ಬಳ್ಳಾರಿ: ಜಿಲ್ಲೆಯ ಸಿರುಗುಪ್ಪ ತಾಲೂಕಿನ ತೆಕ್ಕಲಕೋಟೆ ಪಟ್ಟಣದಲ್ಲಿ ಶ್ರೀ ಕಾಡಸಿದ್ದೇಶ್ವರ ರಥೋತ್ಸವದ ವೇಳೆ ಗಲಭೆ ನಡೆದಿದ್ದು, ಪೊಲೀಸರು ಹಠಾತ್ ಲಾಠಿ ಚಾರ್ಜ್ ಮಾಡಿದ್ದಾರೆ.
ಪೂರ್ಣ ಪ್ರಮಾಣದ ರಥೋತ್ಸವ ನಡೆಸಲು ಪೊಲೀಸ್ ಇಲಾಖೆ ಸಹಕಾರ ನೀಡದ ಹಿನ್ನಲೆ ಭಕ್ತರು ಬ್ಯಾರಿಕೇಡ್ಗಳನ್ನು ನೂಕಿ ಮುಂದೆ ಹೋಗಲು ಪ್ರಯತ್ನ ಮಾಡಿದಾಗ ಈ ಘಟನೆ ನಡೆದಿದೆ.
ಉದ್ರಿಕ್ತ ಭಕ್ತರಿಂದ ಬ್ಯಾರಿಕೇಡ್ಗಳನ್ನು ಭಕ್ತರು ಕಿತ್ತು ಹಾಕಿದ್ದಾರೆ. ಗಲಭೆ ನಿಯಂತ್ರಣಕ್ಕೆ ಪೊಲೀಸರು ಹಠಾತ್ ಲಾಠಿ ಚಾರ್ಜ್ ನಡೆಸಿದರು. ಈ ಘಟನೆ ಕುರಿತು ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.