ETV Bharat / state

ನಕಲಿ ದಾಖಲೆ ಸೃಷ್ಟಿಸಿ ಕಟ್ಟಡ ಮಾರಾಟ; ಉಪನೋಂದಣಾಧಿಕಾರಿ ಸೇರಿ ಇಬ್ಬರು ಅರೆಸ್ಟ್‌ - sold a building by fake documents

ನಜೀರ್ ಅಹ್ಮದ್ ಎನ್ನುವ ವ್ಯಕ್ತಿ ಸರ್ಕಾರಿ ಅಧಿಕಾರಿಗಳನ್ನು ಬಳಸಿಕೊಂಡು, ನಕಲಿ ದಾಖಲೆ ಸೃಷ್ಟಿಸಿ ಶಂಶಾದ್ ಬೇಗಂ ಅವರ ಹೆಸರಿನಲ್ಲಿದ್ದ ಆಸ್ತಿಯನ್ನು ತನ್ನದೆಂದು ಮಾರಾಟ ಮಾಡಿದ್ದಾರೆಂದು ಪಾಯಲ್ ಜೈನ್ ದೂರು ಸಲ್ಲಿಸಿದ್ದರು. ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪದ ಮೇರೆಗೆ ಹೊಸಪೇಟೆಯ ಪ್ರಭಾರ ಉಪನೋಂದಣಾಧಿಕಾರಿ ಎನ್. ತಿಪ್ಪೇಸ್ವಾಮಿ ಹಾಗೂ ಪತ್ರ ಬರಹಗಾರ ಸಾಯಿನಾಥರಾವ್ ಸಿಂಧೆ ಎಂಬುವವರನ್ನು ಪಟ್ಟಣ ಠಾಣೆ ಪೊಲೀಸರು ವಂಚನೆ ಪ್ರಕರಣದಡಿ ಬಂಧಿಸಿದ್ದಾರೆ.

sold a building by fake documents; 2 arrested
ನಕಲಿ ದಾಖಲೆಗಳನ್ನು ಸೃಷ್ಟಿಸಿ ಕಟ್ಟಡ ಮಾರಾಟ ಮಾಡಿದ ಆರೋಪ; ಇಬ್ಬರು ಅಂದರ್​
author img

By

Published : Dec 10, 2020, 1:08 PM IST

ಹೊಸಪೇಟೆ: ನಕಲಿ ದಾಖಲೆಗಳನ್ನು ಸೃಷ್ಟಿಸಿ ನಗರದ ಗಾಂಧಿ ವೃತ್ತದ ಬಳಿ 16/65 ಅಳತೆಯ ಕಟ್ಟಡ ಮಾರಾಟ ಮಾಡಿದ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪದ ಮೇರೆಗೆ ಹೊಸಪೇಟೆಯ ಪ್ರಭಾರ ಉಪನೋಂದಣಾಧಿಕಾರಿ ಎನ್. ತಿಪ್ಪೇಸ್ವಾಮಿ ಹಾಗೂ ಪತ್ರ ಬರಹಗಾರ ಸಾಯಿನಾಥರಾವ್ ಸಿಂಧೆ ಎಂಬುವವರನ್ನು ಪಟ್ಟಣ ಠಾಣೆ ಪೊಲೀಸರು ವಂಚನೆ ಪ್ರಕರಣದಡಿ ಬಂಧಿಸಿದ್ದಾರೆ.

ವಂಚನೆಗೊಳಗಾದ ನಗರದ ನಿವಾಸಿ ಪಾಯಲ್ ಜೈನ್ ಎನ್ನುವವರು ಡಿ. 8ರಂದು ಈ ಕುರಿತು ಪೊಲೀಸರಿಗೆ ದೂರು ಸಲ್ಲಿಸಿದ್ದರು. ಈ ‌ದೂರಿನನ್ವಯ ತನಿಖೆ ಕೈಗೊಂಡ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.‌ ಪ್ರಕರಣದಲ್ಲಿ ಭಾಗಿಯಾಗಿರುವ ನಗರಸಭೆ ಅಧಿಕಾರಿ ಹಾಗೂ ಆರೋಪಿಗಳಾದ ನಜೀರ್ ಅಹ್ಮದ್ ಹಾಗೂ ಶಂಶಾದ್ ಬೇಗಂ ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಠಾಣೆಯ ಪಿಐ ಎಂ. ಶ್ರೀನಿವಾಸ ತಿಳಿದರು.

ಓದಿ: ಗ್ರಾ.ಪಂ ಚುನಾವಣೆ: ದಾಖಲಾತಿ ನೆಪದಲ್ಲಿ ತಹಶೀಲ್ದಾರ್​ ಕಚೇರಿ ಸಿಬ್ಬಂದಿಯಿಂದ ಭ್ರಷ್ಟಾಚಾರ

ಪ್ರಕರಣದ ವಿವರ:

ನಜೀರ್ ಅಹ್ಮದ್ ಎನ್ನುವವರು ಸರ್ಕಾರಿ ಅಧಿಕಾರಿಗಳನ್ನು ಬಳಸಿಕೊಂಡು ಶಂಶಾದ್ ಬೇಗಂ ಅವರ ಹೆಸರಿನಲ್ಲಿದ್ದ ಆಸ್ತಿಯನ್ನು ತನ್ನದೆಂದು ಮಾರಾಟ ಮಾಡಿದ್ದಾರೆ. ನಕಲಿ ಫಾರಂ-3, ಋಣಭಾರ ಪ್ರಮಾಣ ಪತ್ರ ಸೃಷ್ಟಿಸಿ 40 ಲಕ್ಷ ರೂ. ಪಡೆದು ಮಾರಾಟ ಮಾಡಿದ್ದಾರೆ ಎಂದು ಪಾಯಲ್ ಜೈನ್ ಅವರು ಪಟ್ಟಣ ಠಾಣೆ ಪೊಲೀಸರಿಗೆ ದೂರು ಸಲ್ಲಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.