ETV Bharat / state

ತಹಶೀಲ್ದಾರ್ ನಾಗರಾಜ ನೇತೃತ್ವದಲ್ಲಿ ದಾಳಿ : ಮುಂಡರಗಿಯಲ್ಲಿ ಓರ್ವ ನಕಲಿ ವೈದ್ಯ ವಶಕ್ಕೆ

ಮುಂಡರಗಿಯಲ್ಲಿ‌ ಸೋಮಶೇಖರ್ ಎಂಬಾತ ಆರ್.ಎಂ.ಪಿ ಡಾಕ್ಟರ್ ನಕಲಿ ಪ್ರಮಾಣಪತ್ರ ಮತ್ತು ನಕಲಿ ಐಡಿ ಕಾರ್ಡ್ ಇಟ್ಟುಕೊಂಡು ‌ಜನರಿಗೆ‌ ಚಿಕಿತ್ಸೆ ನೀಡುತ್ತಿದ್ದ. ಈ ಬಗ್ಗೆ ಖಚಿತ ಮಾಹಿತಿ ಪಡೆದ ತಹಶೀಲ್ದಾರ್ ನಾಗರಾಜ ಹಾಗೂ ತಾಲೂಕು ಆರೋಗ್ಯ ಇಲಾಖೆ ಅಧಿಕಾರಿ ಅಬ್ದುಲ್ಲಾ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ, ಓರ್ವ ನಕಲಿ ವೈದ್ಯರನ್ನು ಪತ್ತೆ ಹಚ್ಚಿ, ಅವರು ನಡೆಸುತ್ತಿದ್ದ ಕ್ಲಿನಿಕ್​ ಸೀಜ್ ಮಾಡಿದ್ದಾರೆ.

fake doctor arrested in Mundaragi
ತಹಶೀಲ್ದಾರ್ ನಾಗರಾಜ ನೇತೃತ್ವದಲ್ಲಿ ದಾಳಿ : ಮುಂಡರಗಿಯಲ್ಲಿ ಓರ್ವ ನಕಲಿ ವೈದ್ಯ ವಶಕ್ಕೆ
author img

By

Published : Apr 16, 2020, 5:11 PM IST

ಬಳ್ಳಾರಿ: ತಹಶೀಲ್ದಾರ್ ನಾಗರಾಜ ಹಾಗೂ ತಾಲೂಕು ಆರೋಗ್ಯ ಇಲಾಖೆ ಅಧಿಕಾರಿ ಅಬ್ದುಲ್ಲಾ ನೇತೃತ್ವದ ತಂಡ ಬಳ್ಳಾರಿ ತಾಲೂಕಿನ ಮುಂಡರಗಿಯಲ್ಲಿ ಕಾರ್ಯಾಚರಣೆ ನಡೆಸಿ, ಓರ್ವ ನಕಲಿ ವೈದ್ಯರನ್ನು ಪತ್ತೆ ಹಚ್ಚಿ, ಅವರು ನಡೆಸುತ್ತಿದ್ದ ಕ್ಲಿನಿಕ್​ ಸೀಜ್ ಮಾಡಿದ್ದಾರೆ.

ಮುಂಡರಗಿಯಲ್ಲಿ‌ ಸೋಮಶೇಖರ್ ಎಂಬಾತ ಆರ್.ಎಂ.ಪಿ ಡಾಕ್ಟರ್ ನಕಲಿ ಪ್ರಮಾಣಪತ್ರ ಮತ್ತು ನಕಲಿ ಐಡಿ ಕಾರ್ಡ್ ಇಟ್ಟುಕೊಂಡು ‌ಜನರಿಗೆ‌ ಚಿಕಿತ್ಸೆ ನೀಡುತ್ತಿದ್ದ. ಅಲ್ಲದೇ ಸ್ಟೀರಾಯ್ಡ್ ಮತ್ತು ಓವರ್ ಡೋಸ್​ ನೀಡುತ್ತಿರುವುದು ತನಿಖೆ ವೇಳೆ ತಿಳಿದು ಬಂದಿದೆ ಎಂದು ತಹಶೀಲ್ದಾರ್ ನಾಗರಾಜ ಅವರು ತಿಳಿಸಿದ್ದಾರೆ. ಅಲ್ಲದೇ ಕರ್ನಾಟಕ ಮೆಡಿಕಲ್ ಅಸೋಸಿಯೇಶನ್ ಸಂಬಂಧಿಸಿದ ಯಾವುದೇ ಪ್ರಮಾಣಪತ್ರ ಕಾರ್ಯಾಚರಣೆ ನಡೆಸಿದ ಸಂದರ್ಭದಲ್ಲಿ ದೊರೆತಿಲ್ಲ ಎಂದು ಅವರು ವಿವರಿಸಿದ್ದಾರೆ.

ಸದ್ಯ ನಕಲಿ ವೈದ್ಯ ಸೋಮಶೇಖರ್ ಅವರನ್ನು ಬಳ್ಳಾರಿ ಗ್ರಾಮೀಣ ಪೊಲೀಸರ ವಶಕ್ಕೆ ನೀಡಲಾಗಿದ್ದು, ಪ್ರಕರಣ ದಾಖಲಿಸುವಂತೆ ಸೂಚಿಸಲಾಗಿದೆ ಎಂದು ತಹಶೀಲ್ದಾರ್ ನಾಗರಾಜ ಅವರು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.