ಬಳ್ಳಾರಿ: ಡ್ರೀಮ್ ಇನ್ಫ್ರಾ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಬಹುಕೋಟಿ ವಂಚನೆ ಆರೋಪ ಎದುರಿಸುತ್ತಿರುವ ದಿಶಾ ಚೌಧರಿ ಅವರನ್ನು ಬಳ್ಳಾರಿಯ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಪೊಲೀಸರು ಭದ್ರತೆಯಲ್ಲಿ ಕರೆ ತಂದು ಹಾಜರುಪಡಿಸಿದ್ದಾರೆ.
ಬಳ್ಳಾರಿಯ ವೈದ್ಯರೊಬ್ಬರು ದಾಖಲಿಸಿದ್ದ ಚೆಕ್ ಬೌನ್ಸ್ ಕೇಸ್ ವಿಚಾರವಾಗಿ, ದಿಶಾ ಅವರನ್ನು ಬಳ್ಳಾರಿ ಜೆಎಂಎಫ್‌ಸಿ ಕೋರ್ಟ್ಗೆ ಪೊಲೀಸರು ಕರೆ ತಂದಿದ್ದಾರೆ. ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ವಂಚಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಡಾ. ಟಿ ಸುರೇಶ್ ಅವರಿಂದ ದಿಶಾ ವಿರುದ್ದ 12 ಲಕ್ಷ ರೂ. ಚೆಕ್ ಬೌನ್ಸ್ ಪ್ರಕರಣ ದಾಖಲಾಗಿತ್ತು.