ ಕರೆ ಮಾಡಿ ಆ ಘಟನೆಯ ವರದಿ ನೀಡುವಂತೆ ಸೂಚನೆ ನೀಡಿದ್ದಾರೆ. ಅಲ್ಲದೇ, ತಮ್ಮ ಟ್ವಿಟ್ಟರ್​​ ಖಾತೆಯಲ್ಲೂ ಈ‌ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

  • The incident where a father had to carry his daughter and run unit to unit due to non-availability of a wheelchair at VIMS Ballari has come to my notice. It is a serious issue and such negligence by the administration is condemnable.

    — Dr. Ashwathnarayan C. N. (@drashwathcn) January 23, 2020 " class="align-text-top noRightClick twitterSection" data=" ">

ವಿಮ್ಸ್​​ನ ನಿರ್ದೇಶಕ ಡಾ.ದೇವಾನಂದ ಅವರು ಈ ಸಂಬಂಧ ಪ್ರತಿಕ್ರಿಯಿಸಿ, ವಿಮ್ಸ್ ಆಸ್ಪತ್ರೆಯಲ್ಲಿ ತಂದೆಯೊಬ್ಬರು ಮಗಳಿಗೆ ಚಿಕಿತ್ಸೆಗೆ ಕರೆತರಲು ವೀಲ್ಹ್ ಚೇರ್ ನೀಡಲಿಲ್ಲ ಎನ್ನುವ ವಿಷಯ ಗಮನಕ್ಕೆ ಬಂದಿದೆ. ಈ ಬಗ್ಗೆ ಇಂದು ಡಿಸಿಎಂ ಅಶ್ವತ್ಥ​ ನಾರಾಯಣ ಅವರು ಬೆಂಗಳೂರು ಕಚೇರಿಯಿಂದ ಕರೆ ಮಾಡಿ ಮಾಹಿತಿ ಸಹ ಪಡೆದಿದ್ದಾರೆ. ಮುಂದೆ ಈ ತರಹದ ಘಟನೆಗಳು ನಡೆಯದಂತೆ ಕ್ರಮಕೈಗೊಳ್ಳಲು ಸೂಚಿಸಲಾಗಿದೆ ಎಂದರು.

ಈ ಬಗ್ಗೆ ವಿಮ್ಸ್ ಸಿಬ್ಬಂದಿ, ವೈದ್ಯರಿಗೆ ಸಹ ಸೂಚನೆ ನೀಡಲಾಗಿದೆ. ವಿಮ್ಸ್ ಆಸ್ಪತ್ರೆಯ ನಾನಾ ವಿಭಾಗಳಲ್ಲಿ ನಾಮಫಲಕ ಅಳವಡಿಸುವುದರೊಂದಿಗೆ ಚಿಕಿತ್ಸೆಗೆ ಕರೆತರಲು ಎರಡು ವೀಲ್ಹ್ ಚೇರ್​​ಗಳನ್ನು ಕಾಯಂ ಆಗಿ ಕಾಯ್ದಿರಿಸಲಾಗುವುದು. ತುರ್ತು ಚಿಕಿತ್ಸೆ ನೀಡುವ ಬಗ್ಗೆ, ರೋಗಿಗಳಿಗೆ ಕೂಡಲೇ ಸ್ಪಂದಿಸಲು ನಾಮಫಲಕದಲ್ಲಿ ವೈದ್ಯರ ಮಾಹಿತಿ ಹಾಕಲಾಗುವುದು. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳನ್ನು ಮರುಕಳಿಸದಂತೆ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

Intro:(ETV BHARAT IMPACT)

ಹೆಗಲ ಮೇಲೆ ಹೊತ್ತೊಯ್ದ ಘಟನೆ ಡಿಸಿಎಂ ಗರಂ
ಡಿಸಿಎಂ ಅಶ್ವತ್ಥನಾರಾಯಣ ಈ ಘಟನೆಯ ವರದಿ ನೀಡುವಂತೆ ವಿಮ್ಸ್ ನಿರ್ದೇಶಕರಿಗೆ ಸೂಚನೆ
ಬಳ್ಳಾರಿ: ಇಲ್ಲಿನ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ರೋಗಿಯನ್ನು ತುರ್ತು ನಿಗಾ ಘಟಕದಿಂದ ಮತ್ತೊಂದು ಘಟಕಕ್ಕೆ ಸಾಗಿಸಲು ವ್ಹೀಲ್ ಚೇರ್‌ ನೀಡದಿರುವ ಪ್ರಕರಣವನ್ನು ಗಂಭೀರ ವಾಗಿ ಪರಿಗಣಿಸಿರುವ ಉಪ ಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ ಸಿ.ಎನ್‌ ಅವರು ಈ ಸಂಬಂಧ ವರದಿ ನೀಡುವಂತೆ ವಿಮ್ಸ್ ನಿರ್ದೇಶಕರಿಗೆ ಸೂಚನೆ ನೀಡಿದ್ದಾರೆ.‌ ತಪ್ಪಿತಸ್ಥರ ವಿರುದ್ಧ ಸೂಕ್ತಕ್ರಮ ತೆಗೆದುಕೊಳ್ಳಬೇಕು ಎಂದು ಅವರು ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ ಆಸ್ಪತ್ರೆ ಕಾಲೇಜಿನ ಡೀನ್‌ಗೆ ಸೂಚನೆ ನೀಡಿದ್ದಾರೆ.
'ವಿಮ್ಸ್​​ನಲ್ಲಿ ವ್ಹೀಲ್ ಚೇರ್ ನೀಡದ್ದಕ್ಕೆ ಮಗಳನ್ನ ಹೆಗಲ ಮೇಲೆ ಹೊತ್ತೊಯ್ದ ವ್ಯಕ್ತಿ- ವಿಡಿಯೋ' ಎಂಬ ಶಿರ್ಷಿಕೆಯಡಿ ಈ ಟಿವಿ ಭಾರತ ವರದಿಯನ್ನು ಬಿತ್ತರಿಸಿತ್ತು. ಡಿಸಿಎಂ ಡಾ.ಅಶ್ವತ್ಥ ನಾರಾಯಣ ಅವರು ಗರಂ ಆಗಿ ಕೂಡಲೇ ವಿಮ್ಸ್ ನಿರ್ದೇಶಕರ ಕಚೇರಿಗೆ ಕರೆಮಾಡಿ ಆ ಘಟನೆಯ ವರದಿ ನೀಡುವಂತೆ ಸೂಚನೆ ನೀಡಿದ್ದಾರೆ. ಅಲ್ಲದೇ, ತಮ್ಮ ಟ್ವೀಟರ್ ಖಾತೆಯಲ್ಲೂ ಈ‌ ಮಾಹಿತಿ ಯನ್ನು ಹಂಚಿಕೊಂಡಿದ್ದಾರೆ.
ವಿಮ್ಸ್ ನ ನಿರ್ದೇಶಕ ಡಾ.ದೇವಾನಂದ ಅವರು ಈ ಸಂಬಂಧ ಪ್ರತಿಕ್ರಿಯಿಸಿ, ವಿಮ್ಸ್ ಆಸ್ಪತ್ರೆಯಲ್ಲಿ ತಂದೆಯೊಬ್ಬರು ಮಗಳಿಗೆ ಚಿಕಿತ್ಸೆಗೆ ಕರೆತರಲು ವೀಲ್ಹ್ ಚೇರ್ ನೀಡಲಿಲ್ಲ ಎನ್ನುವ ವಿಷಯ ಗಮನಕ್ಕೆ ಬಂದಿದೆ. ಈ ಬಗ್ಗೆ ಇಂದು ಡಿಸಿಎಂ ಅಶ್ವತ್ಥ ನಾರಾಯಣ ಅವರ ಬೆಂಗಳೂರು ಕಚೇರಿಯಿಂದ ಕರೆ ಮಾಡಿ ಮಾಹಿತಿ ಸಹ ಪಡೆಯಲಾಗಿದೆ. ಮುಂದೆ ಈ ತರ ಘಟನೆಗಳು ನಡೆಯದಂತೆ ಕ್ರಮಕೈಗೊಳ್ಳಲು ಸೂಚಿಸಲಾಗಿದೆ.
Body:ಈ ಬಗ್ಗೆ ವಿಮ್ಸ್ ಸಿಬ್ಬಂದಿ, ವೈದ್ಯರಿಗೆ ಸಹ ಸೂಚನೆ ನೀಡಲಾಗಿದೆ. ವಿಮ್ಸ್ ಆಸ್ಪತ್ರೆಯ ನಾನಾ ವಿಭಾಗಳಲ್ಲಿ ನಾಮಫಲಕ ಅಳವಡಿಸುವುದರೊಂದಿಗೆ ಚಿಕಿತ್ಸೆಗೆ ಕರೆತರಲು ಎರಡು ವೀಲ್ಹ್ ಚೇರ್ ಗಳನ್ನು ಕಾಯಂ ಆಗಿ ಕಾಯ್ದಿರಿಸಲಾಗುವುದು. ತುರ್ತು ಚಿಕಿತ್ಸೆ ನೀಡುವ ಬಗ್ಗೆ, ರೋಗಿಗಳಿಗೆ ಕೂಡಲೇ ಸ್ಪಂದಿಸಲು ನಾಮಫಲಕದಲ್ಲಿ ವೈದ್ಯರ ಮಾಹಿತಿ ಹಾಕಲಾಗುವುದು. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳನ್ನು ಮರುಕಳಿಸದಂತೆ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_3_ETV_BHARAT_IMPACT_NEWS_7203310

KN_BLY_3a_ETV_BHARAT_IMPACT_NEWS_7203310
ETV Bharat Logo

Copyright © 2025 Ushodaya Enterprises Pvt. Ltd., All Rights Reserved.