ಬಳ್ಳಾರಿ : ನಗರದಲ್ಲಿರುವ ದಂಪತಿ ತಮ್ಮ ಮನೆಯಲ್ಲಿಯೇ ಬಟ್ಟೆಯಿಂದ ಮಾಸ್ಕ್ಗಳನ್ನು ತಯಾರಿಸಿ ವಿವಿಧ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೊರೊನಾ ವಾರಿಯರ್ಸ್ಗೆ ಉಚಿತವಾಗಿ ವಿತರಣೆ ಮಾಡಿದ್ದಾರೆ.
ಯಶವಂತ ಜೈನ್, ನಯನಾ ಜೈನ್ ಎಂಬ ದಂಪತಿ ಸುಮಾರು 1 ಸಾವಿರ ಬಟ್ಟೆ ಮಾಸ್ಕ್ಗಳನ್ನು ತಯಾರಿಸಿ ಸಾರ್ವಜನಿಕ ಸ್ಥಳಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೆ ವಿತರಣೆ ಮಾಡುತ್ತಿದ್ದಾರೆ. ಜತೆಗೆ ಯಾವುದಾದರೂ ಇಲಾಖೆಗೆ ಮಾಸ್ಕ್ ಅವಶ್ಯಕತೆ ಇದ್ರೆ ಉಚಿತವಾಗಿ ತಯಾರು ಮಾಡಿ ಕೊಡುತ್ತೇವೆ ಎಂದು ತಿಳಿಸಿದ್ದಾರೆ.
ಜಿಲ್ಲಾ ಕೆಎಸ್ಆರ್ಟಿಸಿ ವಿಭಾಗದ ಅಧಿಕಾರಿ ಚಂದ್ರಶೇಖರ್ ಅವರಿಗೆ 65 ಮಾಸ್ಕ್ಗಳನ್ನು ವಿತರಣೆ ಮಾಡಿದರು.