ಹೊಸಪೇಟೆ: ವಿಜಯನಗರ ಉಪ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಆನೆ ಬಲವನ್ನು ಹೊಂದಿದೆ. ಕಾಂಗ್ರೆಸ್ ಪಕ್ಷದವರು ಕೂಡ ಬಿಜೆಪಿಗೆ ಮತ ಹಾಕುತ್ತಾರೆ. ಪಕ್ಷದ ಕಾರ್ಯಕರ್ತರು ಯಾವಾಗಲೂ ಪಕ್ಷದ ಸಿಪಾಯಿಗಳಿದ್ದಂತೆ. ತ್ರಿವೇಣಿ ಸಂಗಮದಲ್ಲಿ ನಾವು ಉಪ ಚುನಾವಣೆ ಗೆಲ್ಲಲು ಸಿದ್ಧವಾಗಿದ್ದೇವೆ ಎಂದು ಬಿಜೆಪಿ ಪಕ್ಷದ ಮಂಡಲ ಅಧ್ಯಕ್ಷ ಅನಂತ ಪದ್ಮನಾಭ ಹೇಳಿದರು.
ಅಂಬೇಡ್ಕರ್ ವೃತ್ತದಲ್ಲಿರುವ ಬಿಜೆಪಿ ಕಾರ್ಯಾಲಯದಲ್ಲಿ ಮತದಾರರ ಸಮಾಲೋಚನಾ ಸಭೆ ನಡೆಯಿತು. ಸಭೆಯಲ್ಲಿ ಮಾತನಾಡಿದ ಅನಂತ ಪದ್ಮನಾಭ, ಭಾರತೀಯ ಜನತಾ ಪಕ್ಷದಲ್ಲಿ ತ್ರಿವೇಣಿ ಸಂಗಮದಂತೆ ಪಕ್ಷದ ಕಾರ್ಯ ಚಟುವಟಿಕೆಗಳು ನಡಿಯುತ್ತಿವೆ. ಪಕ್ಷದಲ್ಲಿ ಯಾರಿಗೂ ಯಾವುದೇ ಅಸಮಾಧಾನವಾಗಿಲ್ಲ. ಆನಂದ ಸಿಂಗ್ ಅವರು ಮೂಲತಃ ಕಮಲದಲ್ಲಿ ಇದ್ದವರು. ನಾನಾ ಕಾರಣಗಳಿಂದ ಕಾಂಗ್ರೆಸ್ ಪಕ್ಷದಕ್ಕೆ ಹೋದರು ಎಂದು ಬಿಜೆಪಿಯ ತಾಲೂಕು ಮಂಡಲದ ಅಧ್ಯಕ್ಷ ಅನಂತ ಪದ್ಮನಾಭ ಹೇಳಿದರು. ಕ್ಷೇತ್ರದ ಪ್ರತಿಯೊಂದು ಗ್ರಾಮಕ್ಕೆ ನಾವು ಹೋಗಬೇಕು. ಅಲ್ಲಿನ ಜನರಿಗೆ ಪಕ್ಷದ ಬಗ್ಗೆ ತಿಳುವಳಿಕೆ ನೀಡಬೇಕು. ತಾಲೂಕಿನಲ್ಲಿ ಅಭಿವೃದ್ಧಿಯ ಕೆಲಸವನ್ನು ಎತ್ತಿ ಹಿಡಿಯಬೇಕು. ಬೇರೆ ಪಕ್ಷಕ್ಕೆ ಮತ ಹೋಗದಂತೆ ಜಾಗೃತಿ ಮೂಡಿಸಬೇಕು ಎಂದರು.