ETV Bharat / state

19ನೇ ಲೋಕಸಭಾ ಚುನಾವಣೆಗೆ ಅಣಿಯಾಗುತ್ತಿದೆ ಗಣಿ ಜಿಲ್ಲೆ ಬಳ್ಳಾರಿ! - ವಿ.ಕೆ.ಆರ್. ವಿ.ರಾವ್

1999ರ ಲೋಕಸಭಾ ಚುನಾವಣೆಯಲ್ಲಿ ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಅಂದಿನ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ಬಿಜೆಪಿಯ ಸುಷ್ಮಾಸ್ವರಾಜ್ ಸ್ಪರ್ಧಿಗಿಳಿಯುವ ಮುಖೇನ ಇಡೀ ದೇಶದ ಗಮನ ಸೆಳೆಯಲಾಗಿತ್ತು. ಸದ್ಯ 19ನೇ ಲೋಕಸಭಾ ಚುನಾವಣೆಗೆ ಬಳ್ಳಾರಿ ಸಿದ್ಧವಾಗುತ್ತಿದೆ.

19ನೇ ಲೋಕಸಭಾ ಚುನಾವಣೆಗೆ ಅಣಿಯಾಗಲಿರುವ ಗಣಿ ಜಿಲ್ಲೆ ಬಳ್ಳಾರಿ
author img

By

Published : Mar 23, 2019, 4:28 AM IST

ಬಳ್ಳಾರಿ: 17ನೇ ಲೋಕಸಭಾ ಚುನಾವಣೆಗೆ ಪಾದಾರ್ಪಣೆ ಮಾಡಿರುವ ಬೆನ್ನಲ್ಲೇ ಗಣಿ ಜಿಲ್ಲೆಯಾದ ಬಳ್ಳಾರಿ‌ ಈಗಾಗಲೇ ಎರಡು ಉಪಚುನಾವಣೆ ಸೇರಿದಂತೆ ಈವರೆಗೂ 18 ಚುನಾವಣೆಗಳು ಪೂರ್ಣಗೊಂಡು, ಈಗ 19ನೇ ಲೋಕಸಭಾ ಚುನಾವಣೆಗೆ ಅಣಿಯಾಗಲಿದೆ.

16ನೇ ಲೋಕಸಭಾ ಚುನಾವಣೆ 2019ರ ಜೂನ್ ತಿಂಗಳಲ್ಲಿ ಮುಕ್ತಾಯಗೊಳ್ಳಲಿದೆ. 17ನೇ ಲೋಕಸಭಾ ಚುನಾವಣೆಯ ಪರ್ವ ಶುರುವಾಗಲಿದೆ. ಹೊಸ ಸರ್ಕಾರ ರಚನೆಯ ಹೊಸ್ತಿಲಲ್ಲಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಯಾವ ಪಕ್ಷದ ಅಭ್ಯರ್ಥಿ ಆಯ್ಕೆಯಾಗುತ್ತಾರೆಂಬ ರಾಜಕೀಯ ಲೆಕ್ಕಾಚಾರ ಜೋರಾಗಿದೆ.

19ನೇ ಲೋಕಸಭಾ ಚುನಾವಣೆಗೆ ಅಣಿಯಾಗಲಿರುವ ಗಣಿ ಜಿಲ್ಲೆ ಬಳ್ಳಾರಿ

1952ನೇ ಇಸವಿಯಲ್ಲಿ ಬಳ್ಳಾರಿ ಲೋಕಸಭಾ ಕ್ಷೇತ್ರವು ಮದ್ರಾಸ್ ಕರ್ನಾಟಕ ಪ್ರಾಂತ್ಯಕ್ಕೆ ಒಳಪಟ್ಟಿತ್ತು. ಆಗ ರಾಯದುರ್ಗ, ಕೂಡ್ಲಿಗಿ, ಹೊಸಪೇಟೆ, ಹರಪನಹಳ್ಳಿ ಹಾಗೂ ಬಳ್ಳಾರಿ ವಿಧಾನಸಭಾ ಕ್ಷೇತ್ರಗಳು ಇದರ ವ್ಯಾಪ್ತಿಗೆ ಒಳಪಟ್ಟಿದ್ದವು. 2004ನೇ ಇಸವಿವರೆಗೂ ಈ ಕ್ಷೇತ್ರ ಸಾಮಾನ್ಯ ವರ್ಗದ ಕ್ಷೇತ್ರವಾಗಿತ್ತು. ಆ ಬಳಿಕ ಪರಿಶಿಷ್ಟ ಪಂಗಡ ವರ್ಗದ‌ ಮೀಸಲು ಕ್ಷೇತ್ರವಾಗಿದೆ.ಆದರೀಗ ಹೊಸದಾಗಿ ಸೇರ್ಪಡೆಗೊಂಡ ಹರಪನಹಳ್ಳಿ ಸೇರಿದಂತೆ ಹತ್ತು ವಿಧಾನಸಭಾ ಕ್ಷೇತ್ರಗಳು ಇದರ ವ್ಯಾಪ್ತಿಗೆ ಬರಲಿವೆ. ಕ್ಷೇತ್ರ ಪುನರ್ ವಿಂಗಡಣೆಯಿಂದ ಜಿಲ್ಲೆಯ ಸಿರುಗುಪ್ಪ ವಿಧಾನಸಭಾ ಕ್ಷೇತ್ರವನ್ನು ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ ಸೇರ್ಪಡೆ ಮಾಡಲಾಯಿತು.

ಹೊಸದಾಗಿ ಸೇರ್ಪಡೆಗೊಂಡ ಹರಪನಹಳ್ಳಿ ವಿಧಾನಸಭಾ ಕ್ಷೇತ್ರವು ಇತ್ತ ಬಳ್ಳಾರಿ ಅಥವಾ ದಾವಣಗೆರೆ ಕ್ಷೇತ್ರ ವ್ಯಾಪ್ತಿಗೆ ಒಳಪಡಲಿದೆ ಎಂಬ ಸಂಶಯ ಮೂಡಿದ್ದು, ಸ್ವತಃ‌ ಜಿಲ್ಲಾಡಳಿತವೇ ಈ ಕುರಿತಾದ ಮಾಹಿತಿಯನ್ನು ಚುನಾವಣೆ ಆಯೋಗಕ್ಕೆ ತಿಳಿಸಿದೆಯಾದ್ರೂ, ಆ ಕುರಿತ ಪತ್ರವನ್ನೂ ಬರೆಯಲಾಗಿದೆ.‌ ಆದರೆ, ಆಯೋಗದಿಂದ ಈವರೆಗೂ ಯಾವುದೇ ಪ್ರತ್ಯುತ್ತರ ಬಾರದಿರುವ ಕಾರಣ, ಹರಪನಹಳ್ಳಿ ಸದ್ಯ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲೇ ಮುಂದುವರೆವ ಸಾಧ್ಯತೆ ಹೆಚ್ಚಿದೆ. ಹೀಗಾಗಿ, ಭೌಗೋಳಿಕವಾಗಿ ಬಹುವಿಸ್ತಾರವುಳ್ಳ ಜಿಲ್ಲೆ ಗಣಿನಾಡು ಬಳ್ಳಾರಿಯಾಗಿದೆ ಎಂತಲೂ ಹೇಳಬಹುದಾಗಿದೆ.

ಕಾಂಗ್ರೆಸ್ ಭದ್ರಕೋಟೆ:

ಎಐಸಿಸಿ ಅಧಿನಾಯಕಿ ಸೋನಿಯಾ ಗಾಂಧಿ ಹಾಗೂ ಸುಷ್ಮಾ ಸ್ವರಾಜ್ ರವರ ಸ್ಪರ್ಧೆಯಿಂದಾಗಿ ಗಣಿ ಜಿಲ್ಲೆಯಾದ ಬಳ್ಳಾರಿ ಪ್ರತಿಷ್ಠಿತ ಕ್ಷೇತ್ರವಾಗಿ ಪರಿಣಮಿಸಿತ್ತು. 1952 ನೇ ಇಸವಿಯಿಂದ 1999ರವರೆಗೂ ಸತತ 13‌ ಬಾರಿ ಕ್ರಮವಾಗಿ ಕಾಂಗ್ರೆಸ್ ಅಭ್ಯರ್ಥಿಗಳೇ ಗೆಲುವು ಸಾಧಿಸಿದ್ದಾರೆ. ಲೋಕಸಭಾ ಉಪಚುನಾವಣೆ ಸೇರಿ 2000 ನೇ ಇಸವಿಯಲ್ಲಿ ನಡೆದ ಉಪಚುನಾವಣೆಯಲ್ಲೂ ಕಾಂಗ್ರೆಸ್ ಜಯಭೇರಿ ಬಾರಿಸಿದೆ. ಆಗಾಗಿ, ಈ ಕ್ಷೇತ್ರವೂ ಕಾಂಗ್ರೆಸ್ ಭದ್ರಕೋಟೆ ಎಂದೇ ಹೇಳಲಾಗುತ್ತದೆ.

ಇನ್ನೂ ಬಿಜೆಪಿಯು 2004, 2009 ಹಾಗೂ 2014ನೇ ಇಸವಿಯಲ್ಲಿ ಗೆಲುವು ಸಾಧಿಸಿದೆ. ಆದರೆ, ಈವರೆಗೂಯಾವ ಪಕ್ಷಗಳು ಕಣಕ್ಕಿಳಿಸುವ ಅಭ್ಯರ್ಥಿಗಳ ಪಟ್ಟಿಯನ್ನೇ ಬಿಡುಗಡೆ‌ ಮಾಡಿಲ್ಲ. ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಹೊರಗಿನವರನ್ನೇ‌ ಇಲ್ಲಿ ಕಣಕ್ಕಿಳಿಸಲು ನಿರ್ಧರಿಸಿವೆಯಂತೆ.

ಇದುವರೆಗೆ ಸಂಸದರಾಗಿ ಆಯ್ಕೆಯಾದ ಅಭ್ಯರ್ಥಿಗಳ ವಿವರ:

ಟಿ.ಸುಬ್ರಮಣ್ಯಂ (3 ಬಾರಿ), ವಿ.ಕೆ.ಆರ್. ವಿ.ರಾವ್ (2 ಬಾರಿ), ಕೆ.ಎಸ್.ವೀರ ಭದ್ರಪ್ಪ, ಆರ್.ವೈ. ಘೋರ್ಪಡೆ, ಬಸವರಾಜೇಶ್ವರಿ (3 ಬಾರಿ), ಕೆ.ಸಿ‌.ಕೊಂಡಯ್ಯ (2 ಬಾರಿ), ಸೋನಿಯಾಗಾಂಧಿ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿದ್ದಾರೆ.ಜಿ.ಕರುಣಾಕರರೆಡ್ಡಿ, ಜೆ.ಶಾಂತಾ, ಬಿ.ಶ್ರೀರಾಮುಲು ಬಿಜೆಪಿ ಯಿಂದ ಕ್ರಮವಾಗಿ ಒಂದು ಬಾರಿಗೆ ಆಯ್ಕೆಯಾಗಿದ್ದಾರೆ.ಎರಡು ಬಾರಿ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ಸಿನ ಕೆ.ಬಸವನಗೌಡ ಹಾಗೂ ವಿ.ಎಸ್.ಉಗ್ರಪ್ಪನವರು ಆಯ್ಕೆಯಾಗಿದ್ದಾರೆ.

ಗಣಿನಾಡು ಬಳ್ಳಾರಿ ಜಿಲ್ಲೆ ಪ್ರಾರಂಭದಿಂದಲೂ ಕಾಂಗ್ರೆಸ್ ಭದ್ರ ಕೋಟೆಯಾಗಿದೆ. ಪ್ರಾರಂಭದಿಂದ ಎರಡು ಉಪಚುನಾವಣೆ ಸೇರಿದಂತೆ ಒಟ್ಟಾರೆಯಾಗಿ 13 ಲೋಕಸಭಾ ಚುನಾವಣೆಗಳಲ್ಲಿ ನಿರಂತರವಾಗಿ ಜಯಗಳಿಸಿದ್ದ ಕಾಂಗ್ರೆಸ್ ಪಕ್ಷ 2004ರಲ್ಲಿ ಪ್ರಪ್ರಥಮ ಬಾರಿಗೆ ಲೋಕಸಭಾ ಚುನಾವಣೆಯಲ್ಲಿ ಪರಾಭವ ಗೊಂಡಿತು. 1999ರ ಲೋಕಸಭಾ ಚುನಾವಣೆಯಲ್ಲಿ ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಅಂದಿನ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ಬಿಜೆಪಿಯ ಸುಷ್ಮಾಸ್ವರಾಜ್ ಸ್ಪರ್ಧಿಗಿಳಿಯುವ ಮುಖೇನ ಇಡೀ ದೇಶದ ವಿಶೇಷ ಗಮನ ಸೆಳೆದಿದ್ದ ಕ್ಷೇತ್ರವಿದು.

ಅದರಿಂದ ಜಿಲ್ಲೆಯಲ್ಲಿ ಬಿಜೆಪಿ ಪಕ್ಷಕ್ಕೆ ಭದ್ರ ನೆಲೆಯೂರಲು ಕಾರಣವಾಯಿತು. ನಂತರ ನಡೆದ 2009 ಮತ್ತು 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜಯಗಳಿಸಿದ್ದು, 2018ರ ಲೋಕಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್‍ ಅಭ್ಯರ್ಥಿ ವಿ.ಎಸ್.ಉಗ್ರಪ್ಪ ಜಯಗಳಿಸುವ ಮುಖೇನ ಬಿಜೆಪಿ ತೆಕ್ಕೆಯಲ್ಲಿದ್ದ ಲೋಕಸಭಾ ಕ್ಷೇತ್ರವನ್ನು ಕಾಂಗ್ರೆಸ್ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಈ ಬಾರಿಯ ಲೋಕಸಭಾ ಚುನಾವಣೆಯ ಫಲಿತಾಂಶವು ಕುತೂಹಲ ಮೂಡಿಸಲಿದೆ.

Intro:19ನೇ ಲೋಕಸಭಾ ಚುನಾವಣೆಗೆ ಅಣಿಯಾಗಲಿರುವ ಗಣಿ ಜಿಲ್ಲೆ ಬಳ್ಳಾರಿ!
ಬಳ್ಳಾರಿ: 17ನೇ ಲೋಕಸಭಾ ಚುನಾವಣೆಗೆ ಪಾದಾರ್ಪಣೆ ಮಾಡಿರುವ ಬೆನ್ನಲ್ಲೇ ಗಣಿ ಜಿಲ್ಲೆಯಾದ ಬಳ್ಳಾರಿ‌ ಈಗಾಗಲೇ ಎರಡು ಉಪಚುನಾವಣೆ ಸೇರಿದಂತೆ ಈವರೆಗೂ 18 ಚುನಾವಣೆಗಳು ಪೂರ್ಣಗೊಂಡು, ಈಗ 19ನೇ ಲೋಕಸಭಾ ಚುನಾವಣೆಗೆ ಅಣಿಯಾಗಲಿದೆ.
16ನೇ ಲೋಕಸಭಾ ಚುನಾವಣೆ 2019ರ ಜೂನ್ ತಿಂಗಳಲ್ಲಿ ಮುಕ್ತಾಯಗೊಳ್ಳಲಿದೆ. 17ನೇ ಲೋಕಸಭಾ ಚುನಾವಣೆಯ ಪರ್ವ ಶುರುವಾಗಲಿದೆ. ಹೊಸ ಸರ್ಕಾರ ರಚನೆಯ ಹೊಸ್ತಿಲಲಿ ಈ ಬಾರಿಯ ಲೋಕಸಭಾ ಚುನಾವಣೆಯಲಿ ಯಾವ ಪಕ್ಷದೋರು ಆಯ್ಕೆಯಾಗುತ್ತಾರೆಂಬ ರಾಜಕೀಯ ಲೆಕ್ಕಾಚಾರದ ಭರಾಟೆಯೂ ಜೋರಾಗಿದೆ.
1952ನೇ ಇಸವಿಯಲ್ಲಿ ಬಳ್ಳಾರಿ ಲೋಕಸಭಾ ಕ್ಷೇತ್ರವು ಮದ್ರಾಸ್ ಕರ್ನಾಟಕದ ಪ್ರಾಂತ್ಯಕ್ಕೆ ಒಳಪಟ್ಟಿತ್ತು. ಆಗ ರಾಯದುರ್ಗ, ಕೂಡ್ಲಿಗಿ, ಹೊಸಪೇಟೆ, ಹರಪನಹಳ್ಳಿ
ಹಾಗೂ ಬಳ್ಳಾರಿ ವಿಧಾನಸಭಾ ಕ್ಷೇತ್ರಗಳು ಇದರ ವ್ಯಾಪ್ತಿಗೆ ಒಳಪಟ್ಟಿದ್ದವು. 2004ನೇ ಇಸವಿವರೆಗೂ ಈ ಕ್ಷೇತ್ರ ಸಾಮಾನ್ಯ ವರ್ಗದ ಕ್ಷೇತ್ರವಾಗಿತ್ತು. ಆ ಬಳಿಕ ಪರಿಶಿಷ್ಟ ಪಂಗಡ ವರ್ಗದ‌ ಮೀಸಲು ಕ್ಷೇತ್ರವಾಗಿದೆ.
ಆದರೀಗ ಮೊನ್ನೆತಾನೆ ಸೇರ್ಪಡೆ ಗೊಂಡಿದ್ದ ಹರಪನಹಳ್ಳಿ ಸೇರಿದಂತೆ ಹತ್ತು ವಿಧಾನಸಭಾ ಕ್ಷೇತ್ರಗಳು ಇದರ ವ್ಯಾಪ್ತಿಗೆ ಬರಲಿವೆ. ಕ್ಷೇತ್ರ ಪುನರ್ ವಿಂಗಡಣೆಯಿಂದ ಜಿಲ್ಲೆಯ ಸಿರುಗುಪ್ಪ ವಿಧಾನ
ಸಭಾ ಕ್ಷೇತ್ರವನ್ನು ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ ಸೇರ್ಪಡೆ ಮಾಡಲಾಯಿತು. ಹೊಸದಾಗಿ ಸೇರ್ಪಡೆಗೊಂಡ ಹರಪನಹಳ್ಳಿ ವಿಧಾನಸಭಾ ಕ್ಷೇತ್ರವು ಇತ್ತ ಬಳ್ಳಾರಿ ಅಥವಾ ದಾವಣಗೆರೆ ಕ್ಷೇತ್ರ ವ್ಯಾಪ್ತಿಗೆ ಒಳಪಡಲಿದೆ ಎಂಬ ಸಂಶಯ ಮೂಡಿದ್ದು, ಸ್ವತಃ‌ ಜಿಲ್ಲಾಡಳಿತವೇ ಈ ಕುರಿತಾದ ಮಾಹಿತಿಯನ್ನು ಚುನಾವಣೆ ಆಯೋಗಕ್ಕೆ ತಿಳಿಸಿದೆಯಾದ್ರೂ, ಆ ಕುರಿತ ಪತ್ರವನ್ನೂ ಬರೆಯಲಾಗಿದೆ.‌ ಆದರೆ, ಆಯೋಗದಿಂದ ಈವರೆಗೂ ಯಾವುದೇ ಪ್ರತ್ಯುತ್ತರ ಬಾರದಿರುವ ಕಾರಣ, ಹರಪನಹಳ್ಳಿ ಸದ್ಯ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲೇ ಮುಂದುವರೆವ ಸಾಧ್ಯತೆ ಹೆಚ್ಚಿದೆ. ಹೀಗಾಗಿ, ಭೌಗೋಳಿಕವಾಗಿ ಬಹುವಿಸ್ತಾರ ವುಳ್ಳ ಜಿಲ್ಲೆ ಗಣಿನಾಡು ಬಳ್ಳಾರಿಯಾಗಿದೆ ಎಂತಲೂ ಹೇಳ ಬಹುದಾಗಿದೆ.

Body:ಕಾಂಗ್ರೆಸ್ ಭದ್ರಕೋಟೆ: ಎಐಸಿಸಿ ಅಧಿನಾಯಕಿ ಸೋನಿಯಾ ಗಾಂಧಿ ಹಾಗೂ ಸುಷ್ಮಾ ಸ್ವರಾಜ್ ರವರ ಸ್ಪರ್ಧೆಯಿಂದಾಗಿ ಗಣಿ ಜಿಲ್ಲೆಯಾದ ಬಳ್ಳಾರಿಗೆ ಪ್ರತಿಷ್ಠಿತ ಕ್ಷೇತ್ರವಾಗಿ ಪರಿಣಮಿಸಿತು.
1952 ನೇ ಇಸವಿಯಿಂದ 1999ರವರೆಗೂ ಸತತ 13‌ ಬಾರಿ ಕ್ರಮವಾಗಿ ಕಾಂಗ್ರೆಸ್ ಅಭ್ಯರ್ಥಿಗಳೇ ಗೆಲುವು ಸಾಧಿಸಿದ್ದಾರೆ. ಮೊನ್ನೆ ತಾನೇ ನಡೆದ ಲೋಕಸಭಾ ಉಪಚುನಾವಣೆ ಸೇರಿ 2000 ನೇ ಇಸವಿಯಲ್ಲಿ ನಡೆದ ಉಪಚುನಾವಣೆಯಲ್ಲೂ ಕಾಂಗ್ರೆಸ್ ಜಯಭೇರಿ ಬಾರಿಸಿದೆ. ಆಗಾಗಿ, ಈ ಕ್ಷೇತ್ರವೂ ಕಾಂಗ್ರೆಸ್ ಭದ್ರಕೋಟೆ ಎಂದೇ ಹೇಳಲಾಗುತ್ತದೆ.
ಇನ್ನೂ ಬಿಜೆಪಿಯು 2004, 2009 ಹಾಗೂ 2014ನೇ ಇಸವಿಯಲ್ಲಿ ಗೆಲುವು ಸಾಧಿಸಿದೆ. ಆದರೆ, ಈವರೆಗೂ
ಯಾವ ಪಕ್ಷಗಳು ಕಣಕ್ಕಿಳಿಸುವ ಅಭ್ಯರ್ಥಿಗಳ ಪಟ್ಟಿಯನ್ನೇ ಬಿಡುಗಡೆ‌ ಮಾಡಿಲ್ಲ. ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಹೊರಗಿನವರನ್ನೇ‌ ಇಲ್ಲಿ ಕಣಕ್ಕಿಳಿಸಲು ನಿರ್ಧರಿಸಿವೆಯಂತೆ.
ಇದುವರೆಗೂ ಸಂಸದರಾಗಿ ಆಯ್ಕೆಯಾದ ಅಭ್ಯರ್ಥಿಗಳು ವಿವರ ಇಂತಿದೆ: ಟಿ.ಸುಬ್ರಮಣ್ಯಂ (3 ಬಾರಿ), ವಿ.ಕೆ.ಆರ್. ವಿ.ರಾವ್ (2 ಬಾರಿ), ಕೆ.ಎಸ್.ವೀರ ಭದ್ರಪ್ಪ, ಆರ್.ವೈ. ಘೋರ್ಪಡೆ, ಬಸವರಾಜೇಶ್ವರಿ (3 ಬಾರಿ), ಕೆ.ಸಿ‌.ಕೊಂಡಯ್ಯ (2 ಬಾರಿ), ಸೋನಿಯಾಗಾಂಧಿ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿದ್ದಾರೆ.
ಜಿ.ಕರುಣಾಕರರೆಡ್ಡಿ, ಜೆ.ಶಾಂತಾ, ಬಿ.ಶ್ರೀರಾಮುಲು ಬಿಜೆಪಿ ಯಿಂದ ಕ್ರಮವಾಗಿ ಒಂದು ಬಾರಿಗೆ ಆಯ್ಕೆಯಾಗಿದ್ದಾರೆ.
ಎರಡು ಬಾರಿ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ಸಿನ ಕೆ.ಬಸವನಗೌಡ ಹಾಗೂ ವಿ.ಎಸ್.ಉಗ್ರಪ್ಪನವರು ಆಯ್ಕೆಯಾಗಿದ್ದಾರೆ.

ಅಭಿವೃದ್ಧಿ ಕಾರ್ಯಗಳಿದ್ದರೂ, ಇಲ್ಲಿ ಪ್ರತಿಷ್ಠೆಯೇ ಬಹುಮುಖ್ಯ:
ಗಣಿನಾಡು ಬಳ್ಳಾರಿ ಜಿಲ್ಲೆ ಪ್ರಾರಂಭದಿಂದಲೂ ಕಾಂಗ್ರೆಸ್ ಭದ್ರ ಕೋಟೆಯಾಗಿದೆ. ಪ್ರಾರಂಭದಿಂದ ಎರಡು ಉಪಚುನಾವಣೆ ಸೇರಿದಂತೆ ಒಟ್ಟಾರೆಯಾಗಿ 13 ಲೋಕಸಭಾ ಚುನಾವಣೆಗಳಲ್ಲಿ ನಿರಂತರವಾಗಿ ಜಯಗಳಿಸಿದ್ದ ಕಾಂಗ್ರೆಸ್ ಪಕ್ಷ 2004ರಲ್ಲಿ ಪ್ರಪ್ರಥಮ ಬಾರಿಗೆ ಲೋಕಸಭಾ ಚುನಾವಣೆಯಲ್ಲಿ ಪರಾಭವ ಗೊಂಡಿತು. 1999ರ ಲೋಕಸಭಾ ಚುನಾವಣೆಯಲ್ಲಿ ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಅಂದಿನ ಎಐಸಿಸಿ ಅಧ್ಯಕ್ಷೆ ಸೋನಿ ಯಾಗಾಂಧಿ, ಬಿಜೆಪಿಯ ಸುಷ್ಮಾಸ್ವರಾಜ್ ಸ್ಪರ್ಧಿಗಿಳಿಯುವ ಮುಖೇನ ಇಡೀ ದೇಶದ ವಿಶೇಷ ಗಮನ ಸೆಳೆದಿದ್ದ ಕ್ಷೇತ್ರವಿದು. ಅದರಿಂದ ಜಿಲ್ಲೆಯಲ್ಲಿ ಬಿಜೆಪಿ ಪಕ್ಷಕ್ಕೆ ಭದ್ರ ನೆಲೆಯೂರಲು ಕಾರಣವಾಯಿತು. ನಂತರ ನಡೆದ 2009 ಮತ್ತು 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜಯಗಳಿಸಿದ್ದು, 2018ರ ಲೋಕಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್‍ ಅಭ್ಯರ್ಥಿ ವಿ.ಎಸ್.ಉಗ್ರಪ್ಪ ಜಯಗಳಿಸುವ ಮುಖೇನ
ಬಿಜೆಪಿ ತೆಕ್ಕೆಯಲ್ಲಿದ್ದ ಲೋಕಸಭಾ ಕ್ಷೇತ್ರವನ್ನು ಕಾಂಗ್ರೆಸ್ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಈ ಬಾರಿಯ ಲೋಕಸಭಾ ಚುನಾವಣೆಯ ಫಲಿತಾಂಶವು ಕುತೂಹಲ ಮೂಡಿಸಲಿದೆ.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:R_KN_BEL_03_120319_BALLARI_FORT_VEERESH GK

R_KN_BEL_04_120319_BALLARI_RAILWAY_TRACK_VEERESH GK

R_KN_BEL_05_120319_BALLARI_MOTHI_CIRCLE_VEERESH GK

R_KN_BEL_06_120319_BALLARI_MOTHI_CIRCLE_VEERESH GK
ETV Bharat Logo

Copyright © 2024 Ushodaya Enterprises Pvt. Ltd., All Rights Reserved.