ETV Bharat / state

ಶಾಂತಿಧಾಮಕ್ಕೆ ಜಿಲ್ಲಾಧಿಕಾರಿ ಭೇಟಿ: ಅಗತ್ಯ ಸೌಲಭ್ಯಗಳ ಪರಿಶೀಲನೆ - District Collector SS Nakul visits the Shantidhama

ಬಳ್ಳಾರಿಯ ಕಂಟೋನ್ಮೆಂಟ್ ವ್ಯಾಪ್ತಿಯಲ್ಲಿರುವ ಶಾಂತಿಧಾಮಕ್ಕೆ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಭೇಟಿ ನೀಡಿ ಸರ್ಕಾರಿ ಕಿವುಡ ಮತ್ತು ಮೂಗ ಶಾಲೆ, ಬುದ್ಧಿಮಾಂದ್ಯರ ಶಾಲೆ, ಬಾಲ ಮಂದಿರದ ಅಗತ್ಯ ಸೌಲಭ್ಯಗಳನ್ನು ಪರಿಶೀಲಿಸಿದರು.

District Collector SS Nakul visits the Shantidhama
ಶಾಂತಿಧಾಮಕ್ಕೆ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಭೇಟಿ
author img

By

Published : Mar 13, 2020, 9:16 AM IST

ಬಳ್ಳಾರಿ: ನಗರದ ಕಂಟೋನ್ಮೆಂಟ್ ವ್ಯಾಪ್ತಿಯಲ್ಲಿರುವ ಶಾಂತಿಧಾಮಕ್ಕೆ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಜಿಲ್ಲಾಧಿಕಾರಿ ಎಸ್.ಎಸ್.ನಕುಲ್

ಶಾಂತಿಧಾಮದ ಆವರಣದಲ್ಲಿರುವ ಸರ್ಕಾರಿ ಕಿವುಡ ಮತ್ತು ಮೂಗ ಶಾಲೆ, ಬುದ್ಧಿಮಾಂದ್ಯರ ಶಾಲೆ, ಬಾಲ ಮಂದಿರಕ್ಕೆ ಭೇಟಿ ನೀಡಿ ಅಗತ್ಯ ಸೌಲಭ್ಯಗಳನ್ನು ಪರಿಶೀಲಿಸಿದರು. ಕಿವುಡ ಮತ್ತು ಮೂಗ ಮಕ್ಕಳ ಶಾಲೆಯಲ್ಲಿ ಡಿಸಿ ನಕುಲ್, ತರಗತಿಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ನಡೆಸಿದರು.

ಕಿವುಡ ಮತ್ತು‌ ಮೂಗ ಶಾಲೆಯ ವಿದ್ಯಾರ್ಥಿಗಳ ಸಮವಸ್ತ್ರ ಇರುವ ಕೊಠಡಿಗೆ ಬೀಗ ಹಾಕಲಾಗಿತ್ತು. ಅದನ್ನ ತೆಗೆಸಿ ಒಳಗೆ ಹೋದ ಡಿಸಿ‌ ನಕುಲ್, ದೇಣಿಗೆ ನೀಡಿರುವ ಸಮವಸ್ತ್ರಗಳನ್ನು ವಿದ್ಯಾರ್ಥಿಗಳಿಗೆ ವಿತರಿಸದಿರುವುದಕ್ಕೆ ಸಿಬ್ಬಂದಿಗೆ ತರಾಟೆಗೆ ತೆಗೆದುಕೊಂಡರು. ವಸತಿ‌ ನಿಲಯದಲ್ಲಿ ಮಧ್ಯಾಹ್ನದ ಊಟ ಪರಿಶೀಲನೆ ನಡೆಸಿದರು.

ಎನ್​ಎಂಡಿಸಿ, ಸಿಎಸ್​ಆರ್ ಬಾಕಿ ಉಳಿದ ಹಣವನ್ನು ಶಾಂತಿಧಾಮದ ಅಭಿವೃದ್ಧಿಗೆ ಬಳಸಿಕೊಳ್ಳುವ ನಿಟ್ಟಿನಲ್ಲಿ ಭೇಟಿ ನೀಡಿ ಪರಿಶೀಲಿಸಿರುವೆ. ಸಣ್ಣಪುಟ್ಟ ನ್ಯೂನತೆಗಳಿವೆ. ಅವುಗಳನ್ನು ಸರಿಪಡಿಸಲಾಗುವುದು ಎಂದು ಈಟಿವಿ ಭಾರತಕ್ಕೆ ಜಿಲ್ಲಾಧಿಕಾರಿ ನಕುಲ್​ ತಿಳಿಸಿದರು.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.