ಬಳ್ಳಾರಿ: ಜಿಲ್ಲೆಯ ವಿಜಯನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನಲೆ ವಿವಿಧ ಮತಗಟ್ಟೆಗಳಿಗೆ ಜಿಲ್ಲಾ ಚುನಾವಣಾಧಿಕಾರಿ ಎಸ್.ಎಸ್.ನಕುಲ್, ಜಿಲ್ಲಾ ಪಂಚಾಯಿತಿ ಸಿಇಒ ಕೆ.ನಿತೀಶ ಹಾಗೂ ಎಸ್ಪಿ ಸಿ.ಕೆ.ಬಾಬಾ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಗಾದಿಗನೂರಿನ ಮತಗಟ್ಟೆಗೆ ಭೇಟಿ ನೀಡಿ ಕಮಲಾಪುರ ಹಾಗೂ ತುಂಗಾಭದ್ರಾ ಡ್ಯಾಂ ಬಳಿಯ ಮತಗಟ್ಟೆಗಳನ್ನು ಪರಿಶೀಲಿಸಿದರು. ಮತಗಟ್ಟೆಗಳಲ್ಲಿ ಚುನಾವಣಾ ಆಯೋಗ ನಿಗದಿಪಡಿಸಿದ ವಿವಿಧ ಸೌಕರ್ಯಗಳ ಪರಿಶೀಲನೆ ನಡೆಯಿತು.
ಮತದಾರರಿಗೆ ವ್ಹೀಲ್ ಚೇರ್, ಫ್ಯಾನ್, ವಿದ್ಯುತ್ ಸಂಪರ್ಕ, ಶೌಚಾಲಯ ವ್ಯವಸ್ಥೆಗಳನ್ನು ಈ ವೇಳೆ ಗಮನಿಸಲಾಯಿತು. ಅಗತ್ಯ ಸಲಹೆ-ಸೂಚನೆಗಳನ್ನು ಭೇಟಿ ವೇಳೆ ಅಧಿಕಾರಿಗಳಿಂದ ಪಡೆಯಲಾಯಿತು.
ಇದಕ್ಕೂ ಮುನ್ನ ಚೆಕ್ ಪೋಸ್ಟ್ಗಳಿಗೂ ಭೇಟಿ ನೀಡಲಾಯಿತು. ಎಎಸ್ಪಿ ಮರಿಯಂ ಜಾರ್ಜ್, ಪ್ರೊಬೇಷನರಿ ಐಎಎಸ್ ಅಧಿಕಾರಿ ಈಶ್ವರ್ ಕಾಂಡೂ, ಡಿವೈಎಸ್ಪಿ ರಘುಕುಮಾರ್, ತಹಶೀಲ್ದಾರ್ ಸಿ.ಜಿ.ಹೆಗಡೆ ಸೇರಿ ಚುನಾವಣಾ ಸಿಬ್ಬಂದಿ ಇದ್ದರು.