ಬಳ್ಳಾರಿ: ಕನ್ನಡ ಸಿನಿಮಾ ರಂಗದ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರ ವಿವಾಹ ಮಹೋತ್ಸವದ ನಿಮಿತ್ತ ಗಣಿನಗರಿಯ ಅಭಿಮಾನಿಯೊಬ್ಬರು ವಯೋವೃದ್ಧರಿಗೆ ಹಣ್ಣು, ಹಂಪಲು ವಿತರಿಸಿ ಸಂಭ್ರಮಿಸಿದರು.
ತಾಲೂಕಿನ ಸಂಗನಕಲ್ಲು ಗ್ರಾಮ ಹೊರವಲಯದ ಆದರ್ಶ ವೃದ್ಧಾಶ್ರಮದಲ್ಲಿಂದು ನೆಲೆಸಿದ್ದ ನೂರಾರು ವೃದ್ಧರಿಗೆ, ಧ್ರುವ ಸರ್ಜಾ ಅಭಿಮಾನಿ ಹಾಗೂ ಎಂ.ಜಿ. ಕನಕ ಅವರ ನೇತೃತ್ವದ ಸದಸ್ಯರು ಬ್ರೆಡ್, ಬಾಳೆಹಣ್ಣು, ಬಿಸ್ಕೆಟ್ ಹಾಗೂ ಭೋಜನ ವ್ಯವಸ್ಥೆ ಮಾಡುವ ಮೂಲಕ ಸಂಭ್ರಮಿಸಿದ್ದಾರೆ.