ETV Bharat / state

ಅರಣ್ಯ ನಿಯಮವನ್ನು ಟ್ರಾಫಿಕ್​ ನಿಯಮಕ್ಕೆ ಹೋಲಿಕೆ ಬಗ್ಗೆ ಶಾಸಕ ಬಿ.ನಾಗೇಂದ್ರ ಪ್ರತಿಕ್ರಿಯೆ - MLA B. Nagendra reaction

ಸಚಿವ ಆನಂದ ಸಿಂಗ್ ಅವರು ಮಾತಿನ ಭರದಲ್ಲಿ ಅರಣ್ಯ ಕಾಯಿದೆ ಉಲ್ಲಂಘನೆಯನ್ನು ಟ್ರಾಫಿಕ್ ನಿಯಮ ಉಲ್ಲಂಘನೆಗೆ ಹೋಲಿಕೆ ಮಾಡಿದ್ದಾರೆ. ಅವರಿಗೆ ಈ ಹಿಂದೆ ಬೇರೆ ಖಾತೆಯನ್ನು ನೀಡಲಾಗಿತ್ತು. ಈಗ ಅರಣ್ಯ ಖಾತೆ ನೀಡಲಾಗಿದೆ. ಅವರು ಅರಣ್ಯ ಇಲಾಖೆಯ ವಿಚಾರವನ್ನು ಚೆನ್ನಾಗಿ ತಿಳಿದು ಕೊಂಡಿದ್ದಾರೆ. ಅದನ್ನು ಸಮರ್ಥವಾಗಿ ಎದುರಿಸುತ್ತಾರೆ ಎಂಬವುದು ನನ್ನ ಭಾವನೆಯಾಗಿದೆ ಎಂದು ಬಳ್ಳಾರಿ ಗ್ರಾಮಾಂತರ ಶಾಸಕ ಬಿ.ನಾಗೇಂದ್ರ ಹೇಳಿದ್ದಾರೆ.

Compare Forest Rule to Traffic Rule
ಬಳ್ಳಾರಿ ಗ್ರಾಮಾಂತರ ಶಾಸಕ ಬಿ.ನಾಗೇಂದ್ರ
author img

By

Published : Feb 14, 2020, 6:30 PM IST

ಬಳ್ಳಾರಿ: ಸಚಿವ ಆನಂದ್​ ಸಿಂಗ್​ ಅರಣ್ಯ ಕಾಯಿದೆ ಉಲ್ಲಂಘನೆಯನ್ನು ಟ್ರಾಫಿಕ್ ನಿಯಮ ಉಲ್ಲಂಘನೆಗೆ ಹೋಲಿಕೆ ಮಾಡಿರೋದು ಸರಿಯ‌ಲ್ಲ ಅವರೊಬ್ಬ ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ಈ ರೀತಿಯ ಮಾತುಗಳನ್ನಾಡಬಾರದಿತ್ತು ಎಂದು ಬಳ್ಳಾರಿ ಗ್ರಾಮಾಂತರ ಶಾಸಕ ಬಿ.ನಾಗೇಂದ್ರ ಹೇಳಿದ್ದಾರೆ.

ಬಳ್ಳಾರಿ ಗ್ರಾಮಾಂತರ ಶಾಸಕ ಬಿ.ನಾಗೇಂದ್ರ

ನಗರದಲ್ಲಿ‌ ಮಾತನಾಡಿ, ಸಚಿವ ಆನಂದ ಸಿಂಗ್ ಅವರು ಮಾತಿನ ಭರದಲ್ಲಿ ಅರಣ್ಯ ಕಾಯಿದೆ ಉಲ್ಲಂಘನೆಯನ್ನು ಟ್ರಾಫಿಕ್ ನಿಯಮ ಉಲ್ಲಂಘನೆಗೆ ಹೋಲಿಕೆ ಮಾಡಿದ್ದಾರೆ. ಅವರಿಗೆ ಈ ಹಿಂದೆ ಬೇರೆ ಖಾತೆಯನ್ನು ನೀಡಲಾಗಿತ್ತು. ಈಗ ಅರಣ್ಯ ಖಾತೆ ನೀಡಿಲಾಗಿದೆ. ಅವರು ಅರಣ್ಯ ಇಲಾಖೆಯ ವಿಚಾರವನ್ನು ಚೆನ್ನಾಗಿ ತಿಳಿದು ಕೊಂಡಿದ್ದಾರೆ. ಅದನ್ನು ಸಮರ್ಥವಾಗಿ ಎದುರಿಸುತ್ತಾರೆ ಎಂಬವುದು ನನ್ನ ಭಾವನೆಯಾಗಿದೆ ಎಂದು ತಿಳಿಸಿದರು.

ಕಟುಕನ ಕೈಯಲ್ಲಿ ಖಾತೆ ದೊರೆತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿ, ಅವರಿನ್ನೂ ಕಟುಕ ಆಗಿಲ್ಲ, ಆದ್ಮೇಲೆ ಯಾವ ಖಾತೆ ಕೊಡ್ತಾರಂಬೆಂಬುವುದನ್ನು ನೋಡೋಣ. ಅದು ಬಿಜೆಪಿ ಪಕ್ಷದ ಆಂತರಿಕ ವಿಚಾರ. ವೈಯಕ್ತಿಕವಾಗಿ ನಾನು ಮತ್ತು ಆನಂದ ಸಿಂಗ್ ಒಳ್ಳೆಯ ಸ್ನೇಹಿತರಷ್ಟೇ. ಮುಖ್ಯಮಂತ್ರಿಗಳು ಈ ಜಿಲ್ಲೆಯ ಇಬ್ಬಾಗದ ವಿಚಾರ ಕೈಬಿಟ್ಟಿದ್ದು ಸ್ವಾಗತಾರ್ಹ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.