ETV Bharat / state

ಗಣಿಧಣಿಗಳ ಕ್ಷೇತ್ರದಲ್ಲಿ ಒಂದೆಡೆ ಕುಟುಂಬದಲ್ಲೇ ಪೈಪೋಟಿ.. ಇನ್ನೊಂದೆಡೆ ಹಳೆ ಹುಲಿಗಳ ನಡುವೆ ಗುದ್ದಾಟ..

author img

By

Published : May 3, 2023, 6:09 PM IST

Updated : May 4, 2023, 2:54 PM IST

ಬಳ್ಳಾರಿ ನಗರ ಗಣಿಧಣಿಗಳ ಕ್ಷೇತ್ರ. ಹಲವು ಕಾರಣಗಳಿಂದ ಈ ಕ್ಷೇತ್ರ ಗಮನ ಸೆಳೆದಿದ್ದು ಉಂಟು. ಇದೀಗ ಚುನಾವಣೆಯಿಂದ ಮತ್ತೆ ರಾಜ್ಯದ ಜನರ ಮುಂದೆ ಬಂತು ನಿಂತಿದೆ. ಬಿಜೆಪಿ, ಕಾಂಗ್ರೆಸ್​, ಜೆಡಿಎಸ್​ ಸೇರಿದಂತೆ ಒಟ್ಟು 24 ಅಭ್ಯರ್ಥಿಗಳು ಅಂತಿಮ ಕಣದಲ್ಲಿರುವುದು ಈ ಕ್ಷೇತ್ರದ ವಿಶೇಷ. ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿಯ ಹೊಸ ಸೇರ್ಪಡೆಯಿಂದ ಕ್ಷೇತ್ರ ರಂಗು ಪಡೆದಿದೆ.

Bellary City Assembly Constituency
Bellary City Assembly Constituency
ಬಳ್ಳಾರಿ ನಗರ ಸಾಮಾನ್ಯ ಕ್ಷೇತ್ರ

ಬಳ್ಳಾರಿ: ಗಣಿನಾಡು ಬಳ್ಳಾರಿ ರಾಜಕೀಯ ಶ್ರೀಮಂತಿಕೆಯನ್ನು ಹೊಂದಿರುವ ಜಿಲ್ಲೆ. ಈ ಹಿಂದೆ ಇದೇ ನೆಲದಿಂದ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ, ಸುಷ್ಮಾ ಸ್ವರಾಜ್‌ ಅವರಂತಹ ಘಟಾನುಘಟಿಗಳು ಸ್ಪರ್ಧಿಸಿ ದೇಶದ ಗಮನ ಸೆಳೆದಿದ್ದರು. ದಕ್ಷಿಣ ಭಾರತದಲ್ಲೇ ಮೊದಲ ಬಾರಿಗೆ ಸರ್ಕಾರವನ್ನು ತರಲು ಈ ಜಿಲ್ಲೆಯ ರಾಜಕಾರಣಿಗಳು ಕಾರಣ ಎಂಬ ಖ್ಯಾತಿ ಕೂಡ ಇದೆ.

ಹೌದು, ಕರ್ನಾಟಕದಲ್ಲಿ ಬಿಜೆಪಿ ಅಧಿಕಾರದ ಗದ್ದುಗೆ ಹಿಡಿಯುವಲ್ಲಿ ಜಿಲ್ಲೆಯ ಗಣಿಧಣಿಗಳ ಕೊಡುಗೆ ಎಷ್ಟು ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ. ರಾಜ್ಯದಲ್ಲಿ ಕಮಲವನ್ನು ಅರಳಿಸುವುದು ಕಷ್ಟದ ಕೆಲಸ ಎನ್ನುವಂತಿದ್ದ ದಿನಗಳಲ್ಲಿ 2008ರಲ್ಲಿ ಗಣಿನಾಡಿನಿಂದ ಅತಿಹೆಚ್ಚು ವಿಧಾನಸಭೆ ಕ್ಷೇತ್ರಗಳಲ್ಲಿ ಗೆದ್ದು, ಬಿಜೆಪಿಯನ್ನು ಅಧಿಕಾರಕ್ಕೆ ತರುವಲ್ಲಿ ರೆಡ್ಡಿ ಸಹೋದರರು ಗಮನ ಸೆಳೆದಿದ್ದರು. ಇಂತಹ ಬಳ್ಳಾರಿ ಜಿಲ್ಲೆಯಲ್ಲಿ ಪ್ರಸಕ್ತ ವಿಧಾನಸಭೆ ಚುನಾವಣೆ ಕಾವು ಜೋರಾಗಿದೆ.

