ಹೊಸಪೇಟೆ: ವಿಶ್ವವಿಖ್ಯಾತ ಹಂಪಿಗೆ ಬಳ್ಳಾರಿಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕೆ.ಬಿ. ಅಸೂಡೆ ಅವರು ಕುಟುಂಬ ಸಮೇತ ಭೇಟಿ ನೀಡಿ, ವೀಕ್ಷಣೆ ಮಾಡಿದರು.
ಮೊದಲು ವಿರೂಪಾಕ್ಷೇಶ್ವರನ ದರ್ಶನ ಪಡೆದು, ವಿಶೇಷ ಪೂಜೆಯನ್ನು ಸಲ್ಲಿಸಿದರು. ಬಳಿಕ ಪಂಪಾಂಬಿಕೆ ಹಾಗೂ ಭುವನೇಶ್ವರಿ ದೇವಿಯ ದರ್ಶನ ಮಾಡಿದರು. ನಂತರ ಬಸವಣ್ಣ, ಕೋದಂಡರಾಮ ದೇವಸ್ಥಾನ, ಸಾಸುವೆಕಾಳು ಹಾಗೂ ಕಡಲೆಕಾಳು ಗಣೇಶನ, ಕೃಷ್ಣಬಜಾರ್, ಸಾಲುಮಂಟಪ, ಉಗ್ರನರಸಿಂಹ, ಮಹಾನವಮಿದಿಬ್ಬ, ರಾಣಿ ಸ್ನಾನಗೃಹ, ಲೋಟಸ್ ಮಹಲ್, ವಿಜಯ ದೇವಸ್ಥಾನ ಹಾಗೂ ಕಲ್ಲಿನ ರಥ ಸೇರಿದಂತೆ ನಾನಾ ಸ್ಮಾರಕಗಳನ್ನು ಕಣ್ತುಂಬಿಕೊಂಡರು. ಗೈಡ್ಗಳಿಂದ ಸ್ಮಾರಕಗಳ ಮಾಹಿತಿಯನ್ನು ಪಡೆದುಕೊಂಡರು. ಬಳಿಕ ಅಟಲ್ ಬಿಹಾರಿ ವಾಜಪೇಯಿ ಜ್ಯೂಲಾಜಿಕಲ್ ಪಾರ್ಕ್ ನೋಡಲು ತೆರಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೇಟಿ:
ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್ ಕೂಡ ಭೇಟಿ ನೀಡಿದರು. ನಂತರ ವಿರೂಪಾಕ್ಷೇಶ್ವರ ದೇವಸ್ಥಾನದ ಇತಿಹಾಸವನ್ನು ಗೈಡ್ನಿಂದ ತಿಳಿದುಕೊಂಡರು.