ಬಳ್ಳಾರಿ: ಮಹಾಮಾರಿ ಕೊರೊನಾ ಎರಡನೇ ಅಲೆ ಹೆಚ್ಚಾದ ಹಿನ್ನೆಲೆಯಲ್ಲಿ ಬಳ್ಳಾರಿಯ ಟ್ರಾಮಾಕೇರ್ ಸೆಂಟರ್ನಲ್ಲಿ ಕೊರೊನಾ ಸೋಂಕಿತರು ಹೆಚ್ಚಾಗಿ ದಾಖಲಾಗುತ್ತಿದ್ದಾರೆ.ಆದರೆ, ಈ ಕೊರೊನಾ ಸೋಂಕಿತರಿಗೆ ಬಳಕೆ ಮಾಡೋ ವೈದ್ಯಕೀಯ ಪರಿಕರಗಳೂ ಸೇರಿ ಇನ್ನಿತರೆ ಘನತ್ಯಾಜ್ಯವನ್ನ ಟ್ರಾಮಾಕೇರ್ ಸೆಂಟರ್ ನ ಸುತ್ತಲೂ ಎಲ್ಲೆಂದರಲ್ಲಿಯೇ ಬಿಸಾಡಲಾಗಿದೆ.
ಘನತ್ಯಾಜ್ಯ ಸಂಗ್ರಹಿಸುವ ಡಬ್ಬಿಯೊಳಗೆ ಇಡಲಾಗಿದ್ದ ಪ್ಲಾಸ್ಟಿಕ್ ಬ್ಯಾಗಿನಲ್ಲಿ ಕೋವಿಡ್ ಸೋಂಕಿತರ ಘನತ್ಯಾಜ್ಯವನ್ನು ಸಂಗ್ರಹಿಸಿದ ಬ್ಯಾಗ್ಗಳನ್ನ ಮನಸೋ ಇಚ್ಛೆಯಂತೆ ಬಿಸಾಡಲಾಗಿದೆ. ಈ ಹಿಂದೆ ಕೋವಿಡ್ ಘನತ್ಯಾಜ್ಯ ನಿರ್ವಹಣೆಯ ಜವಾಬ್ದಾರಿ ಹೊತ್ತಿದ್ದ ಸೂರ್ಯ ಏಜೆನ್ಸಿಯವರಿಗೆ ಸಮಯಾನುಸಾರ ಹಣ ಪಾವತಿಸಲು ರಾಜ್ಯ ಸರ್ಕಾರ ಮುಂದಾಗದ ಕಾರಣ,ಇದೀಗ ಕೋವಿಡ್ ಘನತ್ಯಾಜ್ಯ ವಿಲೇವಾರಿಗೂ ಕೂಡ ಗಣಿನಗರಿ ಬಳ್ಳಾರಿಯಲಿ ಅತೀವ ತೊಂದರೆ ಎದುರಾಗಿದೆ.
ಮೊದಲೇ ಗಣಿನಾಡಿನಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುವ ಆತಂಕ ಒಂದೆಡೆಯಾದರೆ, ಮತ್ತೊಂದೆಡೆ ಈ ಘನತ್ಯಾಜ್ಯ ವಿಲೇವಾರಿ ಸರಿಯಾದ ರೀತಿಯಲ್ಲಿ ಆಗದೇ ಇರೋದರಿಂದಲೂ ಕೂಡ ಸುತ್ತಮುತ್ತಲಿನ ನಿವಾಸಿಗಳಲ್ಲಿ ಕೊರೊನಾ ಸೋಂಕಿನ ಆತಂಕವೂ ಕೂಡ ಹೆಚ್ಚಿದೆ.