ಬಳ್ಳಾರಿ : ಕೂಡ್ಲಿಗಿ ತಾಲೂಕಿನ ಗುಂಡುಮುಣಗು ಗ್ರಾಮದ ಹೊರವಲಯದ ಹೊಲದಲ್ಲಿ ಕರಡಿಯೊಂದು ಪ್ರತ್ಯಕ್ಷವಾಗಿದೆ.
ಹಗಲು ಹೊತ್ತಲ್ಲೇ ಜಮೀನಿಗೆ ಕರಡಿ ಲಗ್ಗೆಯಿಟ್ಟಿದ್ದನ್ನು ನೋಡಿ ರೈತರು ಭಯಭೀತರಾಗಿದ್ದು, ಕರಡಿಯನ್ನು ಕಾಡಿಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ಆಗಾಗ ವನ್ಯ ಪ್ರಾಣಿಗಳು ರೈತರ ಜಮೀನಿಗೆ ದಾಳಿಯಿಡುತ್ತಿದ್ದು, ರೈತರು ಹೊಲದಲ್ಲಿ ಕೆಲಸ ಮಾಡಲು ಹೆದರುವಂತಾಗಿದೆ.