ETV Bharat / state

ಜಿಂದಾಲ್ ಡಾಂಬರ್​ ಕಾರ್ಖಾನೆ ಹೋರಾಟ ನಡೆವಾಗ ಜನಪ್ರತಿನಿಧಿಗಳು ಎಲ್ಲಿ ಹೋಗಿದ್ರು: ರೈತ ಮುಖಂಡ ಪ್ರಶ್ನೆ - undefined

ಜಿಂದಾಲ್ ವಿವಾದದ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ರೈತ ಮುಖಂಡ ಕುಡಿತಿನಿ ಶ್ರೀನಿವಾಸ್​ ಜಿಂದಾಲ್ ಸಮೂಹ ಸಂಸ್ಥೆಯು ಡಾಂಬರ್ ಕಾರ್ಖಾನೆ ಸ್ಥಾಪನೆಗೆ ವ್ಯಾಪಕ ವಿರೋಧ ವ್ಯಕ್ತವಾಗಿ ರೈತರೆಲ್ಲರೂ ಒಗ್ಗೂಡಿಕೊಂಡು ಹೋರಾಟ ಕೈಗೊಂಡಾಗ ಈ ಶಾಸಕರು ಎಲ್ಲಿಗೆ ಹೋಗಿದ್ದರು ಎಂದು ಜನಪ್ರತಿನಿಧಿಗಲ ಕುರಿತು ವಾಗ್ದಾಳಿ ನಡೆಸಿದ್ದಾರೆ.

ಕುಡಿತಿನಿ ಶ್ರೀನಿವಾಸ್​
author img

By

Published : Jun 18, 2019, 5:25 PM IST

ಬಳ್ಳಾರಿ: ರಾಜ್ಯ ಸರ್ಕಾರ‌ ಜಿಂದಾಲ್ ಉಕ್ಕು ಕಾರ್ಖಾನೆಗೆ ಅಂದಾಜು 3,666 ಎಕರೆ ಭೂಮಿ ಪರಭಾರೆ ಮಾಡುತ್ತಿರುವ ಕುರಿತು ಜನ ಪ್ರತಿನಿಧಿಗಳ ನಡುವೆ ಪರ- ವಿರೋಧ ಶುರುವಾಗಿರೋದು ರಾಜಕೀಯ ಗಿಮಿಕ್ ಎಂದು ರೈತ ಮುಖಂಡ ಕುಡಿತಿನಿ ಶ್ರೀನಿವಾಸ್​ ವಾಗ್ದಾಳಿ ನಡೆಸಿದ್ದಾರೆ.

ಜಿಂದಾಲ್ ಸಂಸ್ಥೆಗೆ ಭೂಮಿ ಪರ- ವಿರೋಧ ರಾಜಕೀಯ ಗಿಮಿಕ್ ಎಂದ ಕುಡಿತಿನಿ ಶ್ರೀನಿವಾಸ್

ಬಳ್ಳಾರಿಯ ಖಾಸಗಿ ಹೊಟೆಲ್​ನಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನ ಪರಿಷತ್ ಸದಸ್ಯ ಕೆ.ಸಿ.ಕೊಂಡಯ್ಯನವರು ಕೈಗಾರಿಕೆಗಳ ಪರವೆಂದು ಬಹಿರಂಗವಾಗಿ ಹೇಳುತ್ತಾರೆ. ವಿಜಯನಗರ ಕ್ಷೇತ್ರದ ಶಾಸಕ ಬಿ.ಎಸ್.ಆನಂದಸಿಂಗ್, ಮಾಜಿ ಶಾಸಕ ಹೆಚ್.ಅನಿಲ್ ಲಾಡ್ ಅವರು ರೈತರ ಪರವಾಗಿರುವಂತೆ ನಾಟಕವಾಡುತ್ತಿದ್ದಾರೆ. ಇಷ್ಟು ದಿನ ಜಿಂದಾಲ್ ಕಾರ್ಖಾನೆ ಸುತ್ತಲಿನ ಗ್ರಾಮಗಳತ್ತ ತಿರುಗಿಯೇ ನೋಡದ ಉಭಯ ನಾಯಕರಿಗೆ ಈಗ ಯಾಕಿಷ್ಟು ಪ್ರೀತಿ ಎಂದು ಶ್ರೀನಿವಾಸ್​ ಛೇಡಿಸಿದ್ದಾರೆ.

ಇದೆಲ್ಲ ಕಿಕ್ ಬ್ಯಾಕ್ ಪಡೆಯೋಕೆ ನಾಟಕವಷ್ಟೇ:
ಕೊಂಡಯ್ಯ ಕೈಗಾರಿಕೋದ್ಯಮಿಗಳ ಪರವಾಗಿ ನಿಂತರೆ. ಶಾಸಕ ಆನಂದ ಸಿಂಗ್ ಮತ್ತು ಮಾಜಿ ಶಾಸಕ ಅನಿಲ್ ಲಾಡ್ ಅವರು ರೈತರ ಪರವಾಗಿ ನಿಂತಂತೆ ನಟಿಸುತ್ತಾರೆ. ಹೀಗಾಗಿ, ಜಿಲ್ಲೆಯ ಸ್ವಪಕ್ಷದ ಜನಪ್ರತಿನಿಧಿಗಳ ನಡೆ ಬಹಳ ನಿಗೂಢವಾಗಿದೆ. ಜಿಂದಾಲ್ ಸಂಸ್ಥೆಯಿಂದ ಕಿಕ್ ಬ್ಯಾಕ್ ಪಡೆಯೋದು ಒಂದೇ ಅವರ ಗುರಿಯಾಗಿದೆ. ಅವರ ಮಾತನ್ನು ಯಾರು ನಂಬಬಾರದು ಎಂದು ರೈತರಿಗೆ ಕಿವಿಮಾತು ಹೇಳಿದರು.

ಪ್ರಮಾಣ ಮಾಡಲಿ:
ಜಿಂದಾಲ್ ಸಮೂಹ ಸಂಸ್ಥೆ ಪರವಾಗಿ ನಿಲ್ಲದೇ ರೈತರ ಪರವಾಗಿ ಸದಾ ಇರುತ್ತೇನೆಂದು ದೇಗುಲದಲ್ಲಿ ಶಾಸಕ ಆನಂದಸಿಂಗ್, ಮಾಜಿ ಶಾಸಕ ಅನಿಲ್ ಲಾಡ್ ಅವರು ಆಣೆ, ಪ್ರಮಾಣ ಮಾಡಲಿ. ನಾವೆಲ್ಲ ಅವರೊಂದಿಗೆ ಇರುತ್ತೇವೆ. ಅದುಬಿಟ್ಟು ಇಂತಹ ಡೋಂಗಿತನವನ್ನು ಮೊದಲು ಅವರು ಬಿಡಬೇಕೆಂದು ತಾಕೀತು ಮಾಡಿದ್ದಾರೆ.

ಸಿಎಂ ಇಲ್ಲೇ ಗ್ರಾಮ ವಾಸ್ತವ್ಯ ಮಾಡಲಿ:
ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಗ್ರಾಮವೊಂದರಲ್ಲಿ ಸಿಎಂ ಕುಮಾರಸ್ವಾಮಿ ಅವರು ಗ್ರಾಮ ವಾಸ್ತವ್ಯ ಮಾಡಲಿದ್ದಾರೆ. ಜಿಲ್ಲೆಯ ರೈತರ ನಿಯೋಗದೊಂದಿಗೆ ತೆರಳಿ ಅವರನ್ನು ಭೇಟಿ ಯಾಗಿ ಸಂಡೂರು ತಾಲೂಕಿನ ವೇಣಿವೀರಾಪುರ, ಕುಡಿತಿನಿ, ವಡ್ಡು, ಬಸಾಪುರ ಗ್ರಾಮಗಳಲ್ಲಿ ಗ್ರಾಮ ವಾಸ್ತವ್ಯ ಮಾಡಿ ಎಂದು ಮನವಿ ಮಾಡಿಕೊಳ್ಳುತ್ತೇವೆ ಎಂದರು.

Intro:ಜಿಂದಾಲ್ ಸಂಸ್ಥೆಗೆ ಭೂಮಿ ಪರಭಾರೆ ಪರ - ವಿರೋಧ: ರಾಜಕೀಯ ಗಿಮಿಕ್!
ಬಳ್ಳಾರಿ: ರಾಜ್ಯ ಸರ್ಕಾರ‌ ಜಿಂದಾಲ್ ಉಕ್ಕು ಕಾರ್ಖಾನೆಗೆ ಅಂದಾಜು 3,666 ಎಕರೆ ಭೂಮಿ ಪರಭಾರೆ ಕುರಿತು ಜನ ಪ್ರತಿನಿಧಿಗಳ ನಡುವೆ ಪರ- ವಿರೋಧ ಶುರುವಾಗಿರೋದು ರಾಜಕೀಯ ಗಿಮಿಕ್ ಎಂದು ರೈತ ಮುಖಂಡ ಕುಡಿತಿನಿ ಶ್ರೀ ನಿವಾಸ ವಾಗ್ದಾಳಿ ನಡೆಸಿದ್ದಾರೆ.
ಬಳ್ಳಾರಿಯ ಖಾಸಗಿ ಹೊಟೇಲ್ ನಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ವಿಧಾನ ಪರಿಷತ್ ಸದಸ್ಯ ಕೆ.ಸಿ.ಕೊಂಡಯ್ಯನವರು ಕೈಗಾರಿಕೆಗಳ ಪರವೆಂದು ಬಹಿರಂಗವಾಗಿ ಹೇಳುತ್ತಾರೆ. ವಿಜಯನಗರ ಕ್ಷೇತ್ರದ ಶಾಸಕ ಬಿ.ಎಸ್.ಆನಂದಸಿಂಗ್, ಮಾಜಿ ಶಾಸಕ ಹೆಚ್.ಅನಿಲ್ ಲಾಡ್ ಅವರು ರೈತರ ಪರವಾಗಿರುವಂತೆ ನಾಟಕವಾಡುತ್ತಿದ್ದಾರೆ. ಇಷ್ಟು ದಿನ ಜಿಂದಾಲ್ ಕಾರ್ಖಾನೆ ಸುತ್ತಲಿನ ಗ್ರಾಮಗಳತ್ತ ತಿರುಗಿಯೇ ನೋಡದ ಉಭಯ ನಾಯಕರಿಗೆ ಇವಾಗ ಯಾಕಿಷ್ಟು ಪ್ರೀತಿ ಎಂದು ಶ್ರೀನಿವಾಸ ಛೇಡಿಸಿದ್ದಾರೆ.
ಸಂಡೂರು ತಾಲೂಕಿನ ವಿವಿಧ ಗ್ರಾಮಗಳಿಗೆ ನಿನ್ನೆಯ ದಿನ ಭೇಟಿಕೊಟ್ಟು ರೈತರೇ ನಿಮ್ಮೊಂದಿಗೆ ನಾವಿದ್ದೇವೆ ಅಂತಾ ಭರವಸೆ ನೀಡುತ್ತಿದ್ದಾರೆ. ಜಿಂದಾಲ್ ಸಮೂಹ ಸಂಸ್ಥೆಯು ಡಾಂಬರ್ ಕಾರ್ಖಾನೆ ಸ್ಥಾಪನೆಗೆ ವ್ಯಾಪಕ ವಿರೋಧ ವ್ಯಕ್ತವಾದ್ರೆ ರೈತರೆಲ್ಲರೂ ಒಗ್ಗೂಡಿಕೊಂಡು ಹೋರಾಟ ಕೈಗೊಂಡಾಗ ಈ ಶಾಸಕರು ಎಲ್ಲಿಗೆ ಹೋಗಿದ್ದರು. ಇನ್ನೂ ಕೊಂಡಯ್ಯನವರಂತೂ ಕೈಗಾರಿಕೆಗಳ ಪರವಾಗಿ ನಾನಿದ್ದೇನೆ ಎನ್ನುತ್ತಾರಲ್ಲ.‌ ಇವರದೇನ್ ಒಂದಿಚೂ ಭೂಮಿಯೇನಾದ್ರೂ ಇದೆಯಾ?. ಕಿಂಚಿತ್ತೂ ಭೂಮಿ ಹೊಂದಿರ ಕೊಂಡಯ್ಯನವರು ಕೈಗಾರಿಕೆ ಪರ ನಿಂತಿರೋದು ರಾಜಕಾರಣಕ್ಕೆ ಅವಮಾನ ಎಂದು ವಾಗ್ದಾಳಿ ನಡೆಸಿದ್ದಾರೆ.

Body:ಇದೆಲ್ಲ ಕಿಕ್ ಬ್ಯಾಕ್ ಪಡೆಯೋಕೆ ನಾಟಕವಷ್ಟೇ: ಕೊಂಡಯ್ಯ ಕೈಗಾರಿಕೋದ್ಯಮಿಗಳ ಪರವಾಗಿ ನಿಂತರೆ. ಶಾಸಕ ಆನಂದ ಸಿಂಗ್ ಮತ್ತು ಮಾಜಿ ಶಾಸಕ ಅನಿಲ್ ಲಾಡ್ ಅವರು ರೈತರ ಪರವಾಗಿ ನಿಂತಂತೆ ನಟಿಸುತ್ತಾರೆ. ಹೀಗಾಗಿ, ಜಿಲ್ಲೆಯ ಸ್ವಪಕ್ಷದ ಜನಪ್ರತಿನಿಧಿಗಳ ನಡೆ ಬಹಳ ನಿಗೂಢವಾಗಿದೆ. ಜಿಂದಾಲ್ ಸಂಸ್ಥೆಯಿಂದ ಕಿಕ್ ಬ್ಯಾಕ್ ಪಡೆಯೋದು ಒಂದೇ ಅವರ ಗುರಿ ಯಾಗಿದೆ. ಅವರ ಮಾತನ್ನು ಯಾರನ್ನೂ ನಂಬಬಾರದು ಎಂದು ರೈತರಿಗೆ ಕಿವಿಮಾತು ಹೇಳಿದರು.
ಪ್ರಮಾಣ ಮಾಡಲಿ: ಜಿಂದಾಲ್ ಸಮೂಹ ಸಂಸ್ಥೆ ಪರವಾಗಿ ನಿಲ್ಲದೇ ರೈತರ ಪರವಾಗಿ ಸದಾ ಇರುತ್ತೇನೆಂದು ದೇಗುಲದಲ್ಲಿ ಶಾಸಕ ಆನಂದಸಿಂಗ್, ಮಾಜಿ ಶಾಸಕ ಅನಿಲ್ ಲಾಡ್ ಅವರು ಆಣೆ, ಪ್ರಮಾಣ ಮಾಡಲಿ. ನಾವೆಲ್ಲ ಅವರೊಂದಿಗೆ ಇರುತ್ತೇವೆ. ಅದುಬಿಟ್ಟು ಇಂತಹ ಡೋಂಗಿತನವನ್ನು ಮೊದಲು ಅವರು ಬಿಡಬೇಕೆಂದು ತಾಕೀತು ಮಾಡಿದ್ದಾರೆ.
ಸಿಎಂ ಇಲ್ಲೇ ಗ್ರಾಮ ವಾಸ್ತವ್ಯ ಮಾಡಲಿ: ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಗ್ರಾಮವೊಂದರಲ್ಲಿ ಸಿಎಂ ಕುಮಾರಸ್ವಾಮಿ ಅವರು ಗ್ರಾಮ ವಾಸ್ತವ್ಯ ಮಾಡಲಿದ್ದಾರೆ. ಜಿಲ್ಲೆಯ ರೈತರ ನಿಯೋಗದೊಂದಿಗೆ ತೆರಳಿ ಅವರನ್ನು ಭೇಟಿ ಯಾಗಿ ಸಂಡೂರು ತಾಲೂಕಿನ ವೇಣಿವೀರಾಪುರ, ಕುಡಿತಿನಿ, ವಡ್ಡು, ಬಸಾಪುರ ಗ್ರಾಮಗಳಲ್ಲಿ ಗ್ರಾಮ ವಾಸ್ತವ್ಯ ಮಾಡಿ ಎಂದು ಮನವಿ ಮಾಡಿಕೊಳ್ಳುತ್ತೇವೆ ಎಂದರು.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_01_18_JINDAL_LAND_FARMERS_PRESS_MEET_BYTE_7203310

KN_BLY_01a_18_JINDAL_LAND_FARMERS_PRESS_MEET_BYTE_7203310

KN_BLY_01b_18_JINDAL_LAND_FARMERS_PRESS_MEET_BYTE_7203310

KN_BLY_01c_18_JINDAL_LAND_FARMERS_PRESS_MEET_VISUALS_7203310

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.