ETV Bharat / state

ರೆಡ್ಡಿ ಸಹೋದರರು, ಶ್ರೀರಾಮುಲುಗೆ ಸಚಿವ ಸ್ಥಾನ‌ ನೀಡಬೇಡಿ: ಟಪಾಲ್​​​​ ಗಣೇಶ್​​​​ - ವಾಲ್ಮೀಕಿ ಸಮುದಾಯ

ಈ ಹಿಂದೆ ಬಿಎಸ್​​ವೈ ಅಧಿಕಾರಾವಧಿಯಲ್ಲಿ ಗಣಿ ಅಕ್ರಮದ ಮೂಲಕ ಗಾಲಿ ಜನಾರ್ದನ ರೆಡ್ಡಿ ಅವರು ತಮ್ಮ ವರ್ಚಸ್ಸಿಗೆ ಧಕ್ಕೆ ತಂದಿದ್ದಾರೆ. ಅಂದಿನ ಸರ್ಕಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಗಾಲಿ ಜನಾರ್ದನ ರೆಡ್ಡಿ, ಕಂದಾಯ ಸಚಿವರಾಗಿದ್ದ ಗಾಲಿ ಕರುಣಾಕರ ರೆಡ್ಡಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾಗಿದ್ದ ಬಿ.ಶ್ರೀರಾಮುಲು ಅವರು ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಗಣಿ ಉದ್ಯಮಿ ಟಪಾಲ್ ಗಣೇಶ್​ ಆರೋಪಿಸಿದರು.

ಗಣಿ ಉದ್ಯಮಿ ಟಪಾಲ್ ಗಣೇಶ ಆಗ್ರಹ
author img

By

Published : Jul 29, 2019, 6:03 PM IST

ಬಳ್ಳಾರಿ: ಮೊಳಕಾಲ್ಮೂರು ಶಾಸಕ ಬಿ.ಶ್ರೀರಾಮುಲು ಹಾಗೂ ಬಳ್ಳಾರಿ ರೆಡ್ಡಿ ಸಹೋದರರಾದ ಗಾಲಿ ಸೋಮಶೇಖರ ರೆಡ್ಡಿ, ಗಾಲಿ ಕರುಣಾಕರ ರೆಡ್ಡಿ ಅವರಿಗೆ ಯಾವುದೇ ಸಚಿವ ಸ್ಥಾನವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನೀಡಬಾರದು ಎಂದು ಗಣಿ ಉದ್ಯಮಿ ಟಪಾಲ್ ಗಣೇಶ್​ ಆಗ್ರಹಿಸಿದ್ದಾರೆ.

ಈ ಬಗ್ಗೆ ಫೇಸ್​​ಬುಕ್​ನಲ್ಲಿ ವಿಡಿಯೋ ಮೂಲಕ ಮಾತನಾಡಿರುವ ಅವರು, ಈ ಹಿಂದೆ ಬಿಎಸ್​​ವೈ ಅಧಿಕಾರಾವಧಿಯಲ್ಲಿ ಗಣಿ ಅಕ್ರಮದ ಮೂಲಕ ಗಾಲಿ ಜನಾರ್ದನ ರೆಡ್ಡಿ ಅವರು ತಮ್ಮ ವರ್ಚಸ್ಸಿಗೆ ಧಕ್ಕೆ ತಂದಿದ್ದಾರೆ. ಅಂದಿನ ಸರ್ಕಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಗಾಲಿ ಜನಾರ್ದನ ರೆಡ್ಡಿ, ಕಂದಾಯ ಸಚಿವರಾಗಿದ್ದ ಗಾಲಿ ಕರುಣಾಕರ ರೆಡ್ಡಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾಗಿದ್ದ ಬಿ.ಶ್ರೀರಾಮುಲು ಅವರು ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದ್ದಾರೆ.‌ ಹೀಗಾಗಿ, ಈ ಸಚಿವ ಸಂಪುಟದಲ್ಲಿ ರೆಡ್ಡಿ ಸಹೋದರರು, ಅವರ ಆಪ್ತ ಬಿ.ಶ್ರೀರಾಮುಲು ಅವರಿಗೆ ಯಾವುದೇ ಸ್ಥಾನಮಾನ‌ ನೀಡಬಾರದು ಎಂದು ಒತ್ತಾಯಿಸಿದ್ದಾರೆ.

ಗಣಿ ಉದ್ಯಮಿ ಟಪಾಲ್ ಗಣೇಶ್​

ವಾಲ್ಮೀಕಿ ಸಮುದಾಯ ಕೋಟಾದಡಿ ಶಾಸಕ ಬಿ.ಶ್ರೀರಾಮುಲು ಅವರು ಉಪ ಮುಖ್ಯಮಂತ್ರಿಯಾಗುವ ಕನಸಿಗೆ ಈಗ ಅಡ್ಡಗಾಲು ಎದುರಾಗಿದೆ. ಶ್ರೀರಾಮುಲುಗೆ ಸಚಿವ ಸ್ಥಾನ ಅಥವಾ ಡಿಸಿಎಂ ಹುದ್ದೆ ನೀಡಿದರೆ ಅದು ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಗೆ ನೀಡಿದಂತಾಗುತ್ತದೆ ಎಂಬ ದೂರುಗಳು ಸಾರ್ವಜನಿಕ ವಲಯದಲ್ಲಿ ದಟ್ಟವಾಗಿವೆ.

Intro:ರೆಡ್ಡಿ ಸಹೋದರರು, ಶ್ರೀರಾಮುಲುಗೆ ಸಚಿವ ಸ್ಥಾನ‌ ನೀಡದಂತೆ ಟಪಾಲ್ ಗಣೇಶ ಆಗ್ರಹ
ಬಳ್ಳಾರಿ: ಮೊಳಕಾಲ್ಮೂರು ಶಾಸಕ ಬಿ.ಶ್ರೀರಾಮುಲು ಹಾಗೂ ರೆಡ್ಡಿ ಸಹೋದರರಾದ ಗಾಲಿ ಸೋಮಶೇಖರರೆಡ್ಡಿ, ಗಾಲಿ ಕರುಣಾಕರ ರೆಡ್ಡಿ ಅವರಿಗೆ ಯಾವುದೇ ಸಚಿವ ಸ್ಥಾನವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನೀಡಬಾರದೆಂದು ಗಣಿ ಉದ್ಯಮಿ ಟಪಾಲ್ ಗಣೇಶ ಆಗ್ರಹಿಸಿದ್ದಾರೆ.
ಬಳ್ಳಾರಿಯಲ್ಲಿಂದು ಮುಖ್ಯಮಂತ್ರಿ ಬಿಎಸ್ ವೈ ವಿಶ್ವಾಸ ಮತಯಾಚನೆಯಲ್ಲಿ ಯಶಕಂಡಿರು ವುದನ್ನು ಅಭಿನಂದನೆ ಸಲ್ಲಿಸಿದ ಟಪಾಲ್ ಗಣೇಶ, ಬಿಎಸ್ ವೈ ಅಧಿಕಾರಾ ವಧಿಯಲ್ಲಿ ಗಣಿ ಅಕ್ರಮದ ರೂವಾರಿಯಾಗಿದ್ದ ಗಾಲಿ ಜನಾರ್ದನ ರೆಡ್ಡಿ ಅವರು ತಮ್ಮ ವರ್ಚಸ್ಸಿಗೆ ಧಕ್ಕೆ ತಂದಿದ್ದಾರೆ. ಅಂದಿನ ಸರ್ಕಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಗಾಲಿ ಜನಾರ್ದನರೆಡ್ಡಿ, ಕಂದಾಯ ಸಚಿವರಾಗಿದ್ದ ಗಾಲಿ ಕರುಣಾಕರರೆಡ್ಡಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾಗಿದ್ದ ಬಿ.ಶ್ರೀರಾಮುಲು ಅವರು ಅಧಿಕಾರವನ್ನು ದುರುಪಯೋಗ ಪಡೆಸಿಕೊಂಡಿದ್ದಾರೆ.‌ ಹೀಗಾಗಿ, ಈ ಸಚಿವ ಸಂಪುಟದಲ್ಲಿ ರೆಡ್ಡಿ ಸಹೋದರರು, ಅವರ ಆಪ್ತ ಬಿ.ಶ್ರೀರಾಮುಲು ಅವರಿಗೆ ಯಾವುದೇ ಸ್ಥಾನಮಾನ‌ ನೀಡ ಬಾರದೆಂದು ಒತ್ತಾಯಿಸಿದ್ದಾರೆ.
Body:ವಾಲ್ಮೀಕಿ ಸಮುದಾಯ ಕೋಟಾದಡಿ ಶಾಸಕ ಬಿ.ಶ್ರೀರಾಮುಲು ಅವರು ಉಪಮುಖ್ಯಮಂತ್ರಿಯಾಗುವ ಕನಸಿಗೆ ಈಗ ಅಡ್ಡಗಾಲು ಎದುರಾಗಿದೆ. ಶ್ರೀ ರಾಮುಲುಗೆ ಸಚಿವಸ್ಥಾನ ಅಥವಾ ಡಿಸಿಎಂ ಹುದ್ದೆ ನೀಡಿದರೆ ಅದು ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿಗೆ ನೀಡಿದಂತಾಗುತ್ತದೆ ಎಂಬ ದೂರುಗಳು ಸಾರ್ವಜನಿಕ ವಲಯದಲ್ಲಿ ದಟ್ಟವಾಗಿವೆ.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_3_MINE_OWNER_TAPAL_GANESH_BYTE_7203310
ETV Bharat Logo

Copyright © 2024 Ushodaya Enterprises Pvt. Ltd., All Rights Reserved.