ಬಳ್ಳಾರಿ: ನಗರದ ನಾಗಲಕೆರೆಯಲ್ಲಿ ವಾಸವಾಗಿದ್ದ ಮೊಸಳೆಯೊಂದು ಕೆರೆಯಿಂದ ನಿನ್ನೆ ರಾತ್ರಿ ಸಾರ್ವಜನಿಕರು ವಾಸಿಸುವ ಸ್ಥಳಕ್ಕೆ ಬಂದಿದ್ದು, ಅರಣ್ಯ ಇಲಾಖೆಯವರು ಸೆರೆಹಿಡಿದಿದ್ದಾರೆ.
ಮೊಸಳೆ ಕೆರೆಯಿಂದ ಸಾರ್ವಜನಿಕರು ವಾಸಿಸುವ ಸ್ಥಳಕ್ಕೆ ಬಂದು ಜನರ ನಿದ್ದೆಗೆಡಿಸಿದೆ ಎಂದು ಅರಣ್ಯ ಮತ್ತು ಪೊಲೀಸ್ ಇಲಾಖೆಗೆ ದೂರವಾಣಿ ಮೂಲಕ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮೊಸಳೆಯನ್ನು ಸೆರೆಹಿಡಿದು ಬಳ್ಳಾರಿಯ ಕಿರು ಮೃಗಾಲಯದಕ್ಕೆ ಬಿಟ್ಟಿದ್ದಾರೆ.
ಇದನ್ನು ನೋಡಲು ನಾಗಲಕೆರೆ ಸುತ್ತಮುತ್ತಲಿನ ಜನರು ಮುಗಿಬಿದ್ದಿದ್ದರು. ಅರಣ್ಯ ಇಲಾಖೆಯವರು ಮೊಸಳೆ ಸೆರೆ ಹಿಡಿಯುವ ದೃಶ್ಯವನ್ನು ಸಾರ್ವಜನಿಕರು ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾರೆ.