ಬಳ್ಳಾರಿ: ನಗರದ ರಾವ್ ಬಹದ್ದೂರ್ ವೈ. ಮಹಾಬಲೇಶ್ವರ ಎಂಜಿನಿಯರಿಂಗ್ ಕಾಲೇಜಿನಲ್ಲಿಂದು ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರ ಆಯ್ಕೆಯ ಚುನಾವಣೆ ಶಾಂತಿಯುತವಾಗಿ ನಡೆಯಿತು.
ಇಂದು ಮಧ್ಯಾಹ್ನ 1ರಿಂದ ಸಂಜೆ 6ರವರೆಗೆ ಮತದಾನ ಪ್ರಕ್ರಿಯೆ ನಡೆಯಿತು. ಸುಮಾರು 2,586 ಮಂದಿ ವೀರಶೈವ ವಿದ್ಯಾವರ್ಧಕ ಸಂಘದ ಸದಸ್ಯರಿದ್ದು, ಮತದಾರರೆಲ್ಲರೂ ಸಾಲು ಸಾಲಾಗಿ ಮತಗಟ್ಟೆ ಕೇಂದ್ರಕ್ಕೆ ಬಂದು ತಮ್ಮ ಹಕ್ಕನ್ನು ಚಲಾಯಿಸಿದರು.
ಇದನ್ನೂ ಓದಿ; 9ರಲ್ಲಿ 8 ಬೇಡಿಕೆ ಈಡೇರಿಸಿದರೂ ಯಾರ ಮೇಲಿನ ದ್ವೇಷಕ್ಕಾಗಿ ಮತ್ತೆ ಮುಷ್ಕರ: ಲಕ್ಷ್ಮಣ ಸವದಿ
ವೀರಶೈವ ವಿದ್ಯಾವರ್ಧಕ ಸಂಘದ ನಗರ ಪ್ರದೇಶದ 16 ಸ್ಥಾನಗಳಿಗೆ ಅಂದಾಜು 50 ಮಂದಿ ಸ್ಪರ್ಧಿಸಿದ್ದಾರೆ. ಗ್ರಾಮಾಂತರ ಪ್ರದೇಶದ ಸುಮಾರು 14 ಸ್ಥಾನಗಳಿಗೆ 44 ಮಂದಿ ಸ್ಪರ್ಧಿಸಿದ್ದಾರೆ. ಮತಗಟ್ಟೆಯಲ್ಲಿ 24 ಟೇಬಲ್ಗಳ ವ್ಯವಸ್ಥೆ ಮಾಡಲಾಗಿದ್ದು, ಸುಮಾರು 194 ಮಂದಿ ಸಿಬ್ಬಂದಿಯನ್ನು ಈ ಚುನಾವಣಾ ಪ್ರಕ್ರಿಯೆಗೆ ನಿಯೋಜನೆ ಮಾಡಲಾಗಿದೆ ಎಂದು ಸಂಘದ ಮೂಲಗಳು ತಿಳಿಸಿವೆ.