Bellary City Assembly Constituency
ಬಳ್ಳಾರಿ ನಗರ ಕ್ಷೇತ್ರದ ಪ್ರಮುಖ ಅಭ್ಯರ್ಥಿಗಳು

ಬಳ್ಳಾರಿ ನಗರ ಸಾಮಾನ್ಯ ಕ್ಷೇತ್ರದಲ್ಲಿ ಎಲ್ಲ ರಾಷ್ಟ್ರೀಯ ಪಕ್ಷಗಳು ರೆಡ್ಡಿಗಳಿಗೆ ಮಣೆ ಹಾಕಿವೆ. ಬಿಜೆಪಿಯಿಂದ ಜಿ. ಸೋಮಶೇಖರ ರೆಡ್ಡಿ, ಕಾಂಗ್ರೆಸ್​ನಿಂದ ನಾರಾ ಭರತ್‌ ರೆಡ್ಡಿ, ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ (ಕೆಆರ್‌ಪಿಪಿ) ಲಕ್ಷ್ಮೀ ಅರುಣಾ ರೆಡ್ಡಿ, ಇದರ ನಡುವೆ ಜೆಡಿಎಸ್ ಅಭ್ಯರ್ಥಿಯಾಗಿ ಮಾಜಿ ಶಾಸಕ ಅನಿಲ್ ಲಾಡ್ ತೀವ್ರ ಪೈಪೋಟಿ ನಡೆಸಲು ಮುಂದಾಗಿದ್ದಾರೆ. ಆಪ್, ಬಹುಜನ ಸಮಾಜ ಪಾರ್ಟಿ, ಜನಹಿತ ಪಕ್ಷ, ದೇಶ್ ಪ್ರೇಮ್ ಪಾರ್ಟಿ, ಕೆಆರ್​ಪಿಪಿ, ಸಮಾಜವಾದಿ ಪಾರ್ಟಿ, ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ (ಕರ್ನಾಟಕ), ಕೆಆರ್​ಎಸ್, ಸೋಷಿಯಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯೂನಿಸ್ಟ್) ಹಾಗೂ ಸ್ವತಂತ್ರ ಅಭ್ಯರ್ಥಿ ಸೇರಿದಂತೆ ಒಟ್ಟು 24 ಅಭ್ಯರ್ಥಿಗಳು ಅಂತಿಮವಾಗಿ ಕಣದಲ್ಲಿರುವುದು ಈ ಕ್ಷೇತ್ರದ ವಿಶೇಷ. ಈ ಪ್ರಮಾಣದ ಅಭ್ಯರ್ಥಿಗಳ ಸಂಖ್ಯೆ ರಾಜ್ಯದ ಬೇರೆ ಯಾವ ಕ್ಷೇತ್ರದಲ್ಲಿಯೂ ಇಲ್ಲ ಅನ್ನೋದು ಅಚ್ಚರಿ.

Bellary City Assembly Constituency
ಜಿ. ಸೋಮಶೇಖರ ರೆಡ್ಡಿ

ಈ ಬಾರಿ ಬಿಜೆಪಿಯಿಂದ ಹಾಲಿ ಶಾಸಕ ಜಿ.ಸೋಮಶೇಖರ ರೆಡ್ಡಿಗೆ ಟಿಕೆಟ್ ನೀಡಲಾಗಿದೆ. 2008ರಲ್ಲಿ 54,831 ಮತಗಳನ್ನು ಪಡೆಯುವ ಮೂಲಕ ಕಾಂಗ್ರೆಸ್​ ಅಭ್ಯರ್ಥಿ ಅನಿಲ್ ಲಾಡ್ ಅವರನ್ನು 1,022 ಮತಗಳ ಅಂತರದಿಂದ ಸೋಲಿಸಿ ಶಾಸಕರಾಗಿ ಆಯ್ಕೆಯಾಗಿದ್ದರು. ನಂತರದಲ್ಲಿ 2013ರಲ್ಲಿ ಚುನಾವಣೆಯ ಕಣದಿಂದ ಸೋಮಶೇಖರ ರೆಡ್ಡಿ ದೂರ ಉಳಿದಿದ್ದರು. 2018ರಲ್ಲಿ ಮತ್ತೆ ಸ್ಪರ್ಧಿಸಿ ಎರಡನೇ ಬಾರಿಗೆ ಸೋಮಶೇಖರ ರೆಡ್ಡಿ ಶಾಸಕರಾದರು. ಪ್ರಸ್ತುತ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು, ಪ್ರತಿಸ್ಪರ್ಧಿಯಾಗಿ ಕಾಂಗ್ರೆಸ್​ನಿಂದ ನಾರಾ ಭರತ್ ರೆಡ್ಡಿ ಕಣಕ್ಕಿಳಿದಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಹೊಸ ಮುಖ, ಯುವ ನಾಯಕನಿಗೆ ಮಣೆ ಹಾಕಿದ್ದು ಕೂಡ ವಿಶೇಷ.

Bellary City Assembly Constituency
ಲಕ್ಷ್ಮೀ ಅರುಣಾ ರೆಡ್ಡಿ

ಇನ್ನು, ಜೆಡಿಎಸ್‌ನಿಂದ ಅಖಾಡಕ್ಕಿಳಿದಿರುವ ಅನಿಲ್‌ ಲಾಡ್ ಕೈ ಟಿಕೆಟ್ ತಪ್ಪಿದ ಹಿನ್ನೆಲೆ ತೆನೆ ಹೊತ್ತ ಮಹಿಳೆಯತ್ತ ಚಿತ್ತ ನೆಟ್ಟಿದ್ದಾರೆ. ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ಪತ್ನಿ ಲಕ್ಷ್ಮೀ ಅರುಣಾ ಕಣದಲ್ಲಿದ್ದು, ತೀವ್ರ ಪೈಪೋಟಿ ನಡೆಸಲು ಮನೆ ಮನೆಗೆ ತೆರಳಿ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಒಂದೆಡೆ ರೆಡ್ಡಿ ಸಹೋದರರ ಸವಾಲ್‌ಗೆ ಕ್ಷೇತ್ರ ಮುನ್ನುಡಿ ಬರೆದಿದ್ದು, ಅದಕ್ಕಾಗಿ ಮಾವ-ಸೊಸೆಯ ನಡುವಿನ ಪೈಪೋಟಿಯನ್ನು ನೋಡಲು ಜನರು ಕಾತರದಿಂದ ಕಾಯುತ್ತಿದ್ದಾರೆ.

Bellary City Assembly Constituency
ನಾರಾ ಭರತ್‌ ರೆಡ್ಡಿ

ಈ ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಲಿಂಗಾಯತ, ಮುಸ್ಲಿಂ ಸಮುದಾಯದ ಮತಗಳು ಹೆಚ್ಚಿವೆ. ಕಾಂಗ್ರೆಸ್​​ನ ವೋಟ್‌ ಬ್ಯಾಂಕ್ ಆಗಿದ್ದ ಮುಸ್ಲಿಂ ಮತಗಳು ಈ ಬಾರಿ ಜೆಡಿಎಸ್ ಹಾಗೂ ಕೆಆರ್‌ಪಿಪಿ ಪಾಲಾಗಬಹುದು ಎಂಬ ಲೆಕ್ಕಾಚಾರ ಶುರುವಾಗಿದೆ. ಮತ ವಿಭಜನೆಗೊಳ್ಳುವುದರಿಂದ ಇಂತವರೇ ಈ ಬಾರಿ ಗೆಲ್ಲಲಿದ್ದಾರೆ ಎಂದು ಹೇಳುವುದು ಅಷ್ಟು ಸುಲಭದ ಮಾತಲ್ಲ. ಒಟ್ಟಾರೆ ಬಳ್ಳಾರಿ ನಗರ ಕ್ಷೇತ್ರ ಈ ಬಾರಿ ಹೈವೋಲ್ಟೇಜ್ ಕ್ಷೇತ್ರವಾಗಿದ್ದು, ಮತದಾರರು ಯಾರಿಗೆ ಮಣೆ ಹಾಕುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.

Bellary City Assembly Constituency
ಅನಿಲ್ ಲಾಡ್

ಬಳ್ಳಾರಿ ನಗರ ಕ್ಷೇತ್ರ ಅಸ್ತಿತ್ವಕ್ಕೆ ಬರುವ ಮೊದಲು ಮೂಲ ಬಳ್ಳಾರಿ ಕ್ಷೇತ್ರದ ಭಾಗವಾಗಿತ್ತು. ಹೀಗಾಗಿ ಇಲ್ಲಿನ ಚುನಾವಣಾ ಲೆಕ್ಕಾಚಾರ ಆರಂಭವಾಗುವುದು 1957ರಿಂದ. 1957ರ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಮುಂಡ್ಲೂರು ಗಂಗಪ್ಪ ಎನ್ನುವವರು ಕಾಂಗ್ರೆಸ್‌ ಅಭ್ಯರ್ಥಿ ಅಬ್ದುರ್ ರಜಾಕ್ ಸಾಬ್ ಎಂ ಅವರ ವಿರುದ್ಧ ಜಯ ದಾಖಲಿಸಿದ್ದರು. 1962ರಲ್ಲಿ ಕಾಂಗ್ರೆಸ್‌ನ ಟಿ ಜಿ ಸತ್ಯನಾರಾಯಣ ಸ್ವತಂತ್ರ ಪಕ್ಷದ ಯುಕೆ ಸುಭಾನ್ ಅವರನ್ನು ಪರಾಭವಗೊಳಿಸಿ ಶಾಸಕರಾಗಿದ್ದರು.

Bellary City Assembly Constituency
ಲಕ್ಷ್ಮೀ ಅರುಣಾ ರೆಡ್ಡಿ

1967ರಲ್ಲಿ ಸ್ವತಂತ್ರ ಪಕ್ಷದ ವಿ ನಾಗಪ್ಪ, ಕಾಂಗ್ರೆಸ್‌ ಪಕ್ಷದ ಟಿಜಿ ಸತ್ಯನಾರಾಯಣ ವಿರುದ್ಧ ಗೆಲುವು ಪಡೆದಿದ್ದರು. 1972ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ವಿ ನಾಗಪ್ಪ ಅವರು ಕಾಂಗ್ರೆಸ್‌ ಪಕ್ಷದ ಭಾಸ್ಕರ್‌ ನಾಯ್ಡು ವಿರುದ್ಧ ಗೆಲುವಿನ ನಗೆ ಬೀರಿದ್ದರು. 1978ರಲ್ಲಿ ಕಾಂಗ್ರೆಸ್‌ನ ಬಾಸ್ಕರ್‌ ನಾಯ್ಡು ಅವರು ಜನತಾ ಪಕ್ಷದ ಅಬ್ದುಲ್ ಹುಕ್ ಅವರ ವಿರುದ್ಧ, 1983ರಲ್ಲಿ ಜನತಾ ಪಕ್ಷದ ಎಂ ರಾಮಪ್ಪ, ಕಾಂಗ್ರೆಸ್‌ನ ರಾಜಾ ಸಾಹೇಬ್ ಎದುರು, 1985ರ ಹಣಾಹಣಿಯಲ್ಲಿ ಕಾಂಗ್ರೆಸ್‌ನ ಎಂ ರಾಮಪ್ಪ, ಸಿಪಿಐನ ಶಾರದಾ ಮಲೆಬೆನ್ನೂರು ಅವರನ್ನು ಸೋಲಿಸಿ ಇಲ್ಲಿನ ಶಾಸಕರಾಗಿದ್ದರು. 1989ರಲ್ಲಿ ಕಾಂಗ್ರೆಸ್‌ನ ಎಂ.ರಾಮಪ್ಪ, ಪಕ್ಷೇತರ ಅಭ್ಯರ್ಥಿ ಪನ್ನರಾಜ್ ಅವರನ್ನು, 1994ರಲ್ಲಿ ಪಕ್ಷೇತರ ಎಂ.ದಿವಾಕರ್ ಬಾಬು ಕಾಂಗ್ರೆಸ್‌ನ ವೆಂಕಟ್ ಮಹಿಪಾಲ್ ಅವರನ್ನು ಮಣಿಸಿ ಶಾಸಕರಾಗಿದ್ದರು. 1999ರಲ್ಲಿ ಪಕ್ಷೇತರ ದಿವಾಕರ್ ಬಾಬು ಅವರು ಬಿಜೆಪಿಯ ಶ್ರೀರಾಮುಲು ಎದುರು, 2004ರಲ್ಲಿ ಶ್ರೀರಾಮುಲು ಬಿಜೆಪಿಯ ದಿವಾಕರ ಬಾಬು ವಿರುದ್ಧ ಸೋತು ಗೆಲುವಿನ ಲೆಕ್ಕಾಚಾರವನ್ನು ಸರಿತೂಗಿಸಿಕೊಂಡಿದ್ದರು. 2008ರ ಹೊತ್ತಿಗೆ ಆದ ಕ್ಷೇತ್ರ ವಿಭಜನೆ ಬಳಿಕ ಶ್ರೀರಾಮುಲು ಬಳ್ಳಾರಿ ಗ್ರಾಮಾಂತರ ಮೀಸಲು (ಎಸ್‌ಟಿ) ಕ್ಷೇತ್ರಕ್ಕೆ ವಲಸೆ ಹೋದ ಬಳಿಕ ಈ ಕ್ಷೇತ್ರ ರೆಡ್ಡಿ ಸಹೋದರರ ಪಾಲಾಯಿತು.

Bellary City Assembly Constituency
ಬಳ್ಳಾರಿ ನಗರ ಕ್ಷೇತ್ರದ ವಿವರ

ಕಳೆದ ಮೂರು ಚುನಾವಣೆಗಳ ಬಲಾಬಲ ಹೀಗಿತ್ತು: 2008ರ ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಗಾಲಿ ಸೋಮಶೇಖರ್ ರೆಡ್ಡಿ ಈ ಕ್ಷೇತ್ರದಿಂದ ಗೆದ್ದು ಶಾಸಕರಾದರು. 54,831 ಮತಗಳನ್ನು ಪಡೆದಿದ್ದ ಅವರು 53,809 ಮತ ಗಳಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಅನಿಲ್ ಲಾಡ್ ಎದುರು 1,022 ಮತಗಳ ಜಯ ದಾಖಲಿಸಿದರು. ಈ ಚುನಾವಣೆಯಲ್ಲಿ 31 ಮಂದಿ ಅಭ್ಯರ್ಥಿಗಳು ಸ್ಪರ್ಧಿಸಿದ್ದರೆ, ಅದರಲ್ಲಿ 25 ಮಂದಿ ಸ್ವತಂತ್ರ ಅಭ್ಯರ್ಥಿಗಳ ಸ್ಪರ್ಧೆ ಮಾಡಿದ್ದರೆನ್ನುವುದು ಗಮನಾರ್ಹ. ಇನ್ನು 2013ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಕ್ಷೇತ್ರವನ್ನು ತೆಕ್ಕೆಗೆ ತೆಗೆದುಕೊಂಡಿತ್ತು. ಈ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯಾಗಿದ್ದ ಅನಿಲ್ ಲಾಡ್ ಕ್ಷೇತ್ರದ ಶಾಸಕರಾದರು. 52,098 ಮತ ಪಡೆದು ಅನಿಲ್‌ ಲಾಡ್‌ ಮೊದಲಿಗರಾದರೆ, ಬಡವರ ಶ್ರಮಿಕ ರೈತ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ (ಬಿಆರ್‌ಎಸ್‌) ಎಸ್ ಮುರಳಿ ಕೃಷ್ಣ 33,898 ಮತ ಪಡೆದು ಎರಡನೇ ಸ್ಥಾನ ಪಡೆದರು. ಇವರಿಬ್ಬರ ನಡುವಿನ ಗೆಲುವಿನ ಅಂತರ 18,200 ಮತಗಳದ್ದಾಗಿತ್ತು. ಈ ಚುನಾವಣೆಯಲ್ಲಿ 19 ಜನ ಸ್ವತಂತ್ರ ಅಭ್ಯರ್ಥಿಗಳು ಅಖಾಡಕ್ಕಿಳಿದಿದ್ದರು. 2018 ರಲ್ಲಿ ಮತ್ತೆ ಕ್ಷೇತ್ರದಲ್ಲಿ ಬಿಜೆಪಿ ಪ್ರಾಬಲ್ಯ ಮೆರೆಯಿತು. ಈ ಚುಣಾವಣೆಯಲ್ಲಿ ಹಣಾಹಣಿಯಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಜಿ ಸೋಮಶೇಖರ ರೆಡ್ಡಿ (76,589 ಮತ) ಕಾಂಗ್ರೆಸ್‌ನ ಅನಿಲ್ ಲಾಡ್ (60,434 ಮತ) ಎದುರು 16,155 ಮತಗಳಿಂದ ಗೆದ್ದಿದ್ದರು.

ಒಟ್ಟು ಮತದಾರರು: ಕ್ಷೇತ್ರದಲ್ಲಿ 1,26,067 ಪುರುಷ ಮತದಾರರು, 1,33,087 ಮಹಿಳೆ ಮತದಾರರು ಮತ್ತು 30 ಲಿಂಗತ್ವ ಅಲ್ಪ ಸಂಖ್ಯಾತ ಮತದಾರರು ಸೇರಿದಂತೆ ಒಟ್ಟು 2,59,184 ಮತದಾರರಿದ್ದಾರೆ. ಅದರಲ್ಲಿ 8,432 ಯುವ ಮತದಾರರು, 4,691 ಜನ 80 ವರ್ಷ ಮೇಲ್ಪಟ್ಟ ವಯಸ್ಕ ಮತದಾರರು, 1,383 ವಿಶೇಷ ಚೇತನ ಮತದಾರರಿದ್ದಾರೆ. ಇಲ್ಲಿ ದಲಿತ ಮತದಾರರದ್ದೇ ಪ್ರಾಬಲ್ಯ. ಇವರನ್ನು ಹೊರತುಪಡಿಸಿದರೆ ವಾಲ್ಮೀಕಿ, ಲಿಂಗಾಯತ ಹಾಗೂ ಕುರುಬ ಸಮುದಾಯಗಳು ಹೆಚ್ಚಿನ ಸಂಖ್ಯೆಯಲ್ಲಿವೆ.

ಇದನ್ನೂ ಓದಿ: ಕರ್ನಾಟಕ ಚುನಾವಣೆ 2023: 2018ಕ್ಕೆ ಹೋಲಿಸಿದರೆ ಅಪರಾಧ ಹಿನ್ನೆಲೆ ಹೊಂದಿದ ಅಭ್ಯರ್ಥಿಗಳ ಸಂಖ್ಯೆಯಲ್ಲಿ ಭಾರಿ ಹೆಚ್ಚಳ.. ADR ವರದಿ

Last Updated : May 4, 2023, 2:54 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.