ಬಳ್ಳಾರಿ: ಜಿಲ್ಲೆಯ ಸಿರುಗುಪ್ಪ ನಗರಸಭೆ - ತೆಕ್ಕಲಕೋಟೆ ಪಟ್ಟಣ ಪಂಚಾಯಿತಿಗೆ ಫೆಬ್ರವರಿ 9 ರಂದು ನಡೆಯಲಿರುವ ಚುನಾವಣೆಗೆ ಅಂದಾಜು 51 ಸ್ಥಾನಗಳಿಗೆ ಸುಮಾರು 134 ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದಾರೆ.
ಜಿಲ್ಲೆಯ ಸಿರುಗುಪ್ಪ ನಗರಸಭೆಯ 31 ಸ್ಥಾನಗಳಿಗೆ ಒಟ್ಟಾರೆ 87 ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದರೆ, ತೆಕ್ಕಲಕೋಟೆ ಪಟ್ಟಣ ಪಂಚಾಯಿತಿ 20 ಸ್ಥಾನಗಳಿಗೆ ಒಟ್ಟು 47 ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ. ಸಿರುಗುಪ್ಪ ನಗರಸಭೆಯ 31 ಸ್ಥಾನಗಳಿಗೆ 119 ಮಂದಿ ಉಮೇದುದಾರರು ನಾಮಪತ್ರ ಸಲ್ಲಿಸಿದ್ದರು. ಅಂದಾಜು 32 ಮಂದಿ ಉಮೇದುವಾರರು ನಾಮಪತ್ರ ವಾಪಸ್ ಪಡೆದು ಅಂತಿಮವಾಗಿ 87 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ತೆಕ್ಕಲಕೋಟೆ ಪಟ್ಟಣ ಪಂಚಾಯಿತಿ 20 ಸ್ಥಾನಗಳ ಚುನಾವಣಾ ಕಣದಲ್ಲಿ ಅಂತಿಮವಾಗಿ 47 ಮಂದಿ ಉಮೇದುವಾರರು ಉಳಿದಿದ್ದಾರೆ. ಕಾಂಗ್ರೆಸ್ನಿಂದ 20, ಬಿಜೆಪಿಯಿಂದ 17, ಜೆಡಿಎಸ್ನಿಂದ 4, ಪಕ್ಷೇತರರು 6 ಜನರ ಮಧ್ಯೆ ಬಿರುಸಿನ ಸ್ಪರ್ಧೆ ಏರ್ಪಟ್ಟಿದೆ ಎನ್ನಲಾಗುತ್ತಿದೆ.