ಬಳ್ಳಾರಿ: ಜಿಲ್ಲೆಯ ಹೊಸಪೇಟೆ ತಾಲೂಕಿನ ಕಮಲಾಪುರ ಪಟ್ಟಣದಲ್ಲಿ ಯುವತಿಯನ್ನು ಚುಡಾಯಿಸಿದ್ದಕ್ಕೆ ಎರಡು ಕೋಮಿನ ಮಧ್ಯೆ ಘರ್ಷಣೆ ಸಂಬವಿಸಿರುವ ಘಟನೆ ನಿನ್ನೆ ತಡರಾತ್ರಿ ನಡೆದಿದೆ.
ಒಂದು ಕೋಮಿನ ಯುವಕ ಮತ್ತೊಂದು ಕೋಮಿನ ಯುವತಿಯನ್ನು ಚುಡಾಯಿಸಿದ್ದಾನೆ. ಬಳಿಕ, ಮತ್ತೊಂದು ಸಮುದಾಯದವರು ನ್ಯಾಯಕ್ಕಾಗಿ ಪ್ರತಿಭಟನೆ ನಡೆಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಸಂಧಾನಕ್ಕೆ ಯತ್ನಿಸಿದ್ದಾರೆ. ಕಮಲಾಪುರ ಪಟ್ಟಣದಲ್ಲಿ ಇಂದು ಕೂಡ ಬಿಗುವಿನ ವಾತಾವರಣವಿದ್ದು, ಪೊಲೀಸರು ಹೆಚ್ಚಿನ ಭದ್ರತೆ ಒದಗಿಸಿದ್ದಾರೆ.
ಒಬ್ಬ ಯುವಕ, ಯುವತಿಯನ್ನು ಚುಡಾಯಿಸಿದ್ದಾನೆ. ಸಂಧಾನ ಮಾಡಲು ಯತ್ನಿಸಲಾಗಿದೆ. ಈವರೆಗೂ ಯಾವುದೇ ದೂರು ದಾಖಲಾಗಿಲ್ಲ ಎಂದು ಕಮಲಾಪುರ ಠಾಣೆಯ ಸಿಪಿಐ ಹುಲುಗಪ್ಪ ತಿಳಿಸಿದ್ದಾರೆ.
ಡಿಎಆರ್ ವ್ಯಾನ್‍ನ್ನು ಕಮಲಾಪುರಕ್ಕೆ ಕಳುಹಿಸಿ ಕೊಡ ಲಾಗಿದೆ. ಆದರೆ, ಈವರೆಗೂ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ಬಿ.ನಿಂಬರಗಿ ತಿಳಿಸಿದ್ದಾರೆ.