ETV Bharat / state

ಬಳ್ಳಾರಿಯಲ್ಲಿ ಇನ್ನೂ ನನಸಾಗದ ಇಎಸ್ಐ ಆಸ್ಪತ್ರೆ...ದೂರದೂರಿನತ್ತ ಕಾರ್ಮಿಕರ ಚಿತ್ತ - 5 ಲಕ್ಷ ಜನರು ಇಎಸ್ಐ ಆಸ್ಪತ್ರೆಯ ಸೌಲಭ್ಯ

ಬಳ್ಳಾರಿ ಜಿಲ್ಲೆಯಲ್ಲಿ ಲಕ್ಷಕ್ಕೂ ಅಧಿಕ ಕಾರ್ಮಿಕರು ವಿವಿಧ ಕಂಪನಿ, ಫ್ಯಾಕ್ಟರಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರ ಕುಟುಂಬ ಸದಸ್ಯರು ಸೇರಿ ಸುಮಾರು 5 ಲಕ್ಷ ಜನರು ಇಎಸ್ಐ ಆಸ್ಪತ್ರೆಯ ಸೌಲಭ್ಯ ಪಡೆಯುವವರು ಇದ್ದಾರೆ. ಇಷ್ಟೊಂದು ಪ್ರಮಾಣದಲ್ಲಿ ಕಾರ್ಮಿಕರು ಇರೋ ಜಿಲ್ಲೆಯಲ್ಲಿ ಇದುವರೆಗೆ ಸರ್ಕಾರ ಇಎಸ್ಐ ಆಸ್ಪತ್ರೆ ನಿರ್ಮಾಣ ಮಾಡಿಲ್ಲ.

esi-hospital-problem-in-bellary
ಬಳ್ಳಾರಿಯಲ್ಲಿ ಇನ್ನೂ ನನಸಾಗದ ಇಎಸ್ಐ ಆಸ್ಪತ್ರೆ.
author img

By

Published : Mar 23, 2020, 10:20 AM IST

ಬಳ್ಳಾರಿ: ಗಣಿನಾಡು ಬಳ್ಳಾರಿ ಅತ್ಯಂತ ಖನಿಜ ಸಂಪತ್ತು ಹೊಂದಿರೋ ಜಿಲ್ಲೆ. ಆ ಜಿಲ್ಲೆಯಲ್ಲಿ ಪ್ರತಿಷ್ಠಿತ ಉಕ್ಕಿನ ಹಾಗೂ ಸ್ಪಾಂಜ್ ಐರನ್‌ ಕಾರ್ಖಾನೆಗಳಿವೆ. ನಾನಾ ಕಾರ್ಖಾನೆ ಹಾಗೂ ಗಣಿಗಾರಿಕೆ ಪ್ರದೇಶಗಳಲ್ಲಿ ಕೆಲಸ ಮಾಡೋ ಒಂದು ಲಕ್ಷಕ್ಕೂ ಅಧಿಕ ಕಾರ್ಮಿಕರಿದ್ದಾರೆ. ದುರಂತವೆಂದ್ರೆ ಈ ಜಿಲ್ಲೆಯಲ್ಲಿ ಇಎಸ್ ಐ ಆಸ್ಪತ್ರೆ ಇಲ್ಲದಂತಾಗಿದೆ.

ಬಳ್ಳಾರಿಯಲ್ಲಿ ಇನ್ನೂ ನನಸಾಗದ ಇಎಸ್ಐ ಆಸ್ಪತ್ರೆ.

ಜಿಲ್ಲೆಯಲ್ಲಿ ಲಕ್ಷಕ್ಕೂ ಅಧಿಕ ಕಾರ್ಮಿಕರು ವಿವಿಧ ಕಂಪನಿ, ಫ್ಯಾಕ್ಟರಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರ ಕುಟುಂಬ ಸದಸ್ಯರು ಸೇರಿ ಸುಮಾರು 5 ಲಕ್ಷ ಜನರು ಇಎಸ್ಐ ಆಸ್ಪತ್ರೆಯ ಸೌಲಭ್ಯ ಪಡೆಯುವವರು ಇದ್ದಾರೆ. ಇಷ್ಟೊಂದು ಪ್ರಮಾಣದಲ್ಲಿ ಕಾರ್ಮಿಕರು ಇರೋ ಜಿಲ್ಲೆಯಲ್ಲಿ ಇದುವರೆಗೆ ಸರ್ಕಾರ ಇಎಸ್ಐ ಆಸ್ಪತ್ರೆ ನಿರ್ಮಾಣ ಮಾಡಿಲ್ಲ. ಹೀಗಾಗಿ ಕಾರ್ಮಿಕರು ಹಾಗೂ ಅವರ ಕುಟುಂಬಸ್ಥರು ದಾವಣೆಗೆರೆ, ಬೆಂಗಳೂರು ಆಸ್ಪತ್ರೆಗಳಿಗೆ ಹೋಗಿ ಚಿಕಿತ್ಸೆ ಪಡೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಸರ್ಕಾರ ಹಾಗೂ ಈ ಭಾಗದ ಜನಪ್ರತಿನಿಧಿಗಳ ನಿರ್ಲಕ್ಷ್ಯ ದಿಂದ ಇದುವರೆಗೆ ಆಸ್ಪತ್ರೆ ನಿರ್ಮಾಣವಾಗಿಲ್ಲ. ಅಲ್ಲದೇ ಈಗ ಆಸ್ಪತ್ರೆ ಮಂಜೂರಾದ್ರೂ ಜಾಗದ ಕೊರತೆ ಕಾಡುತ್ತಿದೆ. ರಾಜ್ಯ ಸರ್ಕಾರ ಕೂಡಲೇ ಆಸ್ಪತ್ರೆ ನಿರ್ಮಾಣ ಮಾಡುವ ಮೂಲಕ ಈ ಭಾಗದ ಕಾರ್ಮಿಕರಿಗೆ ಆರೋಗ್ಯ ಸಂಜೀವಿನಿ ಆಗಬೇಕಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.