ETV Bharat / state

ಬಳ್ಳಾರಿ ನಗರದ 20 ವಲಯಗಳಿಗೆ ನಿರಂತರ ಕುಡಿಯುವ ನೀರು ಸರಬರಾಜು ಮಾಡಿ :ಡಿಸಿ ನಕುಲ್​

ನಗರದ 20 ವಲಯಗಳಿಗೆ ಅಕ್ಟೋಬರ್​ 1ರಿಂದ ನಿರಂತರ ಕುಡಿಯುವ ನೀರು ಸರಬರಾಜು ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಡಿಸಿ ನಕುಲ್ ಸೂಚನೆ ನೀಡಿದ್ದಾರೆ

ಬಳ್ಳಾರಿ ನಗರದ 20 ವಲಯಗಳಿಗೆ ಅ.1ರಿಂದ ನಿರಂತರ ಕುಡಿಯುವ ನೀರು ಸರಬರಾಜು ಮಾಡಿ:ಡಿಸಿ ನಕುಲ್​
author img

By

Published : Aug 20, 2019, 5:24 AM IST

ಬಳ್ಳಾರಿ: ನಗರದ 20 ವಲಯಗಳಿಗೆ ಅಕ್ಟೋಬರ್​ 1ರಿಂದ ನಿರಂತರ ಕುಡಿಯುವ ನೀರು ಸರಬರಾಜು ಮಾಡುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಡಿಸಿ ನಕುಲ್ ಸೂಚನೆ ನೀಡಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ನಿರಂತರ ಕುಡಿಯುವ ನೀರು ಸರಬರಾಜಿಗೆ ಸಂಬಂಧಿಸಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 24*7 ಕುಡಿಯುವ ನೀರು ಸರಬರಾಜನ್ನು ಮೊದಲ ಹಂತವಾಗಿ ನಗರದ 20 ವಲಯಗಳಿಗೆ ಸರಬರಾಜು ಮಾಡಬೇಕು. ಅದರ ಜತೆಗೆ ಹೊಸಪೇಟೆಯ 11 ವಲಯಗಳಿಗೂ ಸರಬರಾಜು ಮಾಡುವುದಕ್ಕೆ ಮುಂದಾಗಬೇಕು ಎಂದು ಸೂಚಿಸಿದರು.

ಬಳ್ಳಾರಿ ನಗರಕ್ಕೆ ನೀರು ಸರಬರಾಜು ಮಾಡುವ ನಿಟ್ಟಿನಲ್ಲಿ ಅಮೃತ್ ಯೋಜನೆ ಅಡಿ ಮೋಕಾ ಬಳಿ ಹೊಸದಾಗಿ ನಿರ್ಮಿಸಲಾಗುತ್ತಿರುವ 800 ಎಂಎಲ್‍ಡಿ ಕೆರೆಯ ಕಾಮಗಾರಿಯಲ್ಲಿ ಶೇ.50ರಷ್ಟನ್ನು ಬರುವ ಫೆಬ್ರುವರಿಯೊಳಗೆ ಪೂರ್ಣಗೊಳಿಸಿ ಎಂದರು. ಬಳಿಕ ಅಮೃತ ಸ್ಕೀಂ ಸೇರಿದಂತೆ ವಿವಿಧ ಯೋಜನೆಗಳಡಿ ಕೈಗೆತ್ತಿಕೊಳ್ಳಲಾಗಿರುವ ಕುಡಿಯುವ ನೀರು ಸರಬರಾಜು ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿ ಅಗತ್ಯ ಸಲಹೆ-ಸೂಚನೆಗಳನ್ನು ನೀಡಿದರು.

ಈ ಸಂದರ್ಭದಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಚೀಫ್ ಎಂಜನಿಯರ್ ದಿನೇಶ ಹಾಗೂ ದೊಡ್ಡಿಹಳ್ಳಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ನಿರ್ದೇಶಕ ರಮೇಶ ಸೇರಿದಂತೆ ಎಂಜನಿಯರ್​ಗಳು ಉಪಸ್ಥಿತರಿದ್ದರು.

Intro:*ಬಳ್ಳಾರಿ ನಗರದ 20 ವಲಯಗಳಿಗೆ ಅ.1ರಿಂದ ನಿರಂತರ ಕುಡಿಯುವ ನೀರು ಸರಬರಾಜು ಮಾಡಿ:ಡಿಸಿ ನಕುಲ್*

Body:ಬಳ್ಳಾರಿ ನಗರದ 20 ವಲಯಗಳಿಗೆ ಅ.1ರಿಂದ ನಿರಂತರ ಕುಡಿಯುವ ನೀರು ಸರಬರಾಜು ಮಾಡುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಡಿಸಿ ನಕುಲ್ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ  ಸೋಮವಾರ ನಡೆದ ನಿರಂತರ ಕುಡಿಯುವ ನೀರು ಸರಬರಾಜಿಗೆ ಸಂಬಂಧಿಸಿದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನಿರಂತರ 24*7 ಕುಡಿಯುವ ನೀರು ಸರಬರಾಜನ್ನು ಮೊದಲ ಹಂತವಾಗಿ ನಗರದ 20 ವಲಯಗಳಿಗೆ ಸರಬರಾಜು ಮಾಡಬೇಕು. ಅದರ ಜತೆಗೆ ಹೊಸಪೇಟೆಯ 11 ವಲಯಗಳಿಗೂ ಸರಬರಾಜು ಮಾಡುವುದಕ್ಕೆ ಮುಂದಾಗಬೇಕು ಎಂದು ಅವರು ಸೂಚಿಸಿದರು.
ಬಳ್ಳಾರಿ ನಗರಕ್ಕೆ ನೀರು ಸರಬರಾಜು ಮಾಡುವ ನಿಟ್ಟಿನಲ್ಲಿ ಅಮೃತ್ ಯೋಜನೆ ಅಡಿ ಮೋಕಾ  ಬಳಿ ಹೊಸದಾಗಿ ನಿರ್ಮಿಸಲಾಗುತ್ತಿರುವ 800 ಎಂಎಲ್‍ಡಿ ಕೆರೆಯ ಕಾಮಗಾರಿಯಲ್ಲಿ ಶೇ.50ರಷ್ಟು ಬರುವ ಫೆಬ್ರುವರಿಯೊಳಗೆ ಪೂರ್ಣಗೊಳಿಸಿ ಎಂದರು.

ಅಮೃತ ಸ್ಕೀಂ ಸೇರಿದಂತೆ ವಿವಿಧ ಯೋಜನೆಗಳಡಿ ಕೈಗೆತ್ತಿಕೊಳ್ಳಲಾಗಿರುವ ಕುಡಿಯುವ ನೀರು ಸರಬರಾಜು ಕಾಮಗಾರಿಗಳ ಪ್ರಗತಿ ಪರಿಶೀಲನೆಯನ್ನು ಈ ಸಂದರ್ಭದಲ್ಲಿ ನಡೆಸಿದ ಜಿಲ್ಲಾಧಿಕಾರಿಗಳು, ಅಗತ್ಯ ಸಲಹೆ-ಸೂಚನೆಗಳನ್ನು ನೀಡಿದರು.

Conclusion:ಈ ಸಂದರ್ಭದಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಚೀಫ್ ಎಂಜನಿಯರ್ ದಿನೇಶ ಹಾಗೂ  ದೊಡ್ಡಿಹಳ್ಳಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ನಿರ್ದೇಶಕ ರಮೇಶ ಸೇರಿದಂತೆ ಎಂಜನಿಯರ್‍ಗಳು ಇದ್ದರು.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.