ಬಳ್ಳಾರಿ: ಮುಸ್ಲಿಂ ಧರ್ಮೀಯರ ಬಕ್ರೀದ್ ಹಬ್ಬದ ಹಿನ್ನೆಲೆ ಗಣಿನಾಡಿಗೆ ರಾಜಸ್ತಾನ ಮೂಲದ ಐದಾರು ಒಂಟೆಗಳನ್ನು ತರಲಾಗಿದೆ.
ಶುಕ್ರವಾರದಂದು ಸಂಜೆಯೊತ್ತಿಗೆ ಸಾವಿಗೀಡಾದವರ ಸಮಾಧಿಗಳಿಗೆ ತುಳಸಿ ನೀರು ಹಾಗೂ ಮಾಂಸ ನೈವೇದ್ಯ ಮಾಡುವ ಸಂಪ್ರದಾಯವಿದೆ. ಶನಿವಾರದಂದು ಈ ಒಂಟೆಗಳ ಮಾಂಸವನ್ನ ಕರ್ಬರ್ ಸ್ತಾನ್ ಗಳಲ್ಲಿರುವ ಪೂರ್ವಿಕರ ಸಮಾಧಿಗೆ ನೈವೇದ್ಯ ಮಾಡುವ ಪದ್ದತಿಯೂ ಜಾರಿಯಲ್ಲಿದೆ. ಹೀಗಾಗಿ, ಒಂಟೆಗಳನ್ನು ಬಲಿಕೊಡುವ ಸಂಪ್ರದಾಯವಿದೆ.
ಉಳ್ಳವರು ಈ ಒಂಟೆಗಳನ್ನ ಖರೀದಿಸಿ ಅದರ ಮಾಂಸವನ್ನ ಬಡವರಿಗೆ ದಾನ- ಧರ್ಮ ಮಾಡುವ ಸಂಸ್ಕೃತಿಯೂ ಜಾರಿಯಲ್ಲಿದೆಯಂತೆ. ವರ್ಷಕ್ಕೊಮ್ಮೆಯಾದ್ರೂ ಒಂಟೆ ಮಾಂಸ ತಿನ್ನಬೇಕೆಂಬ ಪದ್ಧತಿ ಮುಸ್ಲಿಂ ಧರ್ಮೀಯರ ಪವಿತ್ರ ಗ್ರಂಥವಾದ ಕುರಾನ್ನಲ್ಲಿ ಉಲ್ಲೇಖವಿದೆ. ಹೀಗಾಗಿ, ಒಂಟೆ ಮಾಂಸಕ್ಕೆ ಬಲು ಬೇಡಿಕೆ ಇದೆ.