ಹೊಸಪೇಟೆ: ಆಟೋ ಚಾಲಕರಿಗೆ ವಾಹನಗಳ ಮೇಲಿನ ತೆರಿಗೆಯನ್ನು ಕಡಿಮೆ ಮಾಡಬೇಕು ಜೊತೆಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿ ಕೊಡಬೇಕೆಂದು ಸಿಐಟಿಯು ಸಂಘದಿಂದ ಒತ್ತಾಯಿಸಲಾಯಿತು.
ಹೊಸಪೇಟೆ ತಾಲೂಕು ಸಮಾವೇಶದಲ್ಲಿ ಸಿಐಟಿಯು ಸಂಘದ ತಾಲೂಕು ಅಧ್ಯಕ್ಷ ಬಾಸ್ಕರ್ ರಾವ್ ಮಾತನಾಡಿ, ಆಟೋ ಚಾಲಕರಿಗೆ ಸರ್ಕಾರದಿಂದ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕು. ಅವರ ಮಕ್ಕಳಿಗೆ ಶಿಕ್ಷಣ ಹಾಗೂ ವಿದ್ಯಾರ್ಥಿ ವೇತನವನ್ನು ನೀಡಬೇಕು. ಮನೆಗಳನ್ನು ಕಟ್ಟಿಸಿಕೊಡಬೇಕು. ಆರೋಗ್ಯಕ್ಕೆ ಸಂಬಂಧಿಸಿದ ಆರೋಗ್ಯ ಕಾರ್ಡ್ಗಳನ್ನು ನೀಡಬೇಕು ಎಂದರು. ಜೊತೆಗೆ, ನಗರದಲ್ಲಿರುವ ಆಟೋ ಚಾಲಕರು ಒಟ್ಟಾಗಿ ಕೆಲಸವನ್ನು ಮಾಡಬೇಕು. ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಅಭಿವೃದ್ಧಿಯನ್ನು ಹೊಂದಬೇಕು ಎಂದು ತಿಳಿಸಿದರು.
ಆಟೋ ಚಾಲಕರ ಮನೆಯ ಪರಿಸ್ಥಿತಿ ಬಹಳ ಚಿಂತಾಜನಿಕವಾಗಿದೆ. ಆದರೆ ಚಾಲಕರು ತಮ್ಮ ದುಡಿಮೆಯಲ್ಲಿ ಬಂದಿರುವ ಹಣವನ್ನು ಉಳಿತಾಯ ಮಾಡಬೇಕಿದ್ದು, ಜೀವನ ನಡೆಸುವುದು ಕಷ್ಟಕರ ಎಂದರು. ಎಲ್ಲಾ ಚಾಲಕರು ಒಗ್ಗಟ್ಟಿನಿಂದ ಕೂಡಿ ತಮ್ಮ ಬೇಡಿಕೆಗಳನ್ನು ಸರ್ಕಾರದ ಮುಂದಿಡಬೇಕಿದೆ ಎಂದರು.