ಬಳ್ಳಾರಿ: ಬಳ್ಳಾರಿ ರೈಲ್ವೆ ನಿಲ್ದಾಣ ಮಾರ್ಗವಾಗಿ ಸಂಚರಿಸುವು ಕೆಲವು ರೈಲುಗಳನ್ನು ತಾತ್ಕಾಲಿಕವಾಗಿ ರದ್ದುಪಡಿಸಲಾಗಿದೆ ಎಂದು ನಿಲ್ದಾಣದ ವ್ಯವಸ್ಥಾಪಕ ಬಿ. ಶೇಷಾದ್ರಿ ತಿಳಿಸಿದರು.
'ಈಟಿವಿ ಭಾರತ್' ಜೊತೆಗೆ ಮಾತನಾಡಿ ಅವರು, ಆಂಧ್ರಪ್ರದೇಶದ ಡೋನ್ ಹಾಗೂ ಪೆಂಡೇಕಲ್ಲು ನಡುವೆ ರೈಲ್ವೆ ಡಬ್ಲಿಂಗ್ ಮಾರ್ಗದ ತಾಂತ್ರಿಕ ಕಾಮಗಾರಿ ಕೈಗೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಬಳ್ಳಾರಿ, ಹೊಸಪೇಟೆ, ದರೋಜಿ, ತೋರಣಗಲ್ಲು, ಕೊಪ್ಪಳ, ಮುನಿರಬಾದ್, ಗದಗ ಹಾಗೂ ಹುಬ್ಬಳ್ಳಿ ಮಾರ್ಗದಲ್ಲಿ ಪ್ರಯಾಣಿಸುವ ಹುಬ್ಬಳ್ಳಿ- ವಿಜಯವಾಡ ರೈಲಿನ ಸಂಚಾರವನ್ನು ತಾತ್ಕಾಲಿಕವಾಗಿ ರದ್ದುಪಡಿಸಲಾಗಿದೆ ಎಂದರು.
ರದ್ದಾಗಿರುವ ರೈಲುಗಳು:
1. ಹುಬ್ಬಳ್ಳಿ- ವಿಜಯವಾಡ ರೈಲು ಸಂಖ್ಯೆ ( 56502 ) ಫೆಬ್ರವರಿ 19 ರಿಂದ ಮಾರ್ಚ್ 6ವರೆಗೆ ಸ್ಥಗಿತ
೨. ವಿಜಯವಾಡ- ಹುಬ್ಬಳ್ಳಿ ರೈಲು ಸಂಖ್ಯೆ ( 56501 ) ಫೆಬ್ರವರಿ 20 ರಿಂದ ಮಾರ್ಚ್ 7ವರೆಗೆ ಸಂಚರಿಸುವುದಿಲ್ಲ