ಬಳ್ಳಾರಿ: ಟಿಬಿ ಸ್ಯಾನಿಟೋರಿಯಂ ಪ್ರದೇಶದ ಟ್ರಾಮಾಕೇರ್ ಸೆಂಟರ್ನಲ್ಲಿರುವ ಕೋವಿಡ್ ಸೋಂಕಿತರು ಸಖತ್ ಸ್ಟೆಪ್ ಹಾಕಿದ್ದಾರೆ.
ಮಾನಸಿಕ ಹಾಗೂ ದೈಹಿಕ ಒತ್ತಡ ನಿವಾರಣೆಗಾಗಿ ಕೆಲವರು ಯೋಗಾಭ್ಯಾಸ, ಧ್ಯಾನ ಹಾಗೂ ಪ್ರಾಣಾಯಾಮದ ಮೊರೆ ಹೋದರೆ, ಉಳಿದವರು ಹಿಂದಿ ಹಾಗೂ ಕನ್ನಡ ಹಾಡುಗಳಿಗೆ ಸಖತ್ ಸ್ಟೆಪ್ ಹಾಕುವ ಮೂಲಕ ಗಮನ ಸೆಳೆದಿದ್ದಾರೆ.
ಟ್ರಾಮಾಕೇರ್ ಸೆಂಟರ್ನಲ್ಲಿರುವ ಕೋವಿಡ್ ಸೋಂಕಿತ ವೃದ್ಧರು, ಚಿಣ್ಣರು, ಯುವಕರು ಹಾಗೂ ವೈದ್ಯರು ಕೂಡ ಕುಣಿದು ಕುಪ್ಪಳಿಸಿದ್ದು ವಿಶೇಷವಾಗಿತ್ತು.