ETV Bharat / state

ಬೈಸ್ಕೈನಲ್ಲಿ ಪ್ರತಿಯೊಬ್ಬರೂ ಹಾರಾಟ ಮಾಡಿ ಆನಂದಿಸಿ: ಡಿ ಸಿ ಪವನ್​ಕುಮಾರ್ - ಬಳ್ಳಾರಿ ಬೈಸ್ಕೈಗೆ ಹಸಿರು ನಿಶಾನೆ

ಬೈಸ್ಕೈ ನಲ್ಲಿ ಪ್ರತಿಯೊಬ್ಬರೂ ಹಾರಾಟ ಮಾಡಿ ಐತಿಹಾಸಿಕ ಸ್ಥಳಗಳನ್ನು ವೀಕ್ಷಿಸಿ ಆನಂದಿಸಿ ಎಂದು ಬಳ್ಳಾರಿಯ ಜಿಲ್ಲಾಧಿಕಾರಿ ಪವನ್​ಕುಮಾರ್ ಅವರು ಮನವಿ ಮಾಡಿದ್ದಾರೆ.

ಜಿಲ್ಲಾಧಿಕಾರಿ ಪವನ್‍ಕುಮಾರ್ ಮಾಲಪಾಟಿ
ಜಿಲ್ಲಾಧಿಕಾರಿ ಪವನ್‍ಕುಮಾರ್ ಮಾಲಪಾಟಿ
author img

By

Published : Jan 19, 2023, 10:12 PM IST

ಬಳ್ಳಾರಿಯ ಜಿಲ್ಲಾಧಿಕಾರಿ ಪವನ್​ಕುಮಾರ್ ಅವರು ಮಾತನಾಡುತ್ತಿದ್ದರು

ಬಳ್ಳಾರಿ: ಬಳ್ಳಾರಿಯ ಐತಿಹಾಸಿಕ ಸ್ಥಳಗಳು ಹಾಗೂ ಮನೋರಮಣೀಯ ಬೆಟ್ಟ, ಗುಡ್ಡಗಳ ದೃಶ್ಯಗಳನ್ನು ಆಗಸದಿಂದ ವೀಕ್ಷಿಸಲು ಉತ್ಸವದ ನಿಮಿತ್ತ ಆಯೋಜಿಸಲಾಗಿರುವ ಬಳ್ಳಾರಿ ಬೈಸ್ಕೈನಲ್ಲಿ ಪ್ರತಿಯೊಬ್ಬರೂ ಹಾರಾಟ ಮಾಡಿ ಆನಂದಿಸಿ ಎಂದು ಜಿಲ್ಲಾಧಿಕಾರಿ ಪವನ್‍ಕುಮಾರ್ ಮಾಲಪಾಟಿ ಅವರು ಕರೆ ನೀಡಿದರು.

ಬಳ್ಳಾರಿ ಜಿಲ್ಲಾಡಳಿತದ ವತಿಯಿಂದ ಮೊದಲ ಬಾರಿಗೆ ನಡೆಸಲಾಗುತ್ತಿರುವ ಬಳ್ಳಾರಿ ಉತ್ಸವದ ನಿಮಿತ್ತ ಆಗಸದಿಂದ ಬಳ್ಳಾರಿಯನ್ನು ವೀಕ್ಷಿಸಲು ನಗರದ ಕೊಳಗಲ್ ವಿಮಾನ ನಿಲ್ದಾಣದಿಂದ ಬಳ್ಳಾರಿ ಬೈಸ್ಕೈಗೆ ಹಸಿರು ನಿಶಾನೆ ತೋರಿಸುವುದರ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು. ಬೈಸ್ಕೈನಲ್ಲಿ ಸ್ವತಃ ಜಿಲ್ಲಾಧಿಕಾರಿಗಳೇ ಹೆಲಿಕಾಪ್ಟರ್​ನಲ್ಲಿ ಪ್ರಯಾಣಿಸಿ ತಮ್ಮ ಅನುಭವವನ್ನು ಹಂಚಿಕೊಂಡರು.

ಇದನ್ನು ಓದಿ:ಮಧ್ಯಪ್ರದೇಶದ ಬಸ್​ ಚಾಲಕನ ಮಗಳಿಗೆ ಇಸ್ರೋದಲ್ಲಿ ಹುದ್ದೆ: ಇದು ಸಾಧಕಿ ಸನಾಳ ಯಶೋಗಾಥೆ!

ಈ ಹಿಂದೆ ಹಂಪಿ ಉತ್ಸವದಲ್ಲಿ ಬೈಸ್ಕೈ ಇರುತ್ತಿತ್ತು. ಈಗ ಮೊದಲ ಬಾರಿಗೆ ಪ್ರವಾಸೋದ್ಯಮ ಇಲಾಖೆ ಮತ್ತು ತುಂಬೆ ಏವಿಯೇಷನ್ ಇವರ ಸಂಯುಕ್ತಾಶ್ರಯದಲ್ಲಿ ಚೊಚ್ಚಲ ಉತ್ಸವದ ಪ್ರಯುಕ್ತ ಬಳ್ಳಾರಿ ನಗರದಲ್ಲಿ ಆಯೋಜಿಸಲಾಗಿದೆ. ಈ ಬೈಸ್ಕೈಯುು ಉತ್ಸವಕ್ಕೆ ನಗರದ ಜನತೆಯ ಉತ್ಸಾಹವನ್ನು ಇನ್ನಷ್ಟು ಹೆಚ್ಚಿಸಲಿದೆ ಎಂದು ಹೇಳಿದರು.

ಮನೋರಮಣಿಯ ದೃಶ್ಯಗಳನ್ನು ನೋಡಿ ಆನಂದಿಸಬಹುದಾಗಿದೆ: ಬೈಸ್ಕೈನಲ್ಲಿ ಹೆಲಿಕಾಪ್ಟರ್ ಮೂಲಕ 15 ನಿಮಿಷಗಳ ಕಾಲ ಆಗಸದಿಂದ ಬಳ್ಳಾರಿಯ ಪ್ರಸಿದ್ಧ ಸ್ಥಳಗಳಾದ ತುಮಟಿಯ ಐತಿಹಾಸಿಕ ಬ್ರಿಟಿಷ್ ಬಂಗಲೆ ಹಾಗೂ ಸಾಲು ಬೆಟ್ಟ, ಬಳ್ಳಾರಿ ಕೋಟೆ, ಸಂಗನಕಲ್ಲು ಗುಡ್ಡ ಸೇರಿದಂತೆ ನಗರವನ್ನು ವೀಕ್ಷಿಸಬಹುದಾಗಿದೆ. ಹೆಲಿಕಾಪ್ಟರ್​ನಲ್ಲಿ ಒಂದು ಬಾರಿಗೆ 6 ಪ್ರಯಾಣಿಕರು ಹಾರಾಟ ನಡೆಸುವ ಸಾಮರ್ಥ್ಯವನ್ನು ಹೊಂದಿದ್ದು, ಒಬ್ಬರಿಗೆ 3500 ದರ ನಿಗದಿಪಡಿಸಲಾಗಿದೆ. ಸಾರ್ವಜನಿಕರು ಹೆಲಿಕಾಪ್ಟರ್​ನಲ್ಲಿ ಸಂಚರಿಸಿ ನಗರ ಸೇರಿದಂತೆ ಐತಿಹಾಸಿಕ ಮನೋರಮಣಿಯ ದೃಶ್ಯಗಳನ್ನು ನೋಡಿ ಆನಂದಿಸಬಹುದಾಗಿದೆ ಎಂದು ಹೇಳಿದರು.

ಇದನ್ನು ಓದಿ: ನೈಸರ್ಗಿಕ ಇಂಧನ ವಿಮಾನ ತಯಾರಿಕೆ: ಬೋಯಿಂಗ್​ ಜೊತೆ ನಾಸಾ ಒಪ್ಪಂದ

ಹವಾಮಾನ ನೋಡಿಕೊಂಡು ಕಾಲಾವಧಿಯನ್ನು ವಿಸ್ತರಿಸಲಾಗುವುದು: ಈ ಬೈಸ್ಕೈಯು ಇಂದಿನಿಂದ ಜ. 23 ರವರೆಗೆ ಆಯೋಜಿಸಲಾಗಿದ್ದು, ಬೆಳಗ್ಗೆ 7ರಿಂದ ಸಂಜೆ 4 ರವರೆಗೆ ನಡೆಯಲಿದೆ. ಹವಮಾನ ನೋಡಿಕೊಂಡು ಕಾಲಾವಧಿಯನ್ನು ವಿಸ್ತರಿಸಲಾಗುವುದು. ಅದರಂತೆಯೇ ಜನರ ಆಸಕ್ತಿಯ ಮೇರೆಗೆ ಇನ್ನೊಂದು ಹೆಲಿಕಾಪ್ಟರ್​ ಅನ್ನು ತರಿಸಲು ತೀರ್ಮಾನಿಸಲಾಗುವುದು ಎಂದರು.

ಟಿಕೆಟ್ ಆನ್‍ಲೈನ್ ಮತ್ತು ಆಫ್‍ಲೈನ್ ಎರಡು ವಿಧದಲ್ಲಿದ್ದು, ಸಾರ್ವಜನಿಕರು ನೊಂದಣಿಗಾಗಿ https://helitaxii.com/ ಗೆ ಭೇಟಿ ನೀಡಬಹುದು ಅಥವಾ ಮಾಹಿತಿಗಾಗಿ ಮೊ. 9620301866 ಗೆ ಸಂಪರ್ಕಿಸಬಹುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಮೇಯರ್ ಎಂ. ರಾಜೇಶ್ವರಿ, ಸಹಾಯಕ ಆಯುಕ್ತರಾದ ಹೇಮಂತ್, ತಹಶೀಲ್ದಾರ್​​ ವಿಶ್ವನಾಥ, ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕರಾದ ಡಾ. ಎಸ್. ತಿಪ್ಪೇಸ್ವಾಮಿ, ತುಂಬೆ ಏವಿಯೇಷನ್ ಸಿಬ್ಬಂದಿ ಸೇರಿದಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ಇತರರು ಇದ್ದರು.

ಓದಿ : 'ಕಲ್ಯಾಣ ಕರ್ನಾಟಕದಲ್ಲಿ ಹೊಸ ಮೃಗಾಲಯ ತೆರೆಯಲು ಚಿಂತನೆ'

ಇದನ್ನು ಓದಿ: ಎರಡನೇ ಪೀಳಿಗೆಯ ಹೋಮ್​​ಪಾಡ್​ ಘೋಷಣೆ ಮಾಡಿದ ಆ್ಯಪಲ್: ಫೆಬ್ರವರಿ 3 ರಿಂದ ಮಾರುಕಟ್ಟೆಯಲ್ಲಿ ಲಭ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.