ಬಳ್ಳಾರಿ: ಕ್ಯಾನ್ಸರ್‌ನಿಂದ ಬಳಲುತ್ತಿದ್ದ ತನ್ನ ತಾಯಿಗೆ ಚಿಕಿತ್ಸೆ ಕೊಡಿಸಲು ಪರದಾಡುತ್ತಿದ್ದ ವ್ಯಕ್ತಿಯೊಬ್ಬರು ಜಿಲ್ಲಾ ವರಿಷ್ಠಾಧಿಕಾರಿ ಟ್ವಿಟರ್ ಖಾತೆಗೆ ತನ್ನ ಸಮಸ್ಯೆಯನ್ನು ಟ್ಯಾಗ್ ಮಾಡುವ ಮೂಲಕ ಸಮಸ್ಯೆ ಪರಿಹರಿಸಿಕೊಂಡಿದ್ದಾರೆ.
ಜಿಲ್ಲೆಯ ಹೊಸಪೇಟೆ ನಗರ ಮೂಲದ ಸಂದೀಪ್ ಕುಲಕರ್ಣಿ ಎಂಬುವವರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ ಟ್ವಿಟರ್ ಖಾತೆಯಲ್ಲಿ ಬೆಂಗಳೂರಿಗೆ ಹೋಗಲು ಅನುಮತಿ ನೀಡುವಂತೆ ಹಾಗೂ ಅಗತ್ಯ ಪಾಸ್ ನೀಡಬೇಕೆಂದು ಕೋರಿದ್ದಾರೆ.
ಟ್ವಿಟರ್ ಮನವಿಯ ಸಂದೇಶ ಹೀಗಿದೆ:
ನನ್ನ ತಾಯಿ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ನಾನು ಬೆಂಗಳೂರಿಗೆ ಹೋಗಬೇಕಿದ್ದು, ಅಗತ್ಯ ಪಾಸ್ ನೀಡಬೇಕು. ಸದ್ಯ ಅವರೊಬ್ಬರೇ ಬೆಂಗಳೂರಿನಲ್ಲಿದ್ದಾರೆ. ಅವರಿಗೆ ಚಿಕಿತ್ಸೆ ಕೊಡಿಸಬೇಕಿದೆ. ಆದರೆ, ನಾನು ಲಾಕ್‌ಡೌನ್‌ನಿಂದಾಗಿ ಊರಿನಲ್ಲೇ ಸಿಲುಕಿಕೊಂಡಿದ್ದೇನೆ. ನನಗೆ ಪಾಸ್ ಕೊಟ್ಟರೆ ಬೆಂಗಳೂರಿಗೆ ಹೋಗಿ ತಾಯಿಯನ್ನು ಆಸ್ಪತ್ರೆಗೆ ಕರೆದೊಯ್ಯಲು ಸಹಾಯವಾಗುತ್ತದೆ ಎಂದು ಸಂದೀಪ್ ಕುಲಕರ್ಣಿ ಮನವಿ ಮಾಡಿದ್ದಾರೆ.
ಇನ್ನೂ ಇದಕ್ಕೆ ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ. ಕೆ. ಬಾಬಾ ಅವರು ಸಕಾರಾತ್ಮವಾಗಿ ಸ್ಪಂದಿಸಿರೋದು ಸಾಮಾ ಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನಿಮ್ಮ ತಾಯಿಗೆ ಚಿಕಿತ್ಸೆ ಕೊಡುತ್ತಿರುವ ವೈದ್ಯರ ಪತ್ರ ಹಾಗೂ ಇತರೆ ದಾಖಲೆಗಳೊಂದಿಗೆ ನನ್ನ ಕಚೇರಿಗೆ ಬಂದು ಸಂಪರ್ಕಿಸಿದರೆ ಅಗತ್ಯ ಪಾಸ್ ಗೆ ವ್ಯವಸ್ಥೆ ಮಾಡಿಕೊಡುವುದಾಗಿ ಸ್ವತಃ ಎಸ್ಪಿ ಬಾಬಾ ಅವರೇ ಟ್ವೀಟ್ ಮಾಡಿದ್ದಾರೆ.