ಗುರುಮಠಕಲ್: ರಾಜಸ್ಥಾನದ ಉದಯಪುರದಲ್ಲಿ ಕನ್ನಯ್ಯ ಲಾಲ್ ಹತ್ಯೆ ಖಂಡಿಸಿ ಗುರುಮಠಕಲ್ ಪಟ್ಟಣ ಬಂದ್ ನಡೆಸಿ, ಪ್ರತಿಭಟನೆ ನಡೆಯಿತು. ವ್ಯಾಪಾರಸ್ಥರು ಅಂಗಡಿಗಳನ್ನು ಸ್ವಯಂಪ್ರೇರಿತವಾಗಿ ಬಂದ್ ಮಾಡಿ ಹೋರಾಟಕ್ಕೆ ಬೆಂಬಲ ಸೂಚಿಸಿದರು.
ಮೇರಾ ಭಾರತ್ ಮಹಾನ್ ವೇದಿಕೆ ಹಾಗೂ ವಿವಿಧ ಸಂಘಟನೆಯ ಸದಸ್ಯರು ಪಟ್ಟಣದ ಸಿಹಿ ನೀರಿನ ಬಾವಿಯಿಂದ ತಹಶೀಲ್ದಾರ್ ಕಚೇರಿವರೆಗೆ ಪ್ರತಿಭಟನೆ ಮೆರವಣಿಗೆ ನಡೆಸಿದರು. ಅಂಬಿಗರ ಚೌಡಯ್ಯ ವೃತ್ತದಲ್ಲಿ ಹೋರಾಟಗಾರರು ಕನ್ನಯ್ಯ ಅವರನ್ನು ಹತ್ಯೆ ಮಾಡಿದ್ದ ಆರೋಪಿಗಳನ್ನು ಗಲ್ಲಿಗೇರಿಸಬೇಕೆಂದು ಆಗ್ರಹಿಸಿದರು.
ಬಳ್ಳಾರಿ: ಕನ್ನಯ್ಯ ಲಾಲ್ ಹತ್ಯೆ ಖಂಡಿಸಿ ದೇಶ ಭಕ್ತಿ ನಾಗರಿಕ ವೇದಿಕೆ ಜು.4 ಸೋಮವಾರ ಬಳ್ಳಾರಿ ನಗರ ಬಂದ್‌ಗೆ ಕರೆ ನೀಡಿದೆ.
ಇದನ್ನೂ ಓದಿ: ಖಾಸಗಿ-ಸಾರಿಗೆ ಸಂಸ್ಥೆ ಬಸ್ ಮಧ್ಯೆ ಡಿಕ್ಕಿ: 35 ಕ್ಕೂ ಹೆಚ್ಚು ಜನರಿಗೆ ಗಾಯ