ಬಳ್ಳಾರಿ: ನೆರೆ ಬಾಧಿತ ಗ್ರಾಮಗಳ ಸಂತ್ರಸ್ತರಿಗೆ ನೆರವಾಗಲು ಪಕ್ಕದ ಗ್ರಾಮಗಳ ಜನರು ಆಹಾರ ಸಾಮಾಗ್ರಿಗಳನ್ನು ಕಳಿಸಿಕೊಟ್ಟಂತಹ ಮಾನವೀಯ ಘಟನೆಗೆ ಜಿಲ್ಲೆ ಸಾಕ್ಷಿಯಾಯಿತು.
ಜಿಲ್ಲೆಯ ಶಿಡಿಗಿನಮೊಳ ಗ್ರಾಮದಿಂದ 130 ಮತ್ತು ಮಿನಳ್ಳಿಯಿಂದ 70 ಕ್ವಿಂಟಾಲ್ ಅಕ್ಕಿ ಮತ್ತು 7 ಕ್ವಿಂಟಾಲ್ ಬೇಳೆಯನ್ನು ಅಂಕೋಲಾದ ಸುತ್ತಮುತ್ತಲಿನ ಹಳ್ಳಿಯ ನೆರೆ ಸಂತ್ರಸ್ಥರಿಗೆ ಗ್ರಾಮದ ಜನರು ಕಳಿಸಿಕೊಟ್ಟಿದ್ದಾರೆ. ಸ್ವತಃ ಗ್ರಾಮಸ್ಥರೇ ಆಹಾರ ಸಾಮಾಗ್ರಿಗಳನ್ನು ಲಾರಿಯಲ್ಲಿ ತುಂಬಿ ನೆರೆ ಭಾದಿತ ಗ್ರಾಮಗಳಿಗೆ ಕಳಿಸಿಕೊಟ್ಟಿದ್ದು ವಿಶೇಷವಾಗಿತ್ತು.
ಗ್ರಾಮ ಪಂಚಾಯತ್ ಅಧ್ಯಕ್ಷೆ ಧನಲಕ್ಷ್ಮಿ, ಅಂಬರೀಷ್, ಬಸವರಾಜ್, ಭೀಮಲಿಂಗ, ಚನ್ನಬಸವನ ಗೌಡ ಮತ್ತು ಶಿಡಿಗಿನ ಮೊಳ ಮತ್ತು ಮೀನಹಳ್ಳಿಯ ಸಾರ್ವಜನಿಕರು ಈ ಸಂದರ್ಭಧಲ್ಲಿ ಉಪಸ್ಥಿತರಿದ್ದರು.