ETV Bharat / state

ಬಳ್ಳಾರಿ ಜಿಂದಾಲ್‌ ಸಮೂಹ ಸಂಸ್ಥೆಯಲ್ಲೂ 3 ವರ್ಷ ತರಬೇತಿ ಪಡೆದಿದ್ದ 'ಬಂಗಾರ'ದ ಬಾಹು ನೀರಜ್..

ಹರಿಯಾಣದ ಪಾಣಿಪತ್​ನ ಖಾಂದ್ರ ಗ್ರಾಮದ 23 ವರ್ಷದ ನೀರಜ್ ಚೋಪ್ರಾ ಜಾವೆಲಿನ್ ಥ್ರೋ ತರಬೇತಿಗಾಗಿ 2017ನೇ ಇಸವಿಯಲ್ಲೇ ಇಲ್ಲಿಗೆ ಬಂದಿದ್ದರಂತೆ. 2017ರಿಂದ 2020ರವರೆಗೆ ಕೂಡ ನೀರಜ್ ಇಲ್ಲಿಯೇ ತರಬೇತಿ ಪಡೆದಿದ್ದಾರೆ. ಅಲ್ಲದೇ, ದೇಶದ ನಾನಾ ಕಡೆಗಳಲ್ಲಿ ನಡೆದ ಜಾವೆಲಿನ್ ಥ್ರೋ ತರಬೇತಿ ಶಿಬಿರಗಳಲ್ಲಿ ಪಾಲ್ಗೊಂಡಿದ್ದರು..

jsw steels sports trained in niraj chopra
ನೀರಜ್​ ಚೋಪ್ರಾ
author img

By

Published : Aug 8, 2021, 9:31 PM IST

ಬಳ್ಳಾರಿ : ಟೋಕಿಯೊ ಒಲಿಂಪಿಕ್ಸ್​ನ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾಗೆ ಗಣಿನಾಡು ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ತೋರಣಗಲ್ಲಿನ ಜಿಂದಾಲ್ ಸಮೂಹ ಸಂಸ್ಥೆಯೇ ಅಖಾಡ ಆಗಿತ್ತಂತೆ.

jsw steels sports trained in niraj chopra
ಸ್ವರ್ಣ'ಬಾಹು' ನೀರಜ್​ ಚೋಪ್ರಾ

ಹರಿಯಾಣ ಮೂಲದ ನೀರಜ್ ಚೋಪ್ರಾ, ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ತೋರಣಗಲ್ಲಿನ ಜಿಂದಾಲ್ ಸಮೂಹ ಸಂಸ್ಥೆಯಲ್ಲಿರುವ ಇನ್ಸ್‌ಪೈಯರ್ ಇನ್ಸ್‌ಟಿಟ್ಯೂಟ್ ಆಫ್ ಸ್ಪೋರ್ಟ್ಸ್‌ನಲ್ಲಿ ತರಬೇತಿ ಪಡೆದಿದ್ದಾರೆ. ಜಿಂದಾಲ್ ಸಮೂಹ ಸಂಸ್ಥೆಯಲ್ಲಿ ತರಬೇತಿ ಪಡೆಯುವ ವೇಳೆ ಫ್ರಾನ್ಸ್ ದೇಶದ ಮೂಲದ ಆಂಥೋನಿ ಎಂಬುವರು ನೀರಜ್​ಗೆ ಸೂಕ್ತ ತರಬೇತಿ ನೀಡುತ್ತಿದ್ದರಂತೆ.

ಹರಿಯಾಣದ ಪಾಣಿಪತ್​ನ ಖಾಂದ್ರ ಗ್ರಾಮದ 23 ವರ್ಷದ ನೀರಜ್ ಚೋಪ್ರಾ ಜಾವೆಲಿನ್ ಥ್ರೋ ತರಬೇತಿಗಾಗಿ 2017ನೇ ಇಸವಿಯಲ್ಲೇ ಇಲ್ಲಿಗೆ ಬಂದಿದ್ದರಂತೆ. 2017ರಿಂದ 2020ರವರೆಗೆ ಕೂಡ ನೀರಜ್ ಇಲ್ಲಿಯೇ ತರಬೇತಿ ಪಡೆದಿದ್ದಾರೆ. ಅಲ್ಲದೇ, ದೇಶದ ನಾನಾ ಕಡೆಗಳಲ್ಲಿ ನಡೆದ ಜಾವೆಲಿನ್ ಥ್ರೋ ತರಬೇತಿ ಶಿಬಿರಗಳಲ್ಲಿ ಪಾಲ್ಗೊಂಡಿದ್ದರು.

2017ನೇ ಇಸವಿಯಲ್ಲಿ ಪ್ರಾರಂಭಗೊಂಡ ಇನ್ಸ್‌ಪೈಯರ್ ಇನ್ಸ್‌ಟಿಟ್ಯೂಟ್ ಆಫ್ ಸ್ಪೋರ್ಟ್ಸ್ ವತಿಯಿಂದ ಒಲಿಂಪಿಕ್ಸ್​ನಲ್ಲಿ ಪಾಲ್ಗೊಳ್ಳುವ ನಾನಾ ರಾಜ್ಯಗಳ 170 ಕ್ರೀಡಾಪಟುಗಳಿಗೆ ತರಬೇತಿ ನೀಡಲಾಗಿತ್ತು. ಜಿಂದಾಲ್ ಸಮೂಹ ಸಂಸ್ಥೆಯ ಪ್ರಾಯೋಜಕತ್ವದಲ್ಲಿ ಪಟಿಯಾಲದಲ್ಲಿರುವ ಸ್ಪೋರ್ಟ್ಸ್‌ ಅಥಾರಿಟಿ ಆಫ್ ಇಂಡಿಯಾ ಹಾಗೂ ಯುರೋಪ್​ನಲ್ಲಿ ಕೂಡ ಕೆಲ ದಿನಗಳಕಾಲ ಈ ನೀರಜ್ ಚೋಪ್ರಾ ಅಭ್ಯಾಸ ಮಾಡಿದ್ದರಂತೆ.

ದೇಶ-ವಿದೇಶಗಳ ತರಬೇತಿದಾರರು ಇನ್ಸ್‌ಪೈಯರ್ ಇನ್ಸ್‌ಟಿಟ್ಯೂಟ್ ಆಫ್ ಸ್ಪೋರ್ಟ್ಸ್‌ನ ಕ್ರೀಡಾಪಟುಗಳಿಗೆ ತರಬೇತಿ ನೀಡುತ್ತಿದ್ದರು. ಈ ಇನ್ಸ್‌ಟಿ​ಟ್ಯೂಟ್​ನಲ್ಲೇ ಚಿನ್ನದ ಪದಕ ಗೆದ್ದ ಹುಡುಗ ನೀರಜ್ ಚೋಪ್ರಾ ಕೂಡ ಜಾವೆಲಿನ್ ಎಸೆತ ತರಬೇತಿ ಪಡೆದಿದ್ದರು ಎಂಬುದು ವಿಶೇಷ.

ಬಳ್ಳಾರಿ ಜಿಲ್ಲೆಯಲ್ಲಿ ಮೂರು ವರ್ಷಗಳ ಕಾಲ ತರಬೇತಿ ಪಡೆದ ನೀರಜ್ ಟೋಕಿಯೊ ಒಲಿಪಿಂಕ್ಸ್​ನಲ್ಲಿ ಚಿನ್ನದ ಪದಕ ತರುವ ಮೂಲಕ ಕ್ರೀಡಾಪ್ರೇಮಿಗಳ ಮನಗೆದ್ದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.