ಹೊಸಪೇಟೆ: ವಿಜಯನಗರ ಕಾಲದ ಪಾರಂಪರಿಕ ಬಟ್ರಹಳ್ಳಿ ಆಂಜನೇಯನ ದೇವರ ಕಾರ್ತಿಕೋತ್ಸವವು ವಿಜೃಂಭಣೆಯಿಂದ ನಡೆಯಿತು.
ಬಟ್ರಹಳ್ಳಿ ಆಂಜನೇಯ ದೇವರ ಜಾತ್ರೆ ಮತ್ತು ಕಾರ್ತಿಕೋತ್ಸವ ಕಾರ್ಯಕ್ರಮವು ಇಂದು ಅದ್ಧೂರಿಯಾಗಿ ನಡೆದಿದ್ದು, ನೂರಾರೂ ಭಕ್ತರು ಸೇರಿದಂತೆ ಯುವಕರು, ಮಕ್ಕಳು ಜಾತ್ರೆಯಲ್ಲಿ ಸಂಭ್ರಮಿಸಿದರು. ಇನ್ನು ಈ ಜಾತ್ರೆಯ ಕುರಿತು ದೇವಸ್ಥಾನದ ಕಾರ್ಯದರ್ಶಿ ಜಂಬಣ್ಣ ಮಾಹಿತಿ ಹಂಚಿಕೊಂಡರು.
ಈ ಕಾರ್ತಿಕೋತ್ಸವ ಕಾರ್ಯಕ್ರಮವನ್ನು ವಿಜಯನಗರ ಸಾಮ್ರಾಜ್ಯದ ಕಾಲದಿಂದಲೂ ಪಾರಂಪರಿಕವಾಗಿ ಜಾತ್ರೆಯನ್ನು ಮಾಡುತ್ತ ಬಂದಿದ್ದಾರೆ. ಕಾರ್ತಿಕ ಮಾಸದಲ್ಲಿ ಎಲ್ಲಾ ಗ್ರಾಮಗಳಲ್ಲಿ ಆಂಜನೇಯನ ಜಾತ್ರೆಯನ್ನು ಮಾಡಲಾಗುತ್ತದೆ. ಆದ್ರೆ ಬಟ್ರಹಳ್ಳಿಯ ಆಂಜನೇಯ ದೇವರು ವಿಶೇತೆಯನ್ನು ಹೊಂದಿದೆ. ಈ ದೇವರೆದುರು ಹರಕೆ ಕಟ್ಟಿಕೊಂಡರೆ ಶೀಘ್ರವಾಗಿ ಈಡೇರುತ್ತವೆ ಅನ್ನೋದು ಭಕ್ತರ ನಂಬಿಕೆ.