ಬಳ್ಳಾರಿ: ಕೊರೊನಾ ವೈರಸ್ ಆದಷ್ಟು ಬೇಗ ದೇಶದಿಂದ ದೂರವಾಗಲಿ, ಎಲ್ಲರೂ ನಿರ್ಭೀತವಾಗಿ ಜೀವಿಸುವಂತ ವಾತಾವರಣ ನಿರ್ಮಾಣವಾಗಲೆಂದು, ಜಿಲ್ಲೆಯ ಸಿರುಗುಪ್ಪ ನಗರದ ಶಂಭುಲಿಂಗೇಶ್ವರ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
ದೇಶದಲ್ಲಿ ದಿನೇದಿನೇ ಹೆಚ್ಚುತ್ತಿರುವ ಕೊರೊನಾ ವೈರಸ್ ಭೀತಿಯಿಂದ ಜನರು ತತ್ತರಿಸುತ್ತಿದ್ದಾರೆ, ದೇಶದಲ್ಲಿ ಹಬ್ಬುತ್ತಿರುವ ಕರೋನಾ ವೈರಸ್ ನಿಂದ ಸಿರುಗುಪ್ಪ ತಾಲೂಕು ಮತ್ತು ಜಿಲ್ಲೆ ಹಾಗೂ ರಾಜ್ಯವನ್ನು ಮುಕ್ತವಾಗಿಸಬೇಕೆಂದು ಪ್ರಾರ್ಥಿಸಿ ಪಂಚಚಾರ್ಯ ಸಂಸ್ಕೃತಿ ಹಾಗೂ ಜ್ಯೋತಿಷ್ಯ ಪಾಠಶಾಲೆಯ ಇಪ್ಪತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ತಾಲೂಕು ಜಂಗಮ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳಿಂದ ಶಂಭುಲಿಂಗೇಶ್ವರ ದೇವರಿಗೆ ಪಂಚಾಮೃತ ಅಭಿಷೇಕ ಸಹಸ್ರ ಬಿಲ್ವಾರ್ಚನೆ ನಡೆಸಲಾಯಿತು.
ವಿಶೇಷ ಪೂಜೆಯ ನೇತೃತ್ವವನ್ನು ಪಾಠಶಾಲೆಯ ಪ್ರಾಚಾರ್ಯ ಚಂದ್ರಮೌಳಿ ವಹಿಸಿದ್ದರು. ನಂತರ ಪಾಠ ಶಾಲೆಯ ವಿದ್ಯಾರ್ಥಿಗಳು ಮೃತ್ಯುಂಜಯ ಜಪ ಹಾಗೂ ಇತರೆ ಮಂತ್ರ- ಘೋಷಗಳಿಂದ ಕೊರೊನಾ ವೈರಸ್ ಭೀತಿಯಿಂದ ದೇಶ ಮುಕ್ತವಾಗುವಂತೆ ಪ್ರಾರ್ಥಿಸಿದರು.