ಬಳ್ಳಾರಿ: ಜಿಲ್ಲೆಯ ಕೊಟ್ಟೂರು ತಾಲೂಕಿನ ಚಪ್ಪರದಹಳ್ಳಿ ಗ್ರಾಮದಲ್ಲಿ ವಿದ್ಯುತ್ ಸ್ಪರ್ಶಿಸಿ ಓರ್ವ ವ್ಯಕ್ತಿ ಹಾಗೂ ಹಸು ಸಾವನ್ನಪ್ಪಿರುವ ಘಟನೆ ನಡೆದಿದೆ.
ಚಪ್ಪರದಹಳ್ಳಿ ಗ್ರಾಮದ ಹಾಲೇಶ (28) ಮೃತ ರೈತನೆಂದು ಗುರುತಿಸಲಾಗಿದೆ. ಹೊಲದಲ್ಲಿ ಕೆಲಸ ಮಾಡಲು ತೆರಳಿದಾಗ ಹಸುವಿಗೆ ವಿದ್ಯುತ್ ಸ್ಪರ್ಶಿಸಿ ಒದ್ದಾಡುತ್ತಿರುವುದನ್ನು ಕಂಡ ರೈತ ಹಾಲೇಶ, ಹಸುವನ್ನ ರಕ್ಷಿಸಲು ಹೋದಾಗ ಆತನಿಗೂ ಶಾಕ್ ತಗುಲಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.
ಕೊಳವೆ ಬಾವಿಗೆ ತಾತ್ಕಾಲಿಕವಾಗಿ ನಿಲ್ಲಿಸಿದ್ದ ಕಟ್ಟಿಗೆಯ ಕಂಬ ಶನಿವಾರ ಬಂದ ಮಳೆಗೆ ಬಿದ್ದಿದ್ದು, ಕರೆಂಟ್ ಲೈನ್ಗಳು ಕೆಸರಲ್ಲಿ ಬಿದ್ದಿವೆ. ಆ ಕಡೆಗೆ ಹಸು ಮೇಯುತ್ತ ಹೋದಾಗ ಅವಘಡ ಸಂಭವಿಸಿದೆ ಎನ್ನಲಾಗಿದೆ. ಕೊಟ್ಟೂರು ಪಿಎಸ್ಐ ಎ.ಕಾಳಿಂಗ, ಜೆಸ್ಕಾಂ ಎಂಜಿನಿಯರ್ ಕೊಟ್ರೇಶ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.