ETV Bharat / state

ಬೆಂಗಳೂರಿಂದ ಬಂದ ಆಂಧ್ರ ನಿವಾಸಿಗಳಿಗೆ ಪರವಾನಿಗೆ ನೀಡಲು ಜಿಲ್ಲಾಡಳಿತ ನಿರಾಕರಣೆ - ಆಂಧ್ರ ನಿವಾಸಿಗಳಿಗೆ ಪರವಾನಿಗೆ ನೀಡಲು ಜಿಲ್ಲಾಡಳಿತ ನಿರಾಕರಣೆ

ಆಂಧ್ರಪ್ರದೇಶದ ಅನಂತಪುರ ಮತ್ತು ಕರ್ನೂಲ್ ಜಿಲ್ಲೆಗಳಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾಗಿ ಕಂಡುಬಂದ ಹಿನ್ನಲೆಯಲ್ಲಿ ಅಂತಾರಾಜ್ಯ ಗಡಿಭಾಗದಲ್ಲಿ ಬಹಳ ಕಟ್ಟುನಿಟ್ಟಿನ ಕ್ರಮವಹಿಸಿದ್ದು, ಬಳ್ಳಾರಿಯಿಂದ ಆಂಧ್ರಕ್ಕೆ ಹೋಗುವ ಹಾಗೂ ನೆರೆಯ ಆಂಧ್ರಪ್ರದೇಶದಿಂದ ಬಳ್ಳಾರಿಗೆ ಬರುವ ಸಂಚಾರದ ವ್ಯವಸ್ಥೆಯನ್ನ ಸಂಪೂರ್ಣವಾಗಿ ನಿಷೇಧಿಸಲಾಗಿದೆ.

Andhra residents
ಆಂಧ್ರ ನಿವಾಸಿಗಳು
author img

By

Published : May 2, 2020, 2:45 PM IST

ಬಳ್ಳಾರಿ: ಲಾಕ್​ಡೌನ್ ಎಫೆಕ್ಟ್​ನಿಂದ ಬೆಂಗಳೂರಿಂದ ಬಳ್ಳಾರಿಗೆ ಬಂದಿಳಿದ ನೆರೆಯ ಆಂಧ್ರಪ್ರದೇಶದ ಆರೇಳು‌ ಮಂದಿಗೆ ವಾಪಾಸ್ ತಮ್ಮೂರಿಗೆ ತೆರಳಲು ಬಳ್ಳಾರಿ ಜಿಲ್ಲಾಡಳಿತ ಪರವಾನಗಿ ನೀಡಲು ನಿರಾಕರಿಸಿದೆ.

ಬೆಂಗಳೂರಿಂದ ಬಂದ ಆಂಧ್ರ ನಿವಾಸಿಗಳು

ನಿನ್ನೆ ರಾತ್ರಿ ಬೆಂಗಳೂರಿನ ನಿರಾಶ್ರಿತರ ವಸತಿ‌ ನಿಲಯಗಳಲ್ಲಿ ತಂಗಿದ್ದ ಬಳ್ಳಾರಿ ಹಾಗೂ ನೆರೆಯ ಆಂಧ್ರಪ್ರದೇಶದ ಅಂದಾಜು 32 ಮಂದಿಯನ್ನ ಕೆಎಸ್​ಆರ್​ಟಿಸಿ ಬಸ್​ನಲ್ಲೇ ಬಳ್ಳಾರಿಗೆ ಬೆಂಗಳೂರು ಜಿಲ್ಲಾಡಳಿತ ಕಳುಹಿಸಿಕೊಟ್ಟಿತ್ತು. ಬೆಂಗಳೂರಿನಿಂದ ಬಳ್ಳಾರಿಗೆ ಬಂದಿಳಿದಿದ್ದ 32 ಪ್ರಯಾಣಿಕರ ಪೈಕಿ ಆರೇಳು ಮಂದಿಯು ಆಂಧ್ರಪ್ರದೇಶದ ಆದೋನಿ, ಅನಂತಪುರ ಮೂಲದವರಾಗಿದ್ದಾರೆ.

ಆಂಧ್ರಪ್ರದೇಶದ ಅನಂತಪುರ ಮತ್ತು ಕರ್ನೂಲ್ ಜಿಲ್ಲೆಗಳಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾಗಿ ಕಂಡುಬಂದ ಹಿನ್ನಲೆಯಲ್ಲಿ ಅಂತಾರಾಜ್ಯ ಗಡಿಭಾಗದಲ್ಲಿ ಬಹಳ ಕಟ್ಟುನಿಟ್ಟಿನ ಕ್ರಮವಹಿಸಿದ್ದು, ಬಳ್ಳಾರಿಯಿಂದ ಆಂಧ್ರಕ್ಕೆ ಹೋಗುವ ಹಾಗೂ ನೆರೆಯ ಆಂಧ್ರಪ್ರದೇಶದಿಂದ ಬಳ್ಳಾರಿಗೆ ಬರುವ ಸಂಚಾರದ ವ್ಯವಸ್ಥೆಯನ್ನ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಹೀಗಾಗಿ, ಜಿಲ್ಲಾಡಳಿತ ಆಂಧ್ರಕ್ಕೆ ತೆರಳುವ ಈ ಪ್ರಯಾಣಿಕರಿಗೆ ಪರವಾನಿಗೆ ನೀಡಲು ನಿರಾಕರಿಸುತ್ತಿದೆ.‌ ಅಲ್ಲದೇ, ಜಿಲ್ಲಾಧಿಕಾರಿ ನಕುಲ್ ಅವರ ಭೇಟಿಗೂ ಬಿಡುತ್ತಿಲ್ಲ ಎಂಬ ಅಸಮಾಧಾನವನ್ನು ಆಂಧ್ರಪ್ರದೇಶದ ಪ್ರವಾಸಿ ದೀಪಾ‌ ಹೇಳಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.