ಬಳ್ಳಾರಿ: ದೇವೇಗೌಡ್ರು ಈ ದೇಶದ ಪ್ರಧಾನಿಯಾದವರು, ಆದರೆ ಸಿದ್ದರಾಮಯ್ಯ ದೇವೇಗೌಡ್ರಿಗೆ ಏಕವಚನ ಪ್ರಯೋಗ ಮಾಡುತ್ತಿದ್ದಾರೆ. ರಾಜಕೀಯ ವಿಚಾರದಲ್ಲಿ ದೇವೇಗೌಡರಿಗೆ ನಿಮ್ಮ ತಾಯಿ, ಮಕ್ಕಳ ಮೇಲೆ ಆಣೆ ಮಾಡಿ ಎಂದೆಲ್ಲಾ ಕೀಳಾಗಿ ಮಾತನಾಡುತ್ತಾರೆ. ಕಾಂಗ್ರೆಸ್‌ನವರಿಗೆ ತಾಕತ್ತಿದ್ದರೆ ದಲಿತ ನಾಯಕರ ಹೆಸರನ್ನು ಸಿಎಂ ಎಂದು ಘೋಷಿಸಲಿ ಎಂದು ಸಾರಿಗೆ ಸಚಿವ ಶ್ರೀರಾಮುಲು ಸವಾಲು ಹಾಕಿದರು.
ಬಳ್ಳಾರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನೀವು ದಲಿತ ಸಿಎಂ ಮಾಡ್ತೀವಿ ಎಂದು ನಿಮ್ಮ ಮಕ್ಕಳ ಮೇಲೆ ಆಣೆ ಮಾಡಿ ಸಿದ್ದರಾಮಯ್ಯನವರೇ. ಅವರಿವರ ಮಕ್ಕಳ ಮೇಲೆ ಆಣೆ ಮಾಡಿ ಎನ್ನುವ ನೀವು ಮೊದಲು ನಿಮ್ಮ ಮಕ್ಕಳ ಮೇಲೆ ಆಣೆ ಮಾಡಿ ಎಂದರು.
ಕಾಂಗ್ರೆಸ್ಗೆ ದೇಶದಲ್ಲೇ ಕೆಟ್ಟ ಪರಿಸ್ಥಿತಿ ಇದೆ. ಕಾಂಗ್ರೆಸ್ ಒಬ್ಬ ಚಾಣಕ್ಯ ನಾಯಕನನ್ನು ಸೆಳೆಯಲು ಯತ್ನಿಸಿತ್ತು. ಆದರೆ ಆ ವ್ಯಕ್ತಿ ಕಾಂಗ್ರೆಸ್ ಪಕ್ಷವನ್ನೇ ತಿರಸ್ಕರಿಸಿದರು. ಈಗ ಕಾಂಗ್ರೆಸ್ ನಾಯಕರಿಲ್ಲದ ಪಕ್ಷ ಎಂದು ಟೀಕಿಸಿದರು.
ನಾನು ಪಕ್ಷದ ನಿಷ್ಠವಂತ ಕಾರ್ಯಕರ್ತ: ಪಕ್ಷ ಯಾರು ಸೋಲುತ್ತಾರೆ, ಗೆಲ್ಲುತ್ತಾರೆ ಎಂಬುದರ ಬಗ್ಗೆ ಸಮೀಕ್ಷೆ ಮಾಡುತ್ತದೆ. ನಾನು ವಿಶೇಷ ಸರ್ವೆ ಮಾಡಿಸುತ್ತಿಲ್ಲ. ಪಕ್ಷ ಎಲ್ಲಿಂದ ಸ್ಪರ್ಧಿಸಲು ಹೇಳುತ್ತದೋ ಅಲ್ಲಿಂದ ಸ್ಪರ್ಧಿಸುವೆ ಎಂದು ತಿಳಿಸಿದರು.
ಇದನ್ನೂ ಓದಿ: ತುಮಕೂರು: ಜೆಡಿಎಸ್ 'ಜನತಾ ಜಲಧಾರೆ'ಗೆ ಸಿದ್ಧಲಿಂಗ ಸ್ವಾಮೀಜಿ ಚಾಲನೆ