ಬೀದರ್: ಮಹಾಮಾರಿ ಕೊರೊನಾ ವೈರಸ್ ಸೊಂಕು ಗಡಿ ಜಿಲ್ಲೆ ಬೀದರ್ ಜನರ ನಿದ್ದೆಗೆಡಿಸಿದ್ದು, ಜಿಲ್ಲಾಡಳಿತ ನಡೆಸುತ್ತಿರುವ ಶಂಕಿತರ ಗಂಟಲು ದ್ರವ ಹಾಗೂ ರಕ್ತದ ಮಾದರಿ ಪರೀಕ್ಷೆ ಮುಂದುವರಿದಿದೆ.
ಜಿಲ್ಲೆಯಲ್ಲಿ 14 ಪಾಸಿಟಿವ್ ಪ್ರಕರಣಗಳಿದ್ದು, ಲ್ಯಾಬ್ಗೆ ಕಳುಹಿಸಿ 1090 ಜನರ ವರದಿ ಬಾಕಿ ಇದೆ ಎಂದು ಹೇಳಲಾಗಿದೆ.
ಈ ಕುರಿತು ಕೊರೊನಾ ಬುಲೆಟಿನ್ನಲ್ಲಿ ಹೊರಡಿಸಿದ ಪ್ರಕಟಣೆಯಲ್ಲಿ ಜಿಲ್ಲೆಯಲ್ಲಿ 1691 ಜನರ ರಕ್ತ ಹಾಗೂ ಗಂಟಲಿನ ಮಾದರಿಯನ್ನು ಪ್ರಯೋಗಾಲಯಕ್ಕೆ ಪರೀಕ್ಷೆಗಾಗಿ ರವಾನಿಸಲಾಗಿದ್ದು 14 ಜನರಲ್ಲಿ ಸೋಂಕು ಧೃಡವಾಗಿದೆ. 587 ಜನರದ್ದು ನೆಗೆಟಿವ್ ವರದಿ ಬಂದಿದ್ದು 1090 ಜನರ ವರದಿ ಬರುವುದು ಬಾಕಿ ಇದೆ ಎನ್ನಲಾಗಿದೆ.