ETV Bharat / state

ಅನುಮಾನಸ್ಪದವಾಗಿ ನವವಿವಾಹಿತೆ ಮೃತಪಟ್ಟ ಪ್ರಕರಣ: ಸೂಕ್ತ ತನಿಖೆಗೆ ಮನವಿ

ಹೊಸಪೇಟೆಯ ಚಿತ್ತವಾಡ್ಗಿಯಲ್ಲಿ‌‌‌ ಅನುಮಾನಸ್ಪದವಾಗಿ ಮೃತಪಟ್ಟ ನವವಿವಾಹಿತೆ ಪ್ರಕರಣದ ತನಿಖೆಯನ್ನು ಬೇರೆ ತಾಲೂಕಿನ ಪೊಲೀಸ್ ಅಧಿಕಾರಿಗಳಿಗೆ ವಹಿಸಬೇಕು ಎಂದು  ಡಿವೈಎಸ್ ಪಿ ಕಚೇರಿಗೆ ಮನವಿ ಸಲ್ಲಿಸಲಾಯಿತು.

Appeal
Appeal
author img

By

Published : Sep 10, 2020, 4:42 PM IST

ಹೊಸಪೇಟೆ: ಚಿತ್ತವಾಡ್ಗಿಯಲ್ಲಿ‌‌‌ ಅನುಮಾನಸ್ಪದವಾಗಿ ಮೃತಪಟ್ಟ ನವವಿವಾಹಿತೆ ಪ್ರಕರಣದ ತನಿಖೆಯಲ್ಲಿ ನಿರ್ಲಕ್ಷ್ಯ ತೋರಿದ ಅಧಿಕಾರಿಯನ್ನು ವರ್ಗಾವಣೆ ಮಾಡಬೇಕು ಎಂದು ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ಹಾಗೂ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ತಾಲೂಕು ಸಮಿತಿಗಳ ನೇತೃತ್ವದಲ್ಲಿ ಇಂದು ಡಿವೈಎಸ್ ಪಿ ಕಚೇರಿಗೆ ಮನವಿ ಸಲ್ಲಿಸಿದರು.

ಗೌಸಿಯಾ ಎಂಬ ನವವಿವಾಹಿತೆ ಅನುಮಾನಸ್ಪದವಾಗಿ ಮೃತಪಟ್ಟಿದ್ದು, ಅದೊಂದು ಯೋಜಿತ ಅಪರಾಧ ಕೃತ್ಯ ಎಂಬುದು ಮಹಿಳೆಯ ಮುಖ ಹಾಗೂ ಕುತ್ತಿಗೆ ಭಾಗದ ಚಹರೆಯಿಂದ ತಿಳಿಯುತ್ತದೆ. ವರದಕ್ಷಿಣೆ ಸಲುವಾಗಿ ಕಿರುಕುಳ‌‌ ನೀಡಿರುವ ಸಾಧ್ಯತೆ ಇದ್ದು, ಗೌಸಿಯಾ ಸಹೋದರರು ಕೂಡ ಅನುಮಾನ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಹೊಸಪೇಟೆ ಪೊಲೀಸ್ ಅಧಿಕಾರಿಗಳಿಗೆ ತನಿಖೆ ಜವಾಬ್ದಾರಿಯನ್ನು ನೀಡಬಾರದು. ಬದಲಾಗಿ ಬಳ್ಳಾರಿ ಜಿಲ್ಲೆಯ ತಾಲೂಕು ಪೊಲೀಸ್ ಅಧಿಕಾರಿಗಳಿಗೆ ತನಿಖೆಯ ಜವಾಬ್ದಾರಿಯನ್ನು ನೀಡಬೇಕು ಎಂದು ಆಗ್ರಹಿಸಿದರು.

ನಂತರ ಬೇಡಿಕೆ ಈಡೇರಿಸುವಂತೆ ಸಂಘಟನಾಕಾರರು ಡಿವೈಎಸ್ ಪಿ ಕಚೇರಿಗೆ ಮನವಿ ಸಲ್ಲಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.