ETV Bharat / state

ನರೇಗಾ ಅನುಷ್ಠಾನದಲ್ಲಿ ಬಳ್ಳಾರಿ ಜಿ.ಪಂ ಉತ್ತಮ ಕೆಲಸ ಮಾಡ್ತಿದೆ: ಸಚಿವ ಈಶ್ವರಪ್ಪ - ಬಳ್ಳಾರಿ ಜಿ.ಪಂ

ಬಳ್ಳಾರಿ ಜಿಲ್ಲೆಯೊಂದರಲ್ಲಿಯೇ ಒಂದೇ ದಿನ 1.33 ಲಕ್ಷ ಕೂಲಿಕಾರ್ಮಿಕರು ನರೇಗಾ ಅಡಿ ಕೆಲಸ ಮಾಡಿದ್ದಾರೆ. ಕೇಂದ್ರ ಸರ್ಕಾರವು ನರೇಗಾ ಯೋಜನೆಗಾಗಿ 60 ಸಾವಿರ‌ ಕೋ.ರೂ. ಮೀಸಲಿಟ್ಟಿದೆ.

KS Eshwarappa
ಸಚಿವ ಈಶ್ವರಪ್ಪ
author img

By

Published : Jun 4, 2020, 8:59 AM IST

ಬಳ್ಳಾರಿ: ರಾಜ್ಯದಲ್ಲಿ ನಿರೀಕ್ಷೆಗೂ ಮೀರಿ ನರೇಗಾ ಕಾಮಗಾರಿಗಳಲ್ಲಿ ಕೂಲಿಕಾರ್ಮಿಕರು ಪಾಲ್ಗೊಳ್ಳುತ್ತಿದ್ದಾರೆ. ರಾಜ್ಯಕ್ಕೆ ಆಸ್ತಿಯಾಗುವಂತ ಕಾರ್ಯಕ್ರಮಗಳನ್ನು ಇದರಡಿ ಕೈಗೆತ್ತಿಕೊಳ್ಳಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಈಶ್ವರಪ್ಪ

ಬಳ್ಳಾರಿಯ ಸರ್ಕಾರಿ ಅತಿಥಿ ಗೃಹ ಕಚೇರಿಯಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಳ್ಳಾರಿ ಜಿಲ್ಲೆಯೊಂದರಲ್ಲಿಯೇ ಒಂದೇ ದಿನ 1.33 ಲಕ್ಷ ಕೂಲಿಕಾರ್ಮಿಕರು ನರೇಗಾ ಅಡಿ ಕೆಲಸ ಮಾಡಿದ್ದಾರೆ. ಅಂತರ್ಜಲ ಜಾಸ್ತಿ ಮಾಡುವ ನಿಟ್ಟಿನಲ್ಲಿ ಅಂತರ್ಜಲ ಚೇತನ, ಬದುನಿರ್ಮಾಣ, ಇಂಗುಗುಂಡಿ ನಿರ್ಮಾಣ, ಕೃಷಿಹೊಂಡ, ಕೊಳವೆಬಾವಿ ಮತ್ತು ಬಾವಿಗಳ ರಿಚಾರ್ಜ್ ಮಾಡುವುದು ಸೇರಿದಂತೆ ವಿವಿಧ ಆಸ್ತಿಯಾಗುವಂತ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ರೈತರಿಗೆ 2 ಲಕ್ಷ ರೂ. ವೈಯಕ್ತಿಕವಾಗಿ ರೈತರ ಬದುಕಿಗೆ ಲಾಭ ಕೊಡುವಂತ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ ಎಂದರು.

ಕೇಂದ್ರ ಸರ್ಕಾರವು ನರೇಗಾ ಯೋಜನೆಗಾಗಿ 60 ಸಾವಿರ‌ ಕೋ.ರೂ. ಮೀಸಲಿಟ್ಟಿದೆ. ಇತ್ತೀಚೆಗೆ ಕೋವಿಡ್ ಸಂದರ್ಭದಲ್ಲಿ ಘೋಷಿಸಲಾದ 20 ಲಕ್ಷ ರೂ. ಪ್ಯಾಕೇಜ್​ನಲ್ಲಿಯೂ 40 ಸಾವಿರ ಕೋ.ರೂ.ಗಳನ್ನ ಸಹ ಹೆಚ್ಚುವರಿಯಾಗಿ ಮೀಸಲಿರಿಸಲಾಗಿದೆ ಎಂದರು. ದಿನ ಕೆಲಸ 100 ರಿಂದ150 ದಿನಗಳಿಗೆ ಹೆಚ್ಚಿಸಲಾಗುವುದು. 249 ರೂ. ಕೂಲಿಯಿಂದ 275ಕ್ಕೆ ಹೆಚ್ಚಿಸ ಲಾಗುವುದು. ಕೂಲಿ ಮಾಡಿದ ಕೂಲಿಕಾರ್ಮಿಕನ ಖಾತೆಗೆ 15 ದಿನದೊಳಗೆ ಹಣ ಪಾವತಿಸಲಾಗುತ್ತದೆ ಎಂದರು.

ನರೇಗಾ ಕಾಮಗಾರಿಗಳ ಅನುಷ್ಠಾನದಲ್ಲಿ ಬಳ್ಳಾರಿ ಜಿ.ಪಂ ಒಳ್ಳೆಯ ಕೆಲಸ ಮಾಡುತ್ತಿದೆ ಎಂದು ಅವರು ಮೆಚ್ಚುಗೆ ‌ವ್ಯಕ್ತಪಡಿಸಿದರು. ಜಿಪಂ ಸಿಇಒ ಕೆ.ನಿತೀಶ್, ಸಹಾಯಕ ಆಯುಕ್ತ ರಮೇಶ ಕೋನ ರೆಡ್ಡಿ ಇದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.