ಬಳ್ಳಾರಿ: ಸಾರಿಗೆ ನೌಕರರು ರಾಜ್ಯದೆಲ್ಲೆಡೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ವೇಳೆ ಸಿಬ್ಬಂದಿಯೊಬ್ಬರು ಅಧಿಕಾರಿಗಳ ಮಾತಿಗೆ ಮಣಿದು ಬಳ್ಳಾರಿಯಿಂದ ಗುಂತಕಲ್ಲುಗೆ ಬಸ್ ಚಾಲನೆ ಮಾಡಿದ್ದಾರೆ. ಇದರಿಂದ ಕೋಪಗೊಂಡ ಇತರ ಪ್ರತಿಭಟನಾಕಾರರು ಆ ವ್ಯಕ್ತಿಯ ಫೋಟೋಗೆ ಶ್ರದ್ಧಾಂಜಲಿ ಸಲ್ಲಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
"ನಿಮ್ಮ ಸೇವೆ ಸಾಕು, ಮತ್ತೊಮ್ಮೆ ನೀವು ಹುಟ್ಟಿ ಬರಬೇಡಿ" ಎಂದು ಅವಮಾನ ಮಾಡಿರುವ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. ಬಳ್ಳಾರಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.