ETV Bharat / state

ಹಚ್ಚೊಳ್ಳಿ ಗ್ರಾಮಕ್ಕೆ ಭೇಟಿ ನೀಡುವಂತೆ ಪಟ್ಟುಹಿಡಿದ ಶಾಸಕರು... ಡಿಸಿ ಆದೇಶದಂತೆ ನಡವಿ ಗ್ರಾಮಕ್ಕೆ ಹೋದ ಅಧಿಕಾರಿಗಳು

author img

By

Published : Dec 19, 2019, 7:14 PM IST

ಸಿರುಗುಪ್ಪ ತಾಲೂಕಿನ ನೆರೆ ಗ್ರಾಮವಾದ ನಡವಿಗೆ ಅಧಿಕಾರಿಗಳು ಭೇಟಿ ನೀಡುತ್ತಿದ್ದ ವೇಳೆ ಶಾಸಕ ಎಂ.ಎಸ್.ಸೋಮಲಿಂಗಪ್ಪ ವಿರೋಧ ವ್ಯಕ್ತಪಡಿಸಿದರು.

ಶಾಸಕನ ವಿರೋಧ
ಶಾಸಕನ ವಿರೋಧ

ಬಳ್ಳಾರಿ: ಜಿಲ್ಲೆಯ ಸಿರುಗುಪ್ಪ ತಾಲೂಕಿನ ನಾನಾ ಗ್ರಾಮಗಳಲ್ಲಿನ ನೆರೆ ಸಂತ್ರಸ್ತರ ಪುನರ್ ವಸತಿ ಕೇಂದ್ರಗಳನ್ನ ಹೊರತುಪಡಿಸಿ, ನಡವಿ ಗ್ರಾಮಕ್ಕೆ ಮಾತ್ರ ಭೇಟಿ ನೀಡುವ ಪಿಆರ್​ಐ ಕಮಿಟಿಗೆ ಸಿರುಗುಪ್ಪ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಎಸ್.ಸೋಮಲಿಂಗಪ್ಪ ವಿರೋಧ ವ್ಯಕ್ತಪಡಿಸಿದ್ದಾರೆ.

ಅಧಿಕಾರಿಗಳ ಆಗಮನಕ್ಕೆ ಶಾಸಕರ ವಿರೋಧ

ನಡಿವಿ ಗ್ರಾಮದಲ್ಲಿ ವಸತಿ ಸೌಲಭ್ಯ ಸುಸಜ್ಜಿತವಾಗಿದೆ. ಅದನ್ನು ಆಯ್ಕೆ ಮಾಡಿಕೊಂಡರೆ ಹೇಗೆ. ಹಚ್ಚೊಳ್ಳಿ ಗ್ರಾಮದಲ್ಲಿ ಬಹುತೇಕ ಕಡೆಗಳಲ್ಲಿ ಮನೆಗಳೇ ನಿರ್ಮಾಣವಾಗಿಲ್ಲ. ಈಗಿರುವ ಮನೆಗಳಲ್ಲಿ ಭಾಗಶಃ ಕುಸಿದು ಬಿದ್ದಿವೆ. ಹೀಗಾಗಿ, ಹಚ್ಚೊಳ್ಳಿ ಗ್ರಾಮಕ್ಕೆ ಭೇಟಿ ನೀಡಲೇಬೇಕೆಂದು ಪಟ್ಟು ಹಿಡಿದ್ರು. ಕೊನೆಗೂ ಜಿಲ್ಲಾಧಿಕಾರಿ ನಕುಲ್ ಅವರ ಅಣತಿಯಂತೆ ಸಮಿತಿ ಅಧ್ಯಕ್ಷರು ನಡೆದುಕೊಂಡು, ನಡಿವಿ ಗ್ರಾಮಕ್ಕೆ ಭೇಟಿ ನೀಡಿ, ಶಾಸಕ ಸೋಮಲಿಂಗಪ್ಪನವ್ರ ಕೆಂಗಣ್ಣಿಗೆ ಗುರಿಯಾದ್ರು.

Intro:ಸೀಮಿತ ನೆರೆ ಸಂತ್ರಸ್ಥರ ಪುನರ್ ವಸತಿ ಕೇಂದ್ರಕ್ಕೆ ಪಿಆರ್ ಐ ಕಮಿಟಿ ಭೇಟಿಗೆ ಶಾಸಕರ ವಿರೋಧ!
ಬಳ್ಳಾರಿ: ಜಿಲ್ಲೆಯ ಸಿರುಗುಪ್ಪ ತಾಲೂಕಿನ ನಾನಾ ಗ್ರಾಮಗಳಲ್ಲಿ ಎದುರಾದ ನೆರೆ ಸಂತ್ರಸ್ಥರ ಪುನರ್ ವಸತಿ ಕೇಂದ್ರಗಳನ್ನ ಹೊರತುಪಡಿಸಿ ಆಯ್ದ ನಡವಿ ಗ್ರಾಮಕ್ಕೆ ಭೇಟಿ ನೀಡುವ ಪಿಆರ್ ಐ ಕಮಿಟಿಗೆ ಸಿರುಗುಪ್ಪ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಎಸ್.ಸೋಮಲಿಂಗಪ್ಪನವ್ರು ವಿರೋಧ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ವಿಧಾನ ಮಂಡಲದ ಸ್ಥಳೀಯ ಸಂಸ್ಥೆಗಳ
ಮತ್ತು ಪಂಚಾಯತ್ ರಾಜ್ ಸಂಸ್ಥೆಗಳ ಸಮಿತಿ ಆರೋಗ್ಯ ಜ್ಞಾನೇಂದ್ರ ನೇತೃತ್ವದಲ್ಲಿ ಶಾಸಕರಾದ ಕರುಣಾಕರರೆಡ್ಡಿ, ಸಂಜೀವ‌ ಮಠಂದು, ಸಿದ್ದು ಸವದಿ,‌ ಪ್ರಾಣೇಶ, ಅನಿಲ್ ಚಿಕ್ಕಮಾದು, ನಾಗನಗೌಡರ ಎದುರೇ ಸೋಮಲಿಂಗಪ್ಪ ಅವರು ಸಮಿತಿಯ ಅಧ್ಯಕ್ಷರನ್ನು ತರಾಟೆಗೆ ತೆಗೆದುಕೊಂಡ್ರು.

Body:ನಡಿವಿ ಗ್ರಾಮದಲ್ಲಿ ವಸತಿ ಸೌಲಭ್ಯ ಸುಸಜ್ಜಿತವಾಗಿದೆ.
ಅದನ್ನು ಆಯ್ಕೆ ಮಾಡಿಕೊಂಡ್ರೆ ಹ್ಯಾಂಗೆ. ಹಚ್ಚೊಳ್ಳಿ ಗ್ರಾಮ
ದಲ್ಲಿ ಬಹುತೇಕ ಕಡೆಗಳಲ್ಲಿ ಮನೆಗಳೇ ನಿರ್ಮಾಣವಾಗಿಲ್ಲ. ಈಗಿರುವ ಮನೆಗಳಲ್ಲಿ ಭಾಗಶಃ ಕುಸಿದು ಬಿದ್ದಿವೆ. ಹೀಗಾಗಿ,
ಹಚ್ಚೊಳ್ಳಿ ಗ್ರಾಮಕ್ಕೆ ಭೇಟಿ ನೀಡಲೇಬೇಕೆಂದು ಪಟ್ಟು ಹಿಡಿದ್ರು. ಆಗ ಸಮಿತಿಯ ಅಧ್ಯಕ್ಷರು, ಹೆಲಿಕಾಪ್ಟರ್ ನಿಂದ ಬೇರೊಂದು ಊರಿಗೆ ಹೋಗ್ಬೇಕು. ಆಗಾಗಿ, ನಾನು ನಡವಿ ಗ್ರಾಮಕ್ಕೆ ಭೇಟಿ ನೀಡುವೆ ಎಂದ್ರು. ನಿಮಗೆ ಹ್ಯಾಗ ಬೇಕಾದ್ರೂ ವರದಿಯನ್ನು ರೆಡಿ‌ಮಾಡಿಕೊಡುವೆ ಆಯ್ತಾ ಅಂದ್ರು.
ಅದಕ್ಕೆ ಶಾಸಕ ಸೋಮಲಿಂಗಪ್ಪನವ್ರು, ದೆಹಲಿಗೆ ಹೋಗ್ಬೇಕಾ ಅಂದ್ರು. ಛೇ...ಛೇ.. ನಾನು ಯಾಕ ಹೋಗಲಿ ದೆಹಲಿಗೆ ಅಂತಾ ಅಂದ್ರು. ಹಚ್ಚೊಳ್ಳಿ ಗ್ರಾಮದಲ್ಲಿ ಬಹಳಷ್ಟು ವಸತಿ ನಿಲಯಗಳು ನಿರ್ಮಾಣ ಮಾಡಲೇ ಇಲ್ಲ ಎಂದ್ರು.
ಕೊನೆಗೂ ಜಿಲ್ಲಾಧಿಕಾರಿ ನಕುಲ್ ಅವರ ಅಣತಿಯಂತೆ
ಸಮಿತಿ ಅಧ್ಯಕ್ಷರು ನಡೆದುಕೊಂಡು, ನಡಿವಿ ಗ್ರಾಮಕ್ಕೆ ಒಲ್ಲದ ಮನಸ್ಸಿನಿಂದ ಭೇಟಿ ನೀಡಿ, ಶಾಸಕ ಸೋಮಲಿಂಗಪ್ಪನವ್ರ ಕೆಂಗಣ್ಣಿಗೆ ಗುರಿಯಾದ್ರು.

ಬೈಟ್: ಎಂ.ಎಸ್.ಸೋಮಲಿಂಗಪ್ಪ, ಸಿರುಗುಪ್ಪ ಶಾಸಕರು.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_3_PRI_COMMITTEE_VISIT_MLA_OPPOSED_VSL_7203310
ETV Bharat Logo

Copyright © 2024 Ushodaya Enterprises Pvt. Ltd., All Rights Reserved